# is/Icelandic.xml.gz
# kn/Kannada.xml.gz


(src)="b.GEN.1.1.1"> Í upphafi skapaði Guð himin og jörð .
(trg)="b.GEN.1.1.1"> ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು .

(src)="b.GEN.1.2.1"> Jörðin var þá auð og tóm , og myrkur grúfði yfir djúpinu , og andi Guðs sveif yfir vötnunum .
(trg)="b.GEN.1.2.1"> ಭೂಮಿ ಯು ನಿರಾಕಾರವಾಗಿಯೂ ಶೂನ್ಯವಾಗಿಯೂ ಇತ್ತು ; ಅಗಾಧದ ಮೇಲೆ ಕತ್ತಲೆ ಇತ್ತು . ದೇವರ ಆತ್ಮನು ನೀರುಗಳ ಮೇಲೆ ಚಲಿಸುತ್ತಿದ್ದನು .

(src)="b.GEN.1.3.1"> Guð sagði : " Verði ljós ! "
(src)="b.GEN.1.3.2"> Og það varð ljós .
(trg)="b.GEN.1.3.1"> ಆಗ ದೇವರು--ಬೆಳಕಾಗಲಿ ಅನ್ನಲು ಬೆಳಕಾ ಯಿತು .

(src)="b.GEN.1.4.1"> Guð sá , að ljósið var gott , og Guð greindi ljósið frá myrkrinu .
(trg)="b.GEN.1.4.1"> ದೇವರು ಬೆಳಕನ್ನು ಒಳ್ಳೆಯದೆಂದು ನೋಡಿದನು ; ದೇವರು ಬೆಳಕನ್ನು ಕತ್ತಲೆಯಿಂದ ಬೇರೆ ಮಾಡಿದನು .

(src)="b.GEN.1.5.1"> Og Guð kallaði ljósið dag , en myrkrið kallaði hann nótt .
(src)="b.GEN.1.5.2"> Það varð kveld og það varð morgunn , hinn fyrsti dagur .
(trg)="b.GEN.1.5.1"> ದೇವರು ಬೆಳಕಿಗೆ ಹಗ ಲೆಂದೂ ಕತ್ತಲೆಗೆ ರಾತ್ರಿಯೆಂದೂ ಕರೆದನು . ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೊದಲನೆಯ ದಿನವಾಯಿತು .

(src)="b.GEN.1.6.1"> Guð sagði : " Verði festing milli vatnanna , og hún greini vötn frá vötnum . "
(trg)="b.GEN.1.6.1"> ಇದಲ್ಲದೆ ದೇವರು--ನೀರುಗಳ ನಡುವೆ ವಿಶಾಲ ವಿರಲಿ ಮತ್ತು ಅದು ನೀರುಗಳಿಂದ ನೀರುಗಳನ್ನು ಬೇರೆ ಮಾಡಲಿ ಅಂದನು .

(src)="b.GEN.1.7.1"> Þá gjörði Guð festinguna og greindi vötnin , sem voru undir festingunni , frá þeim vötnum , sem voru yfir henni .
(src)="b.GEN.1.7.2"> Og það varð svo .
(trg)="b.GEN.1.7.1"> ದೇವರು ವಿಶಾಲವನ್ನು ಮಾಡಿ ವಿಶಾಲದ ಕೆಳಗಿದ್ದ ನೀರುಗಳನ್ನು ವಿಶಾಲದ ಮೇಲಿದ್ದ ನೀರುಗಳಿಂದ ಬೇರೆ ಮಾಡಿದನು . ಅದು ಹಾಗೆಯೇ ಆಯಿತು .

(src)="b.GEN.1.8.1"> Og Guð kallaði festinguna himin .
(src)="b.GEN.1.8.2"> Það varð kveld og það varð morgunn , hinn annar dagur .
(trg)="b.GEN.1.8.1"> ದೇವರು ವಿಶಾಲಕ್ಕೆ ಆಕಾಶ ವೆಂದು ಕರೆದನು . ಹೀಗೆ ಸಾಯಂಕಾಲವೂ ಪ್ರಾತಃ ಕಾಲವೂ ಆಗಿ ಎರಡನೆಯ ದಿನವಾಯಿತು .

(src)="b.GEN.1.9.1"> Guð sagði : " Safnist vötnin undir himninum í einn stað , svo að þurrlendið sjáist . "
(src)="b.GEN.1.9.2"> Og það varð svo .
(trg)="b.GEN.1.9.1"> ಆಗ ದೇವರು--ಆಕಾಶದ ಕೆಳಗಿರುವ ನೀರುಗಳು ಒಂದು ಸ್ಥಳದಲ್ಲಿ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ ಅಂದನು . ಅದು ಹಾಗೆಯೇ ಆಯಿತು .

(src)="b.GEN.1.10.1"> Guð kallaði þurrlendið jörð , en safn vatnanna kallaði hann sjó .
(src)="b.GEN.1.10.2"> Og Guð sá , að það var gott .
(trg)="b.GEN.1.10.1"> ದೇವರು ಒಣನೆಲಕ್ಕೆ ಭೂಮಿಯೆಂದೂ ಒಟ್ಟು ಗೂಡಿದ ನೀರುಗಳಿಗೆ ಸಮುದ್ರಗಳೆಂದೂ ಕರೆದನು . ದೇವರು ಅದನ್ನು ಒಳ್ಳೆಯದೆಂದು ನೋಡಿದನು .

(src)="b.GEN.1.11.1"> Guð sagði : " Láti jörðin af sér spretta græn grös , sáðjurtir og aldintré , sem hvert beri ávöxt eftir sinni tegund með sæði í á jörðinni . "
(src)="b.GEN.1.11.2"> Og það varð svo .
(trg)="b.GEN.1.11.1"> ತರುವಾಯ ದೇವರು--ಭೂಮಿಯು ಹುಲ್ಲನ್ನೂ ಬೀಜಕೊಡುವ ಪಲ್ಯವನ್ನೂ ತನ್ನೊಳಗೆ ಬೀಜವಿದ್ದು ತನ್ನ ಜಾತಿಯ ಪ್ರಕಾರ ಫಲಫಲಿಸುವ ಹಣ್ಣಿನ ಮರವನ್ನೂ ಭೂಮಿಯ ಮೇಲೆ ಮೊಳೆಯಿಸಲಿ ಎಂದು ಹೇಳಿದನು ; ಅದು ಹಾಗೆಯೇ ಆಯಿತು .

(src)="b.GEN.1.12.1"> Jörðin lét af sér spretta græn grös , jurtir með sæði í , hverja eftir sinni tegund , og aldintré með sæði í sér , hvert eftir sinni tegund .
(src)="b.GEN.1.12.2"> Og Guð sá , að það var gott .
(trg)="b.GEN.1.12.1"> ಭೂಮಿಯು ಹುಲ್ಲನ್ನೂ ತನ್ನ ಜಾತಿಯ ಪ್ರಕಾರ ಬೀಜಕೊಡುವ ಪಲ್ಯವನ್ನೂ ತನ್ನ ಜಾತಿಯ ಪ್ರಕಾರ ತನ್ನೊಳಗೆ ಬೀಜವಿರುವ ಹಣ್ಣಿನ ಮರವನ್ನೂ ಮೊಳೆ ಯಿಸಿತು . ದೇವರು ಅದನ್ನು ಒಳ್ಳೆಯದೆಂದು ನೋಡಿ ದನು .

(src)="b.GEN.1.13.1"> Það varð kveld og það varð morgunn , hinn þriðji dagur .
(trg)="b.GEN.1.13.1"> ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೂರನೆಯ ದಿನವಾಯಿತು .

(src)="b.GEN.1.14.1"> Guð sagði : " Verði ljós á festingu himinsins , að þau greini dag frá nóttu og séu til tákns og til að marka tíðir , daga og ár .
(trg)="b.GEN.1.14.1"> ದೇವರು--ಹಗಲನ್ನು ರಾತ್ರಿಯಿಂದ ಬೇರೆ ಮಾಡುವದಕ್ಕೆ ಆಕಾಶದ ವಿಶಾಲದಲ್ಲಿ ಬೆಳಕುಗಳಿರಲಿ ; ಅವು ಹಗಲಿರುಳುಗಳನ್ನೂ ಸಮಯ ದಿನ ಸಂವತ್ಸರ ಗಳನ್ನೂ ತೋರಿಸುವದಕ್ಕೆ ಗುರುತುಗಳಾಗಿರಲಿ ;

(src)="b.GEN.1.15.1"> Og þau séu ljós á festingu himinsins til að lýsa jörðina . "
(src)="b.GEN.1.15.2"> Og það varð svo .
(trg)="b.GEN.1.15.1"> ಅವು ಭೂಮಿಯ ಮೇಲೆ ಬೆಳಕುಕೊಡುವಂತೆ ಆಕಾಶದ ವಿಶಾಲದಲ್ಲಿ ಬೆಳಕುಗಳಾಗಿರಲಿ ಅಂದನು . ಅದು ಹಾಗೆಯೇ ಆಯಿತು .

(src)="b.GEN.1.16.1"> Guð gjörði tvö stóru ljósin : hið stærra ljósið til að ráða degi og hið minna ljósið til að ráða nóttu , svo og stjörnurnar .
(trg)="b.GEN.1.16.1"> ದೇವರು ಎರಡು ದೊಡ್ಡ ಬೆಳಕುಗಳನ್ನು ಮಾಡಿದನು ; ದೊಡ್ಡ ಬೆಳಕು ಹಗಲನ್ನಾಳುವದಕ್ಕೂ ಚಿಕ್ಕ ಬೆಳಕು ರಾತ್ರಿಯನ್ನಾಳು ವದಕ್ಕೂ ಮಾಡಿದ್ದಲ್ಲದೆ ನಕ್ಷತ್ರಗಳನ್ನು ಸಹ ಮಾಡಿ ದನು .

(src)="b.GEN.1.17.1"> Og Guð setti þau á festingu himinsins , að þau skyldu lýsa jörðinni
(trg)="b.GEN.1.17.1"> ಭೂಮಿಯ ಮೇಲೆ ಬೆಳಕುಕೊಡುವದಕ್ಕಾಗಿ ದೇವರು ಆಕಾಶದ ವಿಶಾಲದಲ್ಲಿ ಅವುಗಳನ್ನು ಇರಿಸಿದನು .

(src)="b.GEN.1.18.1"> og ráða degi og nóttu og greina sundur ljós og myrkur .
(src)="b.GEN.1.18.2"> Og Guð sá , að það var gott .
(trg)="b.GEN.1.18.1"> ಇದಲ್ಲದೆ ಅವು ಹಗಲನ್ನು ಮತ್ತು ರಾತ್ರಿಯನ್ನು ಆಳುವದಕ್ಕೂ ಬೆಳಕನ್ನು ಕತ್ತಲೆಯಿಂದ ಬೇರೆ ಮಾಡುವದಕ್ಕೂ ಇರಿಸಿದನು . ದೇವರು ಅದನ್ನು ಒಳ್ಳೆಯದೆಂದು ನೋಡಿದನು .

(src)="b.GEN.1.19.1"> Það varð kveld og það varð morgunn , hinn fjórði dagur .
(trg)="b.GEN.1.19.1"> ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ನಾಲ್ಕನೆಯ ದಿನವಾಯಿತು .

(src)="b.GEN.1.20.1"> Guð sagði : " Vötnin verði kvik af lifandi skepnum , og fuglar fljúgi yfir jörðina undir festingu himinsins . "
(trg)="b.GEN.1.20.1"> ದೇವರು--ಚಲಿಸುವ ಜೀವಜಂತುಗಳನ್ನು ನೀರು ಗಳು ಸಮೃದ್ಧಿಯಾಗಿ ಬರಮಾಡಲಿ ; ಭೂಮಿಯ ಮೇಲೆ ಆಕಾಶದ ವಿಶಾಲದಲ್ಲಿ ಪಕ್ಷಿಗಳು ಹಾರಾಡಲಿ ಅಂದನು .

(src)="b.GEN.1.21.1"> Þá skapaði Guð hin stóru lagardýr og allar hinar lifandi skepnur , sem hrærast og vötnin eru kvik af , eftir þeirra tegund , og alla fleyga fugla eftir þeirra tegund .
(src)="b.GEN.1.21.2"> Og Guð sá , að það var gott .
(trg)="b.GEN.1.21.1"> ಇದಲ್ಲದೆ ತಮ್ಮ ಜಾತಿಯ ಪ್ರಕಾರ ನೀರುಗಳು ಸಮೃದ್ಧಿಯಾಗಿ ಬರಮಾಡಿದ ದೊಡ್ಡ ತಿಮಿಂಗಿಲಗಳನ್ನೂ ಚಲಿಸುವ ಪ್ರತಿಯೊಂದು ಜೀವ ಜಂತುಗಳನ್ನೂ ತನ್ನ ಜಾತಿಗನುಸಾರವಾದ ರೆಕ್ಕೆಗಳಿದ್ದ ಪ್ರತಿಯೊಂದು ಪಕ್ಷಿಯನ್ನೂ ದೇವರು ಸೃಷ್ಟಿಸಿದನು . ದೇವರು ಅದನ್ನು ಒಳ್ಳೆಯದೆಂದು ನೋಡಿದನು .

(src)="b.GEN.1.22.1"> Og Guð blessaði þau og sagði : " Frjóvgist og vaxið og fyllið vötn sjávarins , og fuglum fjölgi á jörðinni . "
(trg)="b.GEN.1.22.1"> ಆಗ ದೇವರು ಅವುಗಳನ್ನು ಆಶೀರ್ವದಿಸಿ-- ಅಭಿವೃದ್ಧಿಯಾಗಿ ಹೆಚ್ಚಿ ಸಮುದ್ರಗಳ ನೀರುಗಳಲ್ಲಿ ತುಂಬಿಕೊಳ್ಳಲಿ ಮತ್ತು ಪಕ್ಷಿಗಳು ಭೂಮಿಯಲ್ಲಿ ಹೆಚ್ಚಲಿ ಅಂದನು .

(src)="b.GEN.1.23.1"> Það varð kveld og það varð morgunn , hinn fimmti dagur .
(trg)="b.GEN.1.23.1"> ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಐದನೆಯ ದಿನವಾಯಿತು .

(src)="b.GEN.1.24.1"> Guð sagði : " Jörðin leiði fram lifandi skepnur , hverja eftir sinni tegund : fénað , skriðkvikindi og villidýr , hvert eftir sinni tegund . "
(src)="b.GEN.1.24.2"> Og það varð svo .
(trg)="b.GEN.1.24.1"> ದೇವರು--ಆಯಾ ಜಾತಿಯ ಜೀವಜಂತುಗಳನ್ನೂ ಪಶುಗಳನ್ನೂ ಹರಿದಾಡುವ ಕ್ರಿಮಿಗಳನ್ನೂ ತನ್ನ ಜಾತಿಗನುಸಾರವಾದ ಭೂಮೃಗಗಳನ್ನೂ ಭೂಮಿಯು ಬರಮಾಡಲಿ ಅಂದನು ; ಅದು ಹಾಗೆಯೇ ಆಯಿತು .

(src)="b.GEN.1.25.1"> Guð gjörði villidýrin , hvert eftir sinni tegund , fénaðinn eftir sinni tegund og alls konar skriðkvikindi jarðarinnar eftir sinni tegund .
(src)="b.GEN.1.25.2"> Og Guð sá , að það var gott .
(trg)="b.GEN.1.25.1"> ದೇವರು ಅದರ ಜಾತಿಗನುಸಾರವಾಗಿ ಭೂಮೃಗಗಳನ್ನೂ ಅವುಗಳ ಜಾತಿಗನುಸಾರವಾಗಿ ಪಶುಗಳನ್ನೂ ತನ್ನ ಜಾತಿಗನುಸಾರವಾಗಿ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದನ್ನೂ ಮಾಡಿದನು . ದೇವರು ಅದನ್ನು ಒಳ್ಳೆಯದೆಂದು ನೋಡಿದನು .

(src)="b.GEN.1.26.1"> Guð sagði : " Vér viljum gjöra manninn eftir vorri mynd , líkan oss , og hann skal drottna yfir fiskum sjávarins og yfir fuglum loftsins og yfir fénaðinum og yfir villidýrunum og yfir öllum skriðkvikindum , sem skríða á jörðinni . "
(trg)="b.GEN.1.26.1"> ತರುವಾಯ ದೇವರು--ನಮ್ಮ ರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯನನ್ನು ಮಾಡೋಣ ; ಅವರು ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯ ಮೇಲೆಯೂ ದೊರೆತನಮಾಡಲಿ ಅಂದನು .

(src)="b.GEN.1.27.1"> Og Guð skapaði manninn eftir sinni mynd , hann skapaði hann eftir Guðs mynd , hann skapaði þau karl og konu .
(trg)="b.GEN.1.27.1"> ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದನು , ದೇವರರೂಪದಲ್ಲಿ ಆತನು ಅವನನ್ನು ಸೃಷ್ಟಿಸಿದನು . ಆತನು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು .

(src)="b.GEN.1.28.1"> Og Guð blessaði þau , og Guð sagði við þau : " Verið frjósöm , margfaldist og uppfyllið jörðina og gjörið ykkur hana undirgefna og drottnið yfir fiskum sjávarins og yfir fuglum loftsins og yfir öllum dýrum , sem hrærast á jörðinni . "
(trg)="b.GEN.1.28.1"> ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿದನು . ದೇವರು--ಅಭಿವೃದ್ಧಿಯಾಗಿ ಹೆಚ್ಚಿ ಭೂಮಿಯನ್ನು ತುಂಬಿಕೊಂಡು ಅದನ್ನು ವಶಮಾಡಿ ಕೊಳ್ಳಿರಿ ; ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಚಲಿಸುವ ಪ್ರತಿಯೊಂದು ಜೀವಿಯ ಮೇಲೆಯೂ ದೊರೆತನಮಾಡಿರಿ ಎಂದು ಅವರಿಗೆ ಹೇಳಿದನು .

(src)="b.GEN.1.29.1"> Og Guð sagði : " Sjá , ég gef ykkur alls konar sáðberandi jurtir á allri jörðinni og alls konar tré , sem bera ávöxtu með sæði í. Það sé ykkur til fæðu .
(trg)="b.GEN.1.29.1"> ದೇವರು--ಇಗೋ , ಸಮಸ್ತ ಭೂಮಿಯ ಮೇಲೆ ಇರುವ ಬೀಜವುಳ್ಳ ಪ್ರತಿಯೊಂದು ಪಲ್ಯವನ್ನೂ ಬೀಜಬಿಡುವ ಪ್ರತಿಯೊಂದು ಹಣ್ಣಿನ ಮರವನ್ನೂ ನಿಮಗೆ ಕೊಟ್ಟಿದ್ದೇನೆ . ಅದು ನಿಮಗೆ ಆಹಾರಕ್ಕಾಗಿ ರುವದು .

(src)="b.GEN.1.30.1"> Og öllum villidýrum og öllum fuglum loftsins og öllum skriðkvikindum á jörðinni , öllu því , sem hefir lifandi sál , gef ég öll grös og jurtir til fæðu . "
(src)="b.GEN.1.30.2"> Og það varð svo .
(trg)="b.GEN.1.30.1"> ಇದಲ್ಲದೆ ನಾನು ಭೂಮಿಯ ಪ್ರತಿ ಯೊಂದು ಮೃಗಕ್ಕೂ ಆಕಾಶದ ಪ್ರತಿಯೊಂದು ಪಕ್ಷಿಗೂ ಭೂಮಿಯ ಮೇಲೆ ಹರಿದಾಡುವ ಜೀವವುಳ್ಳ ಪ್ರತಿ ಯೊಂದಕ್ಕೂ ಹಸುರಾದ ಪ್ರತಿಯೊಂದು ಪಲ್ಯವನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಅಂದನು ; ಅದು ಹಾಗೆಯೇ ಆಯಿತು.ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ ಇಗೋ , ಅದು ಬಹಳ ಒಳ್ಳೆಯದಾಗಿತ್ತು . ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು .

(src)="b.GEN.1.31.1"> Og Guð leit allt , sem hann hafði gjört , og sjá , það var harla gott .
(src)="b.GEN.1.31.2"> Það varð kveld og það varð morgunn , hinn sjötti dagur .
(trg)="b.GEN.1.31.1"> ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ ಇಗೋ , ಅದು ಬಹಳ ಒಳ್ಳೆಯದಾಗಿತ್ತು . ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು .

(src)="b.GEN.10.1.1"> Þetta er ættartala Nóa sona , Sems , Kams og Jafets .
(src)="b.GEN.10.1.2"> Þeim fæddust synir eftir flóðið .
(trg)="b.GEN.10.1.1"> ನೋಹನ ಕುಮಾರರಾದ ಶೇಮ್ ‌ ಹಾಮ್ ‌ ಯೆಫೆತರ ವಂಶಾವಳಿಗಳು ಇವೇ . ಪ್ರಳಯವಾದ ಮೇಲೆ ಅವರಿಗೆ ಮಕ್ಕಳು ಹುಟ್ಟಿದರು .

(src)="b.GEN.10.2.1"> Synir Jafets : Gómer , Magog , Madaí , Javan , Túbal , Mesek og Tíras .
(trg)="b.GEN.10.2.1"> ಯೆಫೆತನ ಕುಮಾರರು ಯಾರಂದರೆ , ಗೋಮೆರ್ ‌ ಮಾಗೋಗ್ ‌ ಮಾದಯ್ ‌ ಯಾವಾನ್ ‌ ತೂಬಲ್ ‌ ಮೇಷೆಕ್ ‌ ತೀರಾಸ್ ‌ ಎಂಬವರು .

(src)="b.GEN.10.3.1"> Og synir Gómers : Askenas , Rífat og Tógarma .
(trg)="b.GEN.10.3.1"> ಗೋಮೆರನ ಕುಮಾರರು ಯಾರಂದರೆ , ಅಷ್ಕೆನಸ್ ‌ ರೀಫತ್ ‌ ತೋಗರ್ಮ ಎಂಬವರು .

(src)="b.GEN.10.4.1"> Og synir Javans : Elísa , Tarsis , Kittar og Ródanítar .
(trg)="b.GEN.10.4.1"> ಯಾವಾನನ ಕುಮಾರರು ಯಾರಂದರೆ , ಎಲೀಷಾ ತಾರ್ಷೀಷ್ ‌ ಕಿತ್ತೀಮ್ ‌ ದೋದಾನಿಮ್ ‌ ಇವರೇ .

(src)="b.GEN.10.5.1"> Út frá þeim kvísluðust þeir , sem byggja eylönd heiðingjanna .
(src)="b.GEN.10.5.2"> Þetta eru synir Jafets eftir löndum þeirra , hver eftir sinni tungu , eftir kynþáttum þeirra og samkvæmt þjóðerni þeirra .
(trg)="b.GEN.10.5.1"> ಇವರು ಜನಾಂಗಗಳ ದ್ವೀಪಗಳಲ್ಲಿ ಅವರವರ ದೇಶಗಳಲ್ಲಿ ಅವರವರ ಭಾಷೆಗಳ ಪ್ರಕಾರ ಅವರವರ ಕುಟುಂಬಗಳ ಪ್ರಕಾರ ಅವರವರ ಜನಾಂಗಗಳಲ್ಲಿ ವಿಭಾಗಿಸಲ್ಪಟ್ಟರು .

(src)="b.GEN.10.6.1"> Synir Kams : Kús , Mísraím , Pút og Kanaan .
(trg)="b.GEN.10.6.1"> ಹಾಮನ ಕುಮಾರರು ಯಾರಂದರೆ , ಕೂಷ್ ‌ ಮಿಚ್ರಯಿಮ್ ‌ ಪೂತ್ ‌ ಕಾನಾನ್ ‌ ಎಂಬವರು .

(src)="b.GEN.10.7.1"> Og synir Kúss : Seba , Havíla , Sabta , Raema og Sabteka .
(src)="b.GEN.10.7.2"> Og synir Raema : Séba og Dedan .
(trg)="b.GEN.10.7.1"> ಕೂಷನ ಕುಮಾರರು ಯಾರಂದರೆ , ಸೆಬಾ ಹವೀಲ ಸಬ್ತಾ ರಗ್ಮ ಸಬ್ತಕಾ ಎಂಬವರು . ರಗ್ಮನ ಕುಮಾರರು ಯಾರಂದರೆ , ಶೆಬಾ ದೆದಾನ್ ‌ ಎಂಬವರು .

(src)="b.GEN.10.8.1"> Kús gat Nimrod .
(src)="b.GEN.10.8.2"> Hann tók að gjörast voldugur á jörðinni .
(trg)="b.GEN.10.8.1"> ಕೂಷನಿಂದ ನಿಮ್ರೋದನು ಹುಟ್ಟಿದನು . ಇವನು ಭೂಮಿಯಲ್ಲಿ ಬಲಿಷ್ಠನಾಗಲಾರಂಭಿಸಿದನು .

(src)="b.GEN.10.9.1"> Hann var mikill veiðimaður fyrir Drottni .
(src)="b.GEN.10.9.2"> Því er máltækið : " Mikill veiðimaður fyrir Drottni eins og Nimrod . "
(trg)="b.GEN.10.9.1"> ಅವನು ಕರ್ತನ ಮುಂದೆ ಬಲಿಷ್ಠನಾದ ಬೇಟೆಗಾರನಾಗಿದ್ದನು . ಆದದರಿಂದ--ಕರ್ತನ ಮುಂದೆ ಬಲಿಷ್ಠನಾದ ಬೇಟೆ ಗಾರನಾಗಿದ್ದ ನಿಮ್ರೋದನು ಎಂಬ ಮಾತು ಹೇಳ ಲ್ಪಟ್ಟಿತು .

(src)="b.GEN.10.10.1"> Og upphaf ríkis hans var Babel , Erek , Akkad og Kalne í Sínearlandi .
(trg)="b.GEN.10.10.1"> ಶಿನಾರ್ ‌ ದೇಶದಲ್ಲಿರುವ ಬಾಬೆಲ್ ‌ ಯೆರೆಕ್ ‌ ಅಕ್ಕದ್ ‌ ಕಲ್ನೇ ಎಂಬವು ಅವನ ಪ್ರಾರಂಭದ ರಾಜ್ಯ ಗಳಾಗಿದ್ದವು .

(src)="b.GEN.10.11.1"> Frá þessu landi hélt hann til Assýríu og byggði Níníve , Rehóbót-Ír og Kala ,
(trg)="b.GEN.10.11.1"> ಆ ದೇಶದೊಳಗಿಂದ ಅಶ್ಶೂರನು ಹೊರಟು ನಿನವೆ ರೆಹೋಬೋತ್ ‌ ಎಂಬ ಪಟ್ಟಣ , ಕೆಲಹ ,

(src)="b.GEN.10.12.1"> og Resen milli Níníve og Kala , það er borgin mikla .
(trg)="b.GEN.10.12.1"> ನಿನವೆಗೂ ಕೆಲಹಕ್ಕೂ ಮಧ್ಯದಲ್ಲಿರುವ ದೊಡ್ಡ ಪಟ್ಟಣವಾಗಿರುವ ರೆಸೆನ್ ‌ ನನ್ನು ಕಟ್ಟಿದನು .

(src)="b.GEN.10.13.1"> Mísraím gat Lúdíta , Anamíta , Lekabíta , Naftúkíta ,
(trg)="b.GEN.10.13.1"> ಮಿಚ್ರಯಿಮ್ಯನಿಂದ ಲೂದ್ಯರೂ ಅನಾಮ್ಯರೂ ಲೆಹಾಬ್ಯರೂ ನಫ್ತುಹ್ಯರೂ

(src)="b.GEN.10.14.1"> Patrúsíta , Kaslúkíta ( þaðan eru komnir Filistar ) og Kaftóríta .
(trg)="b.GEN.10.14.1"> ಪತ್ರುಸ್ಯರೂ ಕಸ್ಲುಹ್ಯರೂ ಕಫ್ತೋರ್ಯರೂ ಹುಟ್ಟಿದರು . ಇವರಿಂದ ಫಿಲಿಷ್ಟಿಯರು ಹೊರಬಂದರು .

(src)="b.GEN.10.15.1"> Kanaan gat Sídon , frumgetning sinn , og Het
(trg)="b.GEN.10.15.1"> ಕಾನಾನನಿಂದ ತನ್ನ ಚೊಚ್ಚಲ ಮಗನಾದ ಸೀದೊನನೂ ಹೇತನೂ

(src)="b.GEN.10.16.1"> og Jebúsíta , Amoríta , Gírgasíta ,
(trg)="b.GEN.10.16.1"> ಯೆಬೂಸಿಯನೂ ಅಮೋರಿಯನೂ ಗಿರ್ಗಾಷಿಯನೂ

(src)="b.GEN.10.17.1"> Hevíta , Arkíta , Síníta ,
(trg)="b.GEN.10.17.1"> ಹಿವ್ವಿಯನೂ ಅರ್ಕಿಯನೂ ಸೀನಿಯನೂ

(src)="b.GEN.10.18.1"> Arvadíta , Semaríta og Hamatíta .
(src)="b.GEN.10.18.2"> Og síðan breiddust út kynkvíslir Kanaanítanna .
(trg)="b.GEN.10.18.1"> ಅರ್ವಾದಿಯನೂ ಚೆಮಾರಿಯನೂ ಹಮಾತಿಯನೂ ಹುಟ್ಟಿದರು . ತರುವಾಯ ಕಾನಾನ್ ‌ ಕುಟುಂಬಗಳು ವಿಸ್ತಾರವಾಗಿ ಹರಡಿದವು .

(src)="b.GEN.10.19.1"> Landamerki Kanaanítanna eru frá Sídon um Gerar allt til Gasa , þá er stefnan til Sódómu og Gómorru og Adma og Sebóím , allt til Lasa .
(trg)="b.GEN.10.19.1"> ಕಾನಾನ್ಯರ ಮೇರೆಯು ಸೀದೋನಿ ನಿಂದ ಗೆರಾರಿನ ಮಾರ್ಗವಾಗಿ ಗಾಜಾದ ವರೆಗೆ ಸೊದೋಮ್ ‌ ಗೊಮೋರ ಅದ್ಮಾ ಚೆಬೋಯಿಮ್ ‌ ಮಾರ್ಗವಾಗಿ ಲೆಷಾದ ವರೆಗೂ ಇರುತ್ತದೆ .

(src)="b.GEN.10.20.1"> Þetta eru synir Kams eftir kynþáttum þeirra , eftir tungum þeirra , samkvæmt löndum þeirra og þjóðerni .
(trg)="b.GEN.10.20.1"> ಇವರು ತಮ್ಮ ಕುಟುಂಬಗಳ ಮತ್ತು ತಮ್ಮ ಭಾಷೆಗಳ ಪ್ರಕಾರ ತಮ್ಮ ದೇಶಗಳಲ್ಲಿಯೂ ಜನಾಂಗ ಗಳಲ್ಲಿಯೂ ಇರುವ ಹಾಮನ ಕುಮಾರರು .

(src)="b.GEN.10.21.1"> En Sem , ættfaðir allra Ebers sona , eldri bróðir Jafets , eignaðist og sonu .
(trg)="b.GEN.10.21.1"> ಯೆಬೆರನ ಮಕ್ಕಳೆಲ್ಲರ ತಂದೆಯೂ ಹಿರಿಯನಾದ ಯೆಫೆತನ ಸಹೋದರನೂ ಆಗಿರುವ ಶೇಮನಿಗೆ ಸಹ ಮಕ್ಕಳು ಹುಟ್ಟಿದರು .

(src)="b.GEN.10.22.1"> Synir Sems : Elam , Assúr , Arpaksad , Lúd og Aram .
(trg)="b.GEN.10.22.1"> ಶೇಮನ ಮಕ್ಕಳು ಯಾರಂದರೆ , ಏಲಾಮ್ ‌ ಅಶ್ಶೂರ್ ‌ ಅರ್ಪಕ್ಷದ್ ‌ ಲೂದ್ ‌ ಅರಾಮ್ ‌ .

(src)="b.GEN.10.23.1"> Og synir Arams : Ús , Húl , Geter og Mas .
(trg)="b.GEN.10.23.1"> ಅರಾಮನ ಮಕ್ಕಳು ಯಾರಂದರೆ , ಊಸ್ ‌ ಹೂಲ್ ‌ ಗೆತೆರ್ ‌ ಮಷ್ ‌ ಇವರೇ .

(src)="b.GEN.10.24.1"> Arpaksad gat Sela , og Sela gat Eber .
(trg)="b.GEN.10.24.1"> ಅರ್ಪಕ್ಷದನಿಂದ ಶೆಲಹನು ಹುಟ್ಟಿದನು . ಶೆಲಹ ನಿಂದ ಎಬರನು ಹುಟ್ಟಿದನು .

(src)="b.GEN.10.25.1"> Og Eber fæddust tveir synir .
(src)="b.GEN.10.25.2"> Hét annar Peleg , því að á hans dögum greindist fólkið á jörðinni , en bróðir hans hét Joktan .
(trg)="b.GEN.10.25.1"> ಎಬರನಿಗೆ ಇಬ್ಬರು ಕುಮಾರರು ಹುಟ್ಟಿದರು . ಒಬ್ಬನ ಹೆಸರು ಪೆಲೆಗನು , ಯಾಕಂದರೆ ಅವನ ದಿನಗಳಲ್ಲಿ ಭೂಮಿಯು ವಿಭಾಗಿಸಲ್ಪಟ್ಟಿತು . ಅವನ ಸಹೋದರನ ಹೆಸರು ಯೊಕ್ತಾನ್ ‌ .

(src)="b.GEN.10.26.1"> Og Joktan gat Almódad , Salef , Hasarmavet , Jara ,
(trg)="b.GEN.10.26.1"> ಯೊಕ್ತಾನನಿಂದ ಅಲ್ಮೋದಾದನೂ ಶೆಲೆಪನೂ ಹಚರ್ಮಾವೆತನೂ ಯೆರಹನೂ

(src)="b.GEN.10.27.1"> Hadóram , Úsal , Dikla ,
(trg)="b.GEN.10.27.1"> ಹದೋರಾಮನೂ ಊಜಾಲನೂ ದಿಕ್ಲಾನನೂ

(src)="b.GEN.10.28.1"> Óbal , Abímael , Seba ,
(trg)="b.GEN.10.28.1"> ಓಬಾಲನೂ ಅಬೀಮಯೇಲನೂ ಶೆಬನೂ

(src)="b.GEN.10.29.1"> Ófír , Havíla og Jóbab .
(src)="b.GEN.10.29.2"> Þessir allir eru synir Joktans .
(trg)="b.GEN.10.29.1"> ಓಫೀರನೂ ಹವೀಲನೂ ಯೋಬಾಬನೂ ಹುಟ್ಟಿದರು . ಇವರೆಲ್ಲರೂ ಯೊಕ್ತಾನನ ಕುಮಾರರು .

(src)="b.GEN.10.30.1"> Og bústaður þeirra var frá Mesa til Sefar , til austurfjallanna .
(trg)="b.GEN.10.30.1"> ಅವರ ನಿವಾಸವು ಮೇಶಾದಿಂದ ಪೂರ್ವದಿಕ್ಕಿನ ಬೆಟ್ಟವಾಗಿರುವ ಸೆಫಾರಿನ ವರೆಗೆ ಇತ್ತು .

(src)="b.GEN.10.31.1"> Þetta eru synir Sems , eftir ættkvíslum þeirra , eftir tungum þeirra , samkvæmt löndum þeirra , eftir þjóðerni þeirra .
(trg)="b.GEN.10.31.1"> ಇವರೇ ತಮ್ಮ ಕುಟುಂಬಗಳ ತಮ್ಮ ಭಾಷೆಗಳ ಪ್ರಕಾರ ತಮ್ಮ ದೇಶಗಳಲ್ಲಿ ತಮ್ಮ ಜನಾಂಗಗಳ ಪ್ರಕಾರ ಶೇಮನ ಕುಮಾರರು.ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರ ವಾಗಿರುವ ನೋಹನ ಕುಮಾರರ ಕುಟುಂಬಗಳು ಇವೇ . ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ವಿಭಾಗಿಸಲ್ಪಟ್ಟವು .

(src)="b.GEN.10.32.1"> Þetta eru ættkvíslir Nóa sona eftir ættartölum þeirra , samkvæmt þjóðerni þeirra , og frá þeim kvísluðust þjóðirnar út um jörðina eftir flóðið .
(trg)="b.GEN.10.32.1"> ವಂಶಾವಳಿಗಳಿಗೂ ಜನಾಂಗಗಳಿಗೂ ಅನುಸಾರ ವಾಗಿರುವ ನೋಹನ ಕುಮಾರರ ಕುಟುಂಬಗಳು ಇವೇ . ಪ್ರಳಯವಾದ ಮೇಲೆ ಇವರಿಂದ ಜನಾಂಗಗಳು ಭೂಮಿಯಲ್ಲಿ ವಿಭಾಗಿಸಲ್ಪಟ್ಟವು .

(src)="b.GEN.11.1.1"> Öll jörðin hafði eitt tungumál og ein og sömu orð .
(trg)="b.GEN.11.1.1"> ಆಗ ಭೂಮಿಯಲ್ಲೆಲ್ಲಾ ಒಂದೇ ಭಾಷೆ , ಒಂದೇ ಮಾತು ಇತ್ತು .

(src)="b.GEN.11.2.1"> Og svo bar við , er þeir fóru stað úr stað í austurlöndum , að þeir fundu láglendi í Sínearlandi og settust þar að .
(trg)="b.GEN.11.2.1"> ಇದಾದ ಮೇಲೆ ಅವರು ಪೂರ್ವ ದಿಕ್ಕಿನಿಂದ ಹೊರಟು ಪ್ರಯಾಣ ಮಾಡುವಾಗ ಶಿನಾರ್ ‌ ದೇಶದ ಬೈಲನ್ನು ಕಂಡುಕೊಂಡು ಅಲ್ಲಿ ವಾಸಮಾಡಿದರು .

(src)="b.GEN.11.3.1"> Og þeir sögðu hver við annan : " Gott og vel , vér skulum hnoða tigulsteina og herða í eldi . "
(src)="b.GEN.11.3.2"> Og þeir notuðu tigulsteina í stað grjóts og jarðbik í stað kalks .
(trg)="b.GEN.11.3.1"> ಅವರು--ಬನ್ನಿರಿ , ಇಟ್ಟಿಗೆ ಗಳನ್ನು ಮಾಡಿ ಚೆನ್ನಾಗಿ ಸುಡೋಣ ಎಂದು ಅವರು ಒಬ್ಬರಿಗೊಬ್ಬರು ಮಾತನಾಡಿಕೊಂಡರು . ಅವರಿಗೆ ಕಲ್ಲಿಗೆ ಬದಲಾಗಿ ಇಟ್ಟಿಗೆಯೂ ಸುಣ್ಣಕ್ಕೆ ಬದಲಾಗಿ ಜೇಡಿಮಣ್ಣೂ ಇದ್ದವು .

(src)="b.GEN.11.4.1"> Og þeir sögðu : " Gott og vel , vér skulum byggja oss borg og turn , sem nái til himins , og gjörum oss minnismerki , svo að vér tvístrumst ekki um alla jörðina . "
(trg)="b.GEN.11.4.1"> ಅವರು--ಬನ್ನಿರಿ , ಭೂಮಿಯ ಮೇಲೆಲ್ಲಾ ನಾವು ಚದರಿಹೋಗದ ಹಾಗೆ ಆಕಾಶವನ್ನು ಮುಟ್ಟುವ ಒಂದು ಪಟ್ಟಣವನ್ನೂ ಗೋಪುರವನ್ನೂ ನಮಗಾಗಿ ಕಟ್ಟಿಕೊಂಡು ನಾವು ಹೆಸರನ್ನು ಪಡೆಯೋಣ ಅಂದರು ;

(src)="b.GEN.11.5.1"> Þá steig Drottinn niður til þess að sjá borgina og turninn , sem mannanna synir voru að byggja .
(trg)="b.GEN.11.5.1"> ಆಗ ನರಪುತ್ರರು ಕಟ್ಟುವ ಪಟ್ಟಣವನ್ನೂ ಗೋಪುರವನ್ನೂ ನೋಡುವದಕ್ಕೆ ಕರ್ತನು ಇಳಿದು ಬಂದನು .

(src)="b.GEN.11.6.1"> Og Drottinn mælti : " Sjá , þeir eru ein þjóð og hafa allir sama tungumál , og þetta er hið fyrsta fyrirtæki þeirra .
(src)="b.GEN.11.6.2"> Og nú mun þeim ekkert ófært verða , sem þeir taka sér fyrir hendur að gjöra .
(trg)="b.GEN.11.6.1"> ಕರ್ತನು--ಇಗೋ , ಜನವು ಒಂದೇ ; ಅವರೆಲ್ಲರಿಗೆ ಭಾಷೆಯೂ ಒಂದೇ . ಈಗ ಅವರು ಇದನ್ನು ಮಾಡಲಾರಂಭಿಸಿದ್ದಾರೆ ; ಇನ್ನು ಮುಂದೆ ಅವರು ಮಾಡುವದಕ್ಕೂ ಊಹಿಸುವದಕ್ಕೂ ಅಡ್ಡಿ ಯಾಗದು .

(src)="b.GEN.11.7.1"> Gott og vel , stígum niður og ruglum þar tungumál þeirra , svo að enginn skilji framar annars mál . "
(trg)="b.GEN.11.7.1"> ಆದದರಿಂದ ನಾವು ಇಳಿದು ಹೋಗಿ ಅವರು ಒಬ್ಬರ ಮಾತು ಒಬ್ಬರು ತಿಳಿಯದ ಹಾಗೆ ಅವರ ಭಾಷೆಯನ್ನು ಗಲಿಬಿಲಿ ಮಾಡೋಣ ಅಂದನು .

(src)="b.GEN.11.8.1"> Og Drottinn tvístraði þeim þaðan út um alla jörðina , svo að þeir urðu af að láta að byggja borgina .
(trg)="b.GEN.11.8.1"> ಹೀಗೆ ಕರ್ತನು ಅವರನ್ನು ಅಲ್ಲಿಂದ ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು . ಆಗ ಅವರು ಪಟ್ಟಣ ಕಟ್ಟುವದನ್ನು ನಿಲ್ಲಿಸಿ ಬಿಟ್ಟರು .

(src)="b.GEN.11.9.1"> Þess vegna heitir hún Babel , því að þar ruglaði Drottinn tungumál allrar jarðarinnar , og þaðan tvístraði hann þeim um alla jörðina .
(trg)="b.GEN.11.9.1"> ಆದದರಿಂದ ಅದಕ್ಕೆ ಬಾಬೆಲ್ ‌ ಎಂದು ಹೆಸರಾಯಿತು ; ಯಾಕಂದರೆ ಅಲ್ಲಿ ಕರ್ತನು ಭೂಮಿಯ ಮೇಲೆಲ್ಲಾ ಭಾಷೆಗಳನ್ನು ಗಲಿಬಿಲಿ ಮಾಡಿದನು ; ಅಲ್ಲಿಂದ ಕರ್ತನು ಅವರನ್ನು ಭೂಮಿಯ ಮೇಲೆಲ್ಲಾ ಚದರಿಸಿಬಿಟ್ಟನು .

(src)="b.GEN.11.10.1"> Þetta er ættartala Sems : Sem var hundrað ára gamall , er hann gat Arpaksad , tveim árum eftir flóðið .
(trg)="b.GEN.11.10.1"> ಶೇಮನ ವಂಶಾವಳಿಗಳು ಇವೇ ; ಶೇಮನು ನೂರು ವರುಷದವನಾಗಿದ್ದಾಗ ಅಂದರೆ ಪ್ರಳಯವಾಗಿ ಎರಡು ವರುಷಗಳಾದ ಮೇಲೆ ಅವನಿಂದ ಅರ್ಪಕ್ಷದನು ಹುಟ್ಟಿದನು .

(src)="b.GEN.11.11.1"> Og Sem lifði , eftir að hann gat Arpaksad , fimm hundruð ár og gat sonu og dætur .
(trg)="b.GEN.11.11.1"> ಶೇಮನಿಂದ ಅರ್ಪಕ್ಷದನು ಹುಟ್ಟಿದ ಮೇಲೆ ಶೇಮನು ಐನೂರು ವರುಷ ಬದುಕಿದನು . ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು .

(src)="b.GEN.11.12.1"> Er Arpaksad var þrjátíu og fimm ára , gat hann Sela .
(trg)="b.GEN.11.12.1"> ಅರ್ಪಕ್ಷದನು ಮೂವತ್ತೈದು ವರುಷದವನಾ ಗಿದ್ದಾಗ ಅವನಿಂದ ಶೆಲಹನು ಹುಟ್ಟಿದನು .

(src)="b.GEN.11.13.1"> Og Arpaksad lifði , eftir að hann gat Sela , fjögur hundruð og þrjú ár og gat sonu og dætur .
(trg)="b.GEN.11.13.1"> ಅರ್ಪಕ್ಷದನಿಂದ ಶೆಲಹನು ಹುಟ್ಟಿದ ಮೇಲೆ ಅರ್ಪಕ್ಷದನು ನಾನೂರ ಮೂರು ವರುಷ ಬದುಕಿದನು . ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು .

(src)="b.GEN.11.14.1"> Er Sela var þrjátíu ára , gat hann Eber .
(trg)="b.GEN.11.14.1"> ಶೆಲಹನು ಮೂವತ್ತು ವರುಷದವನಾಗಿದ್ದಾಗ ಅವನಿಂದ ಎಬರನು ಹುಟ್ಟಿದನು .

(src)="b.GEN.11.15.1"> Og Sela lifði , eftir að hann gat Eber , fjögur hundruð og þrjú ár og gat sonu og dætur .
(trg)="b.GEN.11.15.1"> ಶೆಲಹನಿಂದ ಎಬರನು ಹುಟ್ಟಿದ ಮೇಲೆ ಶೆಲಹನು ನಾನೂರ ಮೂರು ವರುಷ ಬದುಕಿದನು . ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು .

(src)="b.GEN.11.16.1"> Er Eber var þrjátíu og fjögurra ára , gat hann Peleg .
(trg)="b.GEN.11.16.1"> ಎಬರನು ಮೂವತ್ತುನಾಲ್ಕು ವರುಷದವ ನಾಗಿದ್ದಾಗ ಅವನಿಂದ ಪೆಲೆಗನು ಹುಟ್ಟಿದನು .

(src)="b.GEN.11.17.1"> Og Eber lifði , eftir að hann gat Peleg , fjögur hundruð og þrjátíu ár og gat sonu og dætur .
(trg)="b.GEN.11.17.1"> ಎಬರನಿಂದ ಪೆಲೆಗನು ಹುಟ್ಟಿದ ಮೇಲೆ ಎಬರನು ನಾನೂರ ಮೂವತ್ತು ವರುಷ ಬದುಕಿದನು . ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು .

(src)="b.GEN.11.18.1"> Er Peleg var þrjátíu ára , gat hann Reú .
(trg)="b.GEN.11.18.1"> ಪೆಲೆಗನು ಮೂವತ್ತು ವರುಷದವನಾಗಿದ್ದಾಗ ಅವನಿಂದ ರೆಗೂವನು ಹುಟ್ಟಿದನು .

(src)="b.GEN.11.19.1"> Og Peleg lifði , eftir að hann gat Reú , tvö hundruð og níu ár og gat sonu og dætur .
(trg)="b.GEN.11.19.1"> ಪೆಲೆಗನಿಂದ ರೆಗೂವನು ಹುಟ್ಟಿದ ಮೇಲೆ ಪೆಲೆಗನು ಇನ್ನೂರ ಒಂಭತ್ತು ವರುಷ ಬದುಕಿದನು . ಅವನಿಂದ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು .

(src)="b.GEN.11.20.1"> Er Reú var þrjátíu og tveggja ára , gat hann Serúg .
(trg)="b.GEN.11.20.1"> ರೆಗೂವನು ಮೂವತ್ತೆರಡು ವರುಷದವನಾಗಿದ್ದಾಗ ಅವನಿಂದ ಸೆರೂಗನು ಹುಟ್ಟಿದನು .

(src)="b.GEN.11.21.1"> Og Reú lifði , eftir að hann gat Serúg , tvö hundruð og sjö ár og gat sonu og dætur .
(trg)="b.GEN.11.21.1"> ರೆಗೂವ ನಿಂದ ಸೆರೂಗನು ಹುಟ್ಟಿದ ಮೇಲೆ ರೆಗೂವನು ಇನ್ನೂರ ಏಳು ವರುಷ ಬದುಕಿದನು . ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು .

(src)="b.GEN.11.22.1"> Er Serúg var þrjátíu ára , gat hann Nahor .
(trg)="b.GEN.11.22.1"> ಸೆರೂಗನು ಮೂವತ್ತು ವರುಷದವನಾಗಿದ್ದಾಗ ಅವನಿಂದ ನಾಹೋರನು ಹುಟ್ಟಿದನು .

(src)="b.GEN.11.23.1"> Og Serúg lifði , eftir að hann gat Nahor , tvö hundruð ár og gat sonu og dætur .
(trg)="b.GEN.11.23.1"> ಸೆರೂಗ ನಿಂದ ನಾಹೋರನು ಹುಟ್ಟಿದ ಮೇಲೆ ಸೆರೂಗನು ಇನ್ನೂರು ವರುಷ ಬದುಕಿದನು . ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು .

(src)="b.GEN.11.24.1"> Er Nahor var tuttugu og níu ára , gat hann Tara .
(trg)="b.GEN.11.24.1"> ನಾಹೋರನು ಇಪ್ಪತ್ತೊಂಭತ್ತು ವರುಷದವನಾಗಿ ದ್ದಾಗ ಅವನಿಂದ ತೆರಹನು ಹುಟ್ಟಿದನು .

(src)="b.GEN.11.25.1"> Og Nahor lifði , eftir að hann gat Tara , hundrað og nítján ár og gat sonu og dætur .
(trg)="b.GEN.11.25.1"> ನಾಹೋರ ನಿಂದ ತೆರಹನು ಹುಟ್ಟಿದ ಮೇಲೆ ನಾಹೋರನು ನೂರಹತ್ತೊಂಭತ್ತು ವರುಷ ಬದುಕಿದನು . ಅವನಿಂದ ಕುಮಾರರೂ ಕುಮಾರ್ತೆಯರೂ ಹುಟ್ಟಿದರು .

(src)="b.GEN.11.26.1"> Er Tara var sjötíu ára , gat hann Abram , Nahor og Haran .
(trg)="b.GEN.11.26.1"> ತೆರಹನು ಎಪ್ಪತ್ತು ವರುಷದವನಾಗಿದ್ದಾಗ ಅವ ನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು .

(src)="b.GEN.11.27.1"> Þetta er saga Tara : Tara gat Abram , Nahor og Haran , en Haran gat Lot .
(trg)="b.GEN.11.27.1"> ತೆರಹನ ವಂಶಾವಳಿಗಳು ಇವೇ ; ತೆರಹನಿಂದ ಅಬ್ರಾಮನೂ ನಾಹೋರನೂ ಹಾರಾನನೂ ಹುಟ್ಟಿದರು . ಹಾರಾನನಿಂದ ಲೋಟನು ಹುಟ್ಟಿದನು .

(src)="b.GEN.11.28.1"> Og Haran dó á undan Tara föður sínum í ættlandi sínu , í Úr í Kaldeu .
(trg)="b.GEN.11.28.1"> ಆದರೆ ಹಾರಾನನು ತಾನು ಹುಟ್ಟಿದ ಸೀಮೆಯಾದ ಕಲ್ದಿಯರ ಊರ್ ‌ ನಲ್ಲಿ ತನ್ನ ತಂದೆಯಾದ ತೆರಹನ ಮುಂಚೆಯೇ ಸತ್ತನು .

(src)="b.GEN.11.29.1"> Og Abram og Nahor tóku sér konur .
(src)="b.GEN.11.29.2"> Kona Abrams hét Saraí , en kona Nahors Milka , dóttir Harans , föður Milku og föður Ísku .
(trg)="b.GEN.11.29.1"> ಅಬ್ರಾಮನೂ ನಾಹೋ ರನೂ ತಮಗೆ ಹೆಂಡತಿಯರನ್ನು ತೆಗೆದುಕೊಂಡರು . ಅಬ್ರಾಮನ ಹೆಂಡತಿಯ ಹೆಸರು ಸಾರಯಳು , ನಾಹೋರನ ಹೆಂಡತಿಯ ಹೆಸರು ಮಿಲ್ಕಾ ; ಈಕೆಯು ಹಾರಾನನ ಮಗಳು ; ಹಾರಾನನು ಮಿಲ್ಕಳಿಗೂ ಇಸ್ಕಳಿಗೂ ತಂದೆ .

(src)="b.GEN.11.30.1"> En Saraí var óbyrja , hún átti eigi börn .
(trg)="b.GEN.11.30.1"> ಆದರೆ ಸಾರಯಳು ಬಂಜೆ ಯಾದದ್ದರಿಂದ ಮಕ್ಕಳಿಲ್ಲದೆ ಇದ್ದಳು .

(src)="b.GEN.11.31.1"> Þá tók Tara Abram son sinn og Lot Haransson , sonarson sinn , og Saraí tengdadóttur sína , konu Abrams sonar síns , og lagði af stað með þau frá Úr í Kaldeu áleiðis til Kanaanlands , og þau komu til Harran og settust þar að .
(trg)="b.GEN.11.31.1"> ತೆರಹನು ತನ್ನ ಮಗನಾದ ಅಬ್ರಾಮನನ್ನೂ ತನ್ನ ಮೊಮ್ಮಗನೂ ಹಾರಾನನ ಮಗನೂ ಆಗಿದ್ದ ಲೋಟನನ್ನೂ ತನ್ನ ಸೊಸೆಯಾದ ಅಬ್ರಾಮನ ಹೆಂಡತಿ ಸಾರಯಳನ್ನೂ ಕರಕೊಂಡು ಕಾನಾನ್ ‌ ದೇಶಕ್ಕೆ ಹೋಗು ವದಕ್ಕಾಗಿ ಕಲ್ದೀಯರ ಊರ್ ‌ ಅನ್ನು ಬಿಟ್ಟು ಅವರು ಹಾರಾನಿಗೆ ಬಂದು ಅಲ್ಲಿ ವಾಸವಾಗಿದ್ದರು.ತೆರಹನ ದಿನಗಳು ಒಟ್ಟು ಇನ್ನೂರ ಐದು ವರುಷಗಳಾಗಿದ್ದವು . ತರುವಾಯ ತೆರಹನು ಹಾರಾನಿನಲ್ಲಿ ಸತ್ತನು .

(src)="b.GEN.11.32.1"> Og dagar Tara voru tvö hundruð og fimm ár .
(src)="b.GEN.11.32.2"> Þá andaðist Tara í Harran . / Abraham , Ísak og Jakob /
(trg)="b.GEN.11.32.1"> ತೆರಹನ ದಿನಗಳು ಒಟ್ಟು ಇನ್ನೂರ ಐದು ವರುಷಗಳಾಗಿದ್ದವು . ತರುವಾಯ ತೆರಹನು ಹಾರಾನಿನಲ್ಲಿ ಸತ್ತನು .

(src)="b.GEN.12.1.1"> Drottinn sagði við Abram : " Far þú burt úr landi þínu og frá ættfólki þínu og úr húsi föður þíns , til landsins , sem ég mun vísa þér á.
(trg)="b.GEN.12.1.1"> ಆಗ ಕರ್ತನು ಅಬ್ರಾಮನಿಗೆ--ನೀನು ನಿನ್ನ ದೇಶದೊಳಗಿಂದಲೂ ಬಂಧು ಗಳಿಂದಲೂ ನಿನ್ನ ತಂದೆಯ ಮನೆಯಿಂದಲೂ ಹೊರ ಬಂದು ನಾನು ನಿನಗೆ ತೋರಿಸುವ ದೇಶಕ್ಕೆ ಹೋಗು .

(src)="b.GEN.12.2.1"> Ég mun gjöra þig að mikilli þjóð og blessa þig og gjöra nafn þitt mikið , og blessun skalt þú vera .
(trg)="b.GEN.12.2.1"> ನಾನು ನಿನ್ನನ್ನು ದೊಡ್ಡ ಜನಾಂಗವಾಗ ಮಾಡಿ ನಿನ್ನನ್ನು ಆಶೀರ್ವದಿಸಿ ನಿನ್ನ ಹೆಸರನ್ನು ದೊಡ್ಡ ದಾಗಿ ಮಾಡುವೆನು , ನೀನು ಆಶೀರ್ವಾದವಾಗಿರುವಿ .

(src)="b.GEN.12.3.1"> Ég mun blessa þá , sem þig blessa , en bölva þeim , sem þér formælir , og af þér skulu allar ættkvíslir jarðarinnar blessun hljóta . "
(trg)="b.GEN.12.3.1"> ನಿನ್ನನ್ನು ಆಶೀರ್ವದಿಸುವವರನ್ನು ಆಶೀರ್ವದಿಸು ವೆನು . ನಿನ್ನನ್ನು ಶಪಿಸುವವರನ್ನು ಶಪಿಸುವೆನು ; ನಿನ್ನಲ್ಲಿ ಭೂಮಿಯ ಎಲ್ಲಾ ಜನಾಂಗಗಳು ಆಶೀರ್ವದಿಸಲ್ಪಡು ವವು ಎಂದು ಹೇಳಿದನು .

(src)="b.GEN.12.4.1"> Þá lagði Abram af stað , eins og Drottinn hafði sagt honum , og Lot fór með honum .
(src)="b.GEN.12.4.2"> En Abram var sjötíu og fimm ára að aldri , er hann fór úr Harran .
(trg)="b.GEN.12.4.1"> ಹೀಗೆ ಕರ್ತನು ತನಗೆ ಹೇಳಿದ ಪ್ರಕಾರ ಅಬ್ರಾಮನು ಹೊರಟುಹೋದನು . ಲೋಟನೂ ಅವನ ಸಂಗಡ ಹೋದನು . ಅಬ್ರಾಮನು ಹಾರಾನಿ ನಿಂದ ಹೊರಟಾಗ ಎಪ್ಪತ್ತೈದು ವರುಷದವನಾಗಿದ್ದನು .

(src)="b.GEN.12.5.1"> Abram tók Saraí konu sína og Lot bróðurson sinn og alla fjárhluti , sem þeir höfðu eignast , og þær sálir , er þeir höfðu fengið í Harran .
(src)="b.GEN.12.5.2"> Og þeir lögðu af stað og héldu til Kanaanlands .
(src)="b.GEN.12.5.3"> Þeir komu til Kanaanlands .
(trg)="b.GEN.12.5.1"> ಇದಲ್ಲದೆ ಅಬ್ರಾಮನು ತನ್ನ ಹೆಂಡತಿಯಾದ ಸಾರಯಳನ್ನೂ ತನ್ನ ಸಹೋದರನ ಮಗನಾದ ಲೋಟ ನನ್ನೂ ಅವರು ಕೂಡಿಸಿಕೊಂಡಿದ್ದ ಎಲ್ಲಾ ಸಂಪತ್ತನ್ನೂ ಹಾರಾನಿನಲ್ಲಿ ಅವರು ಸಂಪಾದಿಸಿಕೊಂಡವರನ್ನೂ ತಮ್ಮ ಸಂಗಡ ಕರಕೊಂಡು ಕಾನಾನ್ ‌ ದೇಶಕ್ಕೆ ಹೊರಟು ಅವರು ಕಾನಾನ್ ‌ ದೇಶಕ್ಕೆ ಬಂದರು .