# fi/Finnish.xml.gz
# kn/Kannada.xml.gz


(src)="b.GEN.1.1.1"> Alussa loi Jumala taivaan ja maan .
(trg)="b.GEN.1.1.1"> ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಸೃಷ್ಟಿಸಿದನು .

(src)="b.GEN.1.2.1"> Ja maa oli autio ja tyhjä , ja pimeys oli syvyyden päällä , ja Jumalan Henki liikkui vetten päällä .
(trg)="b.GEN.1.2.1"> ಭೂಮಿ ಯು ನಿರಾಕಾರವಾಗಿಯೂ ಶೂನ್ಯವಾಗಿಯೂ ಇತ್ತು ; ಅಗಾಧದ ಮೇಲೆ ಕತ್ತಲೆ ಇತ್ತು . ದೇವರ ಆತ್ಮನು ನೀರುಗಳ ಮೇಲೆ ಚಲಿಸುತ್ತಿದ್ದನು .

(src)="b.GEN.1.3.1"> Ja Jumala sanoi : " Tulkoon valkeus " .
(src)="b.GEN.1.3.2"> Ja valkeus tuli .
(trg)="b.GEN.1.3.1"> ಆಗ ದೇವರು--ಬೆಳಕಾಗಲಿ ಅನ್ನಲು ಬೆಳಕಾ ಯಿತು .

(src)="b.GEN.1.4.1"> Ja Jumala näki , että valkeus oli hyvä ; ja Jumala erotti valkeuden pimeydestä .
(trg)="b.GEN.1.4.1"> ದೇವರು ಬೆಳಕನ್ನು ಒಳ್ಳೆಯದೆಂದು ನೋಡಿದನು ; ದೇವರು ಬೆಳಕನ್ನು ಕತ್ತಲೆಯಿಂದ ಬೇರೆ ಮಾಡಿದನು .

(src)="b.GEN.1.5.1"> Ja Jumala kutsui valkeuden päiväksi , ja pimeyden hän kutsui yöksi .
(src)="b.GEN.1.5.2"> Ja tuli ehtoo , ja tuli aamu , ensimmäinen päivä .
(trg)="b.GEN.1.5.1"> ದೇವರು ಬೆಳಕಿಗೆ ಹಗ ಲೆಂದೂ ಕತ್ತಲೆಗೆ ರಾತ್ರಿಯೆಂದೂ ಕರೆದನು . ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೊದಲನೆಯ ದಿನವಾಯಿತು .

(src)="b.GEN.1.6.1"> Ja Jumala sanoi : " Tulkoon taivaanvahvuus vetten välille erottamaan vedet vesistä " .
(trg)="b.GEN.1.6.1"> ಇದಲ್ಲದೆ ದೇವರು--ನೀರುಗಳ ನಡುವೆ ವಿಶಾಲ ವಿರಲಿ ಮತ್ತು ಅದು ನೀರುಗಳಿಂದ ನೀರುಗಳನ್ನು ಬೇರೆ ಮಾಡಲಿ ಅಂದನು .

(src)="b.GEN.1.7.1"> Ja Jumala teki taivaanvahvuuden ja erotti vedet , jotka olivat taivaanvahvuuden alla , vesistä , jotka olivat taivaanvahvuuden päällä ; ja tapahtui niin .
(trg)="b.GEN.1.7.1"> ದೇವರು ವಿಶಾಲವನ್ನು ಮಾಡಿ ವಿಶಾಲದ ಕೆಳಗಿದ್ದ ನೀರುಗಳನ್ನು ವಿಶಾಲದ ಮೇಲಿದ್ದ ನೀರುಗಳಿಂದ ಬೇರೆ ಮಾಡಿದನು . ಅದು ಹಾಗೆಯೇ ಆಯಿತು .

(src)="b.GEN.1.8.1"> Ja Jumala kutsui vahvuuden taivaaksi .
(src)="b.GEN.1.8.2"> Ja tuli ehtoo , ja tuli aamu , toinen päivä .
(trg)="b.GEN.1.8.1"> ದೇವರು ವಿಶಾಲಕ್ಕೆ ಆಕಾಶ ವೆಂದು ಕರೆದನು . ಹೀಗೆ ಸಾಯಂಕಾಲವೂ ಪ್ರಾತಃ ಕಾಲವೂ ಆಗಿ ಎರಡನೆಯ ದಿನವಾಯಿತು .

(src)="b.GEN.1.9.1"> Ja Jumala sanoi : " Kokoontukoot vedet , jotka ovat taivaan alla , yhteen paikkaan , niin että kuiva tulee näkyviin " .
(src)="b.GEN.1.9.2"> Ja tapahtui niin .
(trg)="b.GEN.1.9.1"> ಆಗ ದೇವರು--ಆಕಾಶದ ಕೆಳಗಿರುವ ನೀರುಗಳು ಒಂದು ಸ್ಥಳದಲ್ಲಿ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ ಅಂದನು . ಅದು ಹಾಗೆಯೇ ಆಯಿತು .

(src)="b.GEN.1.10.1"> Ja Jumala kutsui kuivan maaksi , ja paikan , mihin vedet olivat kokoontuneet , hän kutsui mereksi .
(src)="b.GEN.1.10.2"> Ja Jumala näki , että se oli hyvä .
(trg)="b.GEN.1.10.1"> ದೇವರು ಒಣನೆಲಕ್ಕೆ ಭೂಮಿಯೆಂದೂ ಒಟ್ಟು ಗೂಡಿದ ನೀರುಗಳಿಗೆ ಸಮುದ್ರಗಳೆಂದೂ ಕರೆದನು . ದೇವರು ಅದನ್ನು ಒಳ್ಳೆಯದೆಂದು ನೋಡಿದನು .

(src)="b.GEN.1.11.1"> Ja Jumala sanoi : " Kasvakoon maa vihantaa , ruohoja , jotka tekevät siementä , ja hedelmäpuita , jotka lajiensa mukaan kantavat maan päällä hedelmää , jossa niiden siemen on " .
(src)="b.GEN.1.11.2"> Ja tapahtui niin :
(trg)="b.GEN.1.11.1"> ತರುವಾಯ ದೇವರು--ಭೂಮಿಯು ಹುಲ್ಲನ್ನೂ ಬೀಜಕೊಡುವ ಪಲ್ಯವನ್ನೂ ತನ್ನೊಳಗೆ ಬೀಜವಿದ್ದು ತನ್ನ ಜಾತಿಯ ಪ್ರಕಾರ ಫಲಫಲಿಸುವ ಹಣ್ಣಿನ ಮರವನ್ನೂ ಭೂಮಿಯ ಮೇಲೆ ಮೊಳೆಯಿಸಲಿ ಎಂದು ಹೇಳಿದನು ; ಅದು ಹಾಗೆಯೇ ಆಯಿತು .

(src)="b.GEN.1.12.1"> maa tuotti vihantaa , ruohoja , jotka tekivät siementä lajiensa mukaan , ja puita , jotka lajiensa mukaan kantoivat hedelmää , jossa niiden siemen oli .
(src)="b.GEN.1.12.2"> Ja Jumala näki , että se oli hyvä .
(trg)="b.GEN.1.12.1"> ಭೂಮಿಯು ಹುಲ್ಲನ್ನೂ ತನ್ನ ಜಾತಿಯ ಪ್ರಕಾರ ಬೀಜಕೊಡುವ ಪಲ್ಯವನ್ನೂ ತನ್ನ ಜಾತಿಯ ಪ್ರಕಾರ ತನ್ನೊಳಗೆ ಬೀಜವಿರುವ ಹಣ್ಣಿನ ಮರವನ್ನೂ ಮೊಳೆ ಯಿಸಿತು . ದೇವರು ಅದನ್ನು ಒಳ್ಳೆಯದೆಂದು ನೋಡಿ ದನು .

(src)="b.GEN.1.13.1"> Ja tuli ehtoo , ja tuli aamu , kolmas päivä .
(trg)="b.GEN.1.13.1"> ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಮೂರನೆಯ ದಿನವಾಯಿತು .

(src)="b.GEN.1.14.1"> Ja Jumala sanoi : " Tulkoot valot taivaanvahvuuteen erottamaan päivää yöstä , ja olkoot ne merkkeinä osoittamassa aikoja , päiviä ja vuosia ,
(trg)="b.GEN.1.14.1"> ದೇವರು--ಹಗಲನ್ನು ರಾತ್ರಿಯಿಂದ ಬೇರೆ ಮಾಡುವದಕ್ಕೆ ಆಕಾಶದ ವಿಶಾಲದಲ್ಲಿ ಬೆಳಕುಗಳಿರಲಿ ; ಅವು ಹಗಲಿರುಳುಗಳನ್ನೂ ಸಮಯ ದಿನ ಸಂವತ್ಸರ ಗಳನ್ನೂ ತೋರಿಸುವದಕ್ಕೆ ಗುರುತುಗಳಾಗಿರಲಿ ;

(src)="b.GEN.1.15.1"> ja olkoot valoina taivaanvahvuudella paistamassa maan päälle " .
(src)="b.GEN.1.15.2"> Ja tapahtui niin :
(trg)="b.GEN.1.15.1"> ಅವು ಭೂಮಿಯ ಮೇಲೆ ಬೆಳಕುಕೊಡುವಂತೆ ಆಕಾಶದ ವಿಶಾಲದಲ್ಲಿ ಬೆಳಕುಗಳಾಗಿರಲಿ ಅಂದನು . ಅದು ಹಾಗೆಯೇ ಆಯಿತು .

(src)="b.GEN.1.16.1"> Jumala teki kaksi suurta valoa , suuremman valon hallitsemaan päivää ja pienemmän valon hallitsemaan yötä , sekä tähdet .
(trg)="b.GEN.1.16.1"> ದೇವರು ಎರಡು ದೊಡ್ಡ ಬೆಳಕುಗಳನ್ನು ಮಾಡಿದನು ; ದೊಡ್ಡ ಬೆಳಕು ಹಗಲನ್ನಾಳುವದಕ್ಕೂ ಚಿಕ್ಕ ಬೆಳಕು ರಾತ್ರಿಯನ್ನಾಳು ವದಕ್ಕೂ ಮಾಡಿದ್ದಲ್ಲದೆ ನಕ್ಷತ್ರಗಳನ್ನು ಸಹ ಮಾಡಿ ದನು .

(src)="b.GEN.1.17.1"> Ja Jumala pani ne taivaanvahvuuteen , paistamaan maan päälle
(trg)="b.GEN.1.17.1"> ಭೂಮಿಯ ಮೇಲೆ ಬೆಳಕುಕೊಡುವದಕ್ಕಾಗಿ ದೇವರು ಆಕಾಶದ ವಿಶಾಲದಲ್ಲಿ ಅವುಗಳನ್ನು ಇರಿಸಿದನು .

(src)="b.GEN.1.18.1"> ja hallitsemaan päivää ja yötä ja erottamaan valon pimeästä .
(src)="b.GEN.1.18.2"> Ja Jumala näki , että se oli hyvä .
(trg)="b.GEN.1.18.1"> ಇದಲ್ಲದೆ ಅವು ಹಗಲನ್ನು ಮತ್ತು ರಾತ್ರಿಯನ್ನು ಆಳುವದಕ್ಕೂ ಬೆಳಕನ್ನು ಕತ್ತಲೆಯಿಂದ ಬೇರೆ ಮಾಡುವದಕ್ಕೂ ಇರಿಸಿದನು . ದೇವರು ಅದನ್ನು ಒಳ್ಳೆಯದೆಂದು ನೋಡಿದನು .

(src)="b.GEN.1.19.1"> Ja tuli ehtoo , ja tuli aamu , neljäs päivä .
(trg)="b.GEN.1.19.1"> ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ನಾಲ್ಕನೆಯ ದಿನವಾಯಿತು .

(src)="b.GEN.1.20.1"> Ja Jumala sanoi : " Viliskööt vedet eläviä olentoja , ja lentäkööt linnut maan päällä , taivaanvahvuuden alla " .
(trg)="b.GEN.1.20.1"> ದೇವರು--ಚಲಿಸುವ ಜೀವಜಂತುಗಳನ್ನು ನೀರು ಗಳು ಸಮೃದ್ಧಿಯಾಗಿ ಬರಮಾಡಲಿ ; ಭೂಮಿಯ ಮೇಲೆ ಆಕಾಶದ ವಿಶಾಲದಲ್ಲಿ ಪಕ್ಷಿಗಳು ಹಾರಾಡಲಿ ಅಂದನು .

(src)="b.GEN.1.21.1"> Ja Jumala loi suuret merieläimet ja kaikkinaiset liikkuvat , vesissä vilisevät elävät olennot , kunkin lajinsa mukaan , ja kaikkinaiset siivekkäät linnut , kunkin lajinsa mukaan .
(src)="b.GEN.1.21.2"> Ja Jumala näki , että se oli hyvä .
(trg)="b.GEN.1.21.1"> ಇದಲ್ಲದೆ ತಮ್ಮ ಜಾತಿಯ ಪ್ರಕಾರ ನೀರುಗಳು ಸಮೃದ್ಧಿಯಾಗಿ ಬರಮಾಡಿದ ದೊಡ್ಡ ತಿಮಿಂಗಿಲಗಳನ್ನೂ ಚಲಿಸುವ ಪ್ರತಿಯೊಂದು ಜೀವ ಜಂತುಗಳನ್ನೂ ತನ್ನ ಜಾತಿಗನುಸಾರವಾದ ರೆಕ್ಕೆಗಳಿದ್ದ ಪ್ರತಿಯೊಂದು ಪಕ್ಷಿಯನ್ನೂ ದೇವರು ಸೃಷ್ಟಿಸಿದನು . ದೇವರು ಅದನ್ನು ಒಳ್ಳೆಯದೆಂದು ನೋಡಿದನು .

(src)="b.GEN.1.22.1"> Ja Jumala siunasi ne sanoen : " Olkaa hedelmälliset ja lisääntykää ja täyttäkää meren vedet , ja linnut lisääntykööt maan päällä " .
(trg)="b.GEN.1.22.1"> ಆಗ ದೇವರು ಅವುಗಳನ್ನು ಆಶೀರ್ವದಿಸಿ-- ಅಭಿವೃದ್ಧಿಯಾಗಿ ಹೆಚ್ಚಿ ಸಮುದ್ರಗಳ ನೀರುಗಳಲ್ಲಿ ತುಂಬಿಕೊಳ್ಳಲಿ ಮತ್ತು ಪಕ್ಷಿಗಳು ಭೂಮಿಯಲ್ಲಿ ಹೆಚ್ಚಲಿ ಅಂದನು .

(src)="b.GEN.1.23.1"> Ja tuli ehtoo , ja tuli aamu , viides päivä .
(trg)="b.GEN.1.23.1"> ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಐದನೆಯ ದಿನವಾಯಿತು .

(src)="b.GEN.1.24.1"> Ja Jumala sanoi : " Tuottakoon maa elävät olennot , kunkin lajinsa mukaan , karjaeläimet ja matelijat ja metsäeläimet , kunkin lajinsa mukaan " .
(src)="b.GEN.1.24.2"> Ja tapahtui niin :
(trg)="b.GEN.1.24.1"> ದೇವರು--ಆಯಾ ಜಾತಿಯ ಜೀವಜಂತುಗಳನ್ನೂ ಪಶುಗಳನ್ನೂ ಹರಿದಾಡುವ ಕ್ರಿಮಿಗಳನ್ನೂ ತನ್ನ ಜಾತಿಗನುಸಾರವಾದ ಭೂಮೃಗಗಳನ್ನೂ ಭೂಮಿಯು ಬರಮಾಡಲಿ ಅಂದನು ; ಅದು ಹಾಗೆಯೇ ಆಯಿತು .

(src)="b.GEN.1.25.1"> Jumala teki metsäeläimet , kunkin lajinsa mukaan , ja karjaeläimet , kunkin lajinsa mukaan , ja kaikki maan matelijat , kunkin lajinsa mukaan .
(src)="b.GEN.1.25.2"> Ja Jumala näki , että se oli hyvä .
(trg)="b.GEN.1.25.1"> ದೇವರು ಅದರ ಜಾತಿಗನುಸಾರವಾಗಿ ಭೂಮೃಗಗಳನ್ನೂ ಅವುಗಳ ಜಾತಿಗನುಸಾರವಾಗಿ ಪಶುಗಳನ್ನೂ ತನ್ನ ಜಾತಿಗನುಸಾರವಾಗಿ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದನ್ನೂ ಮಾಡಿದನು . ದೇವರು ಅದನ್ನು ಒಳ್ಳೆಯದೆಂದು ನೋಡಿದನು .

(src)="b.GEN.1.26.1"> Ja Jumala sanoi : " Tehkäämme ihminen kuvaksemme , kaltaiseksemme ; ja vallitkoot he meren kalat ja taivaan linnut ja karjaeläimet ja koko maan ja kaikki matelijat , jotka maassa matelevat " .
(trg)="b.GEN.1.26.1"> ತರುವಾಯ ದೇವರು--ನಮ್ಮ ರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯನನ್ನು ಮಾಡೋಣ ; ಅವರು ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ಎಲ್ಲಾ ಭೂಮಿಯ ಮೇಲೆಯೂ ಭೂಮಿಯ ಮೇಲೆ ಹರಿದಾಡುವ ಪ್ರತಿಯೊಂದು ಕ್ರಿಮಿಯ ಮೇಲೆಯೂ ದೊರೆತನಮಾಡಲಿ ಅಂದನು .

(src)="b.GEN.1.27.1"> Ja Jumala loi ihmisen omaksi kuvaksensa , Jumalan kuvaksi hän hänet loi ; mieheksi ja naiseksi hän loi heidät .
(trg)="b.GEN.1.27.1"> ಹೀಗೆ ದೇವರು ಮನುಷ್ಯನನ್ನು ತನ್ನ ಸ್ವರೂಪದಲ್ಲಿ ಸೃಷ್ಟಿಸಿದನು , ದೇವರರೂಪದಲ್ಲಿ ಆತನು ಅವನನ್ನು ಸೃಷ್ಟಿಸಿದನು . ಆತನು ಅವರನ್ನು ಗಂಡು ಹೆಣ್ಣಾಗಿ ಸೃಷ್ಟಿಸಿದನು .

(src)="b.GEN.1.28.1"> Ja Jumala siunasi heidät , ja Jumala sanoi heille : " Olkaa hedelmälliset ja lisääntykää ja täyttäkää maa ja tehkää se itsellenne alamaiseksi ; ja vallitkaa meren kalat ja taivaan linnut ja kaikki maan päällä liikkuvat eläimet " .
(trg)="b.GEN.1.28.1"> ಇದಲ್ಲದೆ ದೇವರು ಅವರನ್ನು ಆಶೀರ್ವದಿಸಿದನು . ದೇವರು--ಅಭಿವೃದ್ಧಿಯಾಗಿ ಹೆಚ್ಚಿ ಭೂಮಿಯನ್ನು ತುಂಬಿಕೊಂಡು ಅದನ್ನು ವಶಮಾಡಿ ಕೊಳ್ಳಿರಿ ; ಸಮುದ್ರದ ವಿಾನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯ ಮೇಲೆ ಚಲಿಸುವ ಪ್ರತಿಯೊಂದು ಜೀವಿಯ ಮೇಲೆಯೂ ದೊರೆತನಮಾಡಿರಿ ಎಂದು ಅವರಿಗೆ ಹೇಳಿದನು .

(src)="b.GEN.1.29.1"> Ja Jumala sanoi : " Katso , minä annan teille kaikkinaiset siementä tekevät ruohot , joita kasvaa kaikkialla maan päällä , ja kaikki puut , joissa on siementä tekevä hedelmä ; olkoot ne teille ravinnoksi .
(trg)="b.GEN.1.29.1"> ದೇವರು--ಇಗೋ , ಸಮಸ್ತ ಭೂಮಿಯ ಮೇಲೆ ಇರುವ ಬೀಜವುಳ್ಳ ಪ್ರತಿಯೊಂದು ಪಲ್ಯವನ್ನೂ ಬೀಜಬಿಡುವ ಪ್ರತಿಯೊಂದು ಹಣ್ಣಿನ ಮರವನ್ನೂ ನಿಮಗೆ ಕೊಟ್ಟಿದ್ದೇನೆ . ಅದು ನಿಮಗೆ ಆಹಾರಕ್ಕಾಗಿ ರುವದು .

(src)="b.GEN.1.30.1"> Ja kaikille metsäeläimille ja kaikille taivaan linnuille ja kaikille , jotka maassa matelevat ja joissa on elävä henki , minä annan kaikkinaiset viheriät ruohot ravinnoksi " .
(src)="b.GEN.1.30.2"> Ja tapahtui niin .
(trg)="b.GEN.1.30.1"> ಇದಲ್ಲದೆ ನಾನು ಭೂಮಿಯ ಪ್ರತಿ ಯೊಂದು ಮೃಗಕ್ಕೂ ಆಕಾಶದ ಪ್ರತಿಯೊಂದು ಪಕ್ಷಿಗೂ ಭೂಮಿಯ ಮೇಲೆ ಹರಿದಾಡುವ ಜೀವವುಳ್ಳ ಪ್ರತಿ ಯೊಂದಕ್ಕೂ ಹಸುರಾದ ಪ್ರತಿಯೊಂದು ಪಲ್ಯವನ್ನು ಆಹಾರಕ್ಕಾಗಿ ಕೊಟ್ಟಿದ್ದೇನೆ ಅಂದನು ; ಅದು ಹಾಗೆಯೇ ಆಯಿತು.ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ ಇಗೋ , ಅದು ಬಹಳ ಒಳ್ಳೆಯದಾಗಿತ್ತು . ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು .

(src)="b.GEN.1.31.1"> Ja Jumala katsoi kaikkea , mitä hän tehnyt oli , ja katso , se oli sangen hyvää .
(src)="b.GEN.1.31.2"> Ja tuli ehtoo , ja tuli aamu , kuudes päivä .
(trg)="b.GEN.1.31.1"> ದೇವರು ತಾನು ಮಾಡಿದ್ದನ್ನೆಲ್ಲಾ ನೋಡಲಾಗಿ ಇಗೋ , ಅದು ಬಹಳ ಒಳ್ಳೆಯದಾಗಿತ್ತು . ಹೀಗೆ ಸಾಯಂಕಾಲವೂ ಪ್ರಾತಃಕಾಲವೂ ಆಗಿ ಆರನೆಯ ದಿನವಾಯಿತು .

(src)="b.GEN.2.1.1"> Niin tulivat valmiiksi taivas ja maa kaikkine joukkoinensa .
(trg)="b.GEN.2.1.1"> ಹೀಗೆ ಆಕಾಶಗಳೂ ಭೂಮಿಯೂ ಅವುಗಳ ಸಮಸ್ತ ಸಮೂಹವೂ ಸಂಪೂರ್ಣ ವಾದವು .

(src)="b.GEN.2.2.1"> Ja Jumala päätti seitsemäntenä päivänä työnsä , jonka hän oli tehnyt , ja lepäsi seitsemäntenä päivänä kaikesta työstänsä , jonka hän oli tehnyt .
(trg)="b.GEN.2.2.1"> ಏಳನೆಯ ದಿನದಲ್ಲಿ ದೇವರು ತಾನು ಮಾಡಿದ್ದ ತನ್ನ ಕೆಲಸವನ್ನು ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ತಾನು ಮಾಡಿದ್ದ ಎಲ್ಲಾ ಕೆಲಸದಿಂದ ವಿಶ್ರಮಿಸಿಕೊಂಡನು .

(src)="b.GEN.2.3.1"> Ja Jumala siunasi seitsemännen päivän ja pyhitti sen , koska hän sinä päivänä lepäsi kaikesta luomistyöstänsä , jonka hän oli tehnyt .
(trg)="b.GEN.2.3.1"> ದೇವರು ಏಳನೆಯ ದಿನವನ್ನು ಆಶೀರ್ವದಿಸಿ ಅದನ್ನು ಪವಿತ್ರಮಾಡಿದನು ; ಯಾಕಂ ದರೆ ಆ ದಿನದಲ್ಲಿ ತಾನು ಸೃಷ್ಟಿಸಿದ ಮತ್ತು ಮಾಡಿದ ತನ್ನ ಎಲ್ಲಾ ಕೆಲಸದಿಂದ ವಿಶ್ರಮಿಸಿಕೊಂಡನು .

(src)="b.GEN.2.4.1"> Tämä on kertomus taivaan ja maan synnystä , kun ne luotiin .
(src)="b.GEN.2.4.2"> Siihen aikaan kun Herra Jumala teki maan ja taivaan ,
(trg)="b.GEN.2.4.1"> ಇದೇ ಭೂಮ್ಯಾಕಾಶಗಳ ನಿರ್ಮಾಣಚರಿತ್ರೆ .

(src)="b.GEN.2.5.1"> ei ollut vielä yhtään kedon pensasta maan päällä , eikä vielä kasvanut mitään ruohoa kedolla , koska Herra Jumala ei vielä ollut antanut sataa maan päälle eikä ollut ihmistä maata viljelemässä ,
(trg)="b.GEN.2.5.1"> ಕರ್ತನಾದ ದೇವರು ಭೂಮಿಯನ್ನೂ ಆಕಾಶಗಳನ್ನೂ ಉಂಟು ಮಾಡಿದ ದಿನದಲ್ಲಿ ಹೊಲದ ಯಾವ ಗಿಡವಾದರೂ ಭೂಮಿಯಲ್ಲಿ ಇನ್ನೂ ಬೆಳೆದಿರಲಿಲ್ಲ ; ಹೊಲದ ಯಾವ ಪಲ್ಯವಾದರೂ ಇನ್ನೂ ಮೊಳೆತಿರಲಿಲ್ಲ ; ಯಾಕಂದರೆ ಕರ್ತನಾದ ದೇವರು ಭೂಮಿಯ ಮೇಲೆ ಮಳೆ ಸುರಿಸಿರಲಿಲ್ಲ ; ಭೂಮಿಯನ್ನು ವ್ಯವಸಾಯ ಮಾಡು ವದಕ್ಕೆ ಮನುಷ್ಯನು ಇರಲಿಲ್ಲ .

(src)="b.GEN.2.6.1"> vaan sumu nousi maasta ja kasteli koko maan pinnan .
(trg)="b.GEN.2.6.1"> ಆದರೆ ಭೂಮಿ ಯೊಳಗಿಂದ ಮಂಜು ಏರಿಬಂದು ನೆಲವನ್ನೆಲ್ಲಾ ತೋಯಿಸುತ್ತಿತ್ತು .

(src)="b.GEN.2.7.1"> Silloin Herra Jumala teki maan tomusta ihmisen ja puhalsi hänen sieramiinsa elämän hengen , ja niin ihmisestä tuli elävä sielu .
(trg)="b.GEN.2.7.1"> ಕರ್ತನಾದ ದೇವರು ಭೂಮಿಯ ಮಣ್ಣಿನಿಂದ ಮನುಷ್ಯನನ್ನು ರೂಪಿಸಿ ಅವನ ಮೂಗಿನಲ್ಲಿ ಜೀವಶ್ವಾಸ ವನ್ನು ಊದಿದನು ; ಆಗ ಮನುಷ್ಯನು ಜೀವಾತ್ಮ ನಾದನು .

(src)="b.GEN.2.8.1"> Ja Herra Jumala istutti paratiisin Eedeniin , itään , ja asetti sinne ihmisen , jonka hän oli tehnyt .
(trg)="b.GEN.2.8.1"> ಕರ್ತನಾದ ದೇವರು ಏದೆನಿನಲ್ಲಿ ಪೂರ್ವ ದಿಕ್ಕಿಗೆ ತೋಟವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇಟ್ಟನು .

(src)="b.GEN.2.9.1"> Ja Herra Jumala kasvatti maasta kaikkinaisia puita , ihania nähdä ja hyviä syödä , ja elämän puun keskelle paratiisia , niin myös hyvän- ja pahantiedon puun .
(trg)="b.GEN.2.9.1"> ಕರ್ತನಾದ ದೇವರು ನೋಟಕ್ಕೆ ರಮ್ಯವಾದ ಮತ್ತು ಊಟಕ್ಕೆ ಒಳ್ಳೇದಾದ ಎಲ್ಲಾ ಮರಗಳನ್ನು , ತೋಟದ ಮಧ್ಯದಲ್ಲಿ ಜೀವದ ಮರವನ್ನು , ಒಳ್ಳೇದರ ಕೆಟ್ಟದರ ತಿಳುವಳಿಕೆಯ ಮರವನ್ನು ಭೂಮಿಯೊಳಗಿಂದ ಬೆಳೆಯಿಸಿದನು .

(src)="b.GEN.2.10.1"> Ja Eedenistä lähti joki , joka kasteli paratiisia , ja se jakaantui sieltä neljään haaraan .
(trg)="b.GEN.2.10.1"> ತೋಟವನ್ನು ತೋಯಿಸುವದಕ್ಕಿರುವ ನದಿಯು ಏದೆನಿನೊಳಗಿಂದ ಹೊರಟು ಅಲ್ಲಿಂದ ಭಾಗವಾಗಿ ನಾಲ್ಕು ಶಾಖೆಗಳಾಯಿತು .

(src)="b.GEN.2.11.1"> Ensimmäisen nimi on Piison ; se kiertää koko Havilan maan , jossa on kultaa ;
(trg)="b.GEN.2.11.1"> ಮೊದಲನೆಯದರ ಹೆಸರು ಪೀಶೋನ್ ‌ ; ಅದು ಹವೀಲ ದೇಶವನ್ನೆಲ್ಲಾ ಸುತ್ತುವದು ; ಅದರಲ್ಲಿ ಬಂಗಾರವಿದೆ .

(src)="b.GEN.2.12.1"> ja sen maan kulta on hyvää .
(src)="b.GEN.2.12.2"> Siellä on myös bedellion-pihkaa ja onyks-kiveä .
(trg)="b.GEN.2.12.1"> ಆ ದೇಶದ ಬಂಗಾರವು ಉತ್ತಮವಾದದ್ದು ; ಅದರಲ್ಲಿ ಬದೋಲಖ ಮತ್ತು ಗೋಮೇಧಿಕ ಕಲ್ಲು ಇದೆ .

(src)="b.GEN.2.13.1"> Toisen virran nimi on Giihon ; se kiertää koko Kuusin maan .
(trg)="b.GEN.2.13.1"> ಎರಡನೆಯ ನದಿಯ ಹೆಸರು ಗೀಹೋನ್ ‌ ; ಅದು ಕೂಷ್ ‌ ದೇಶವನ್ನೆಲ್ಲಾ ಸುತ್ತುವದು .

(src)="b.GEN.2.14.1"> Kolmannen virran nimi on Hiddekel ; se juoksee Assurin editse .
(src)="b.GEN.2.14.2"> Ja neljäs virta on Eufrat .
(trg)="b.GEN.2.14.1"> ಮೂರನೆಯ ನದಿಯ ಹೆಸರು ಹಿದ್ದೆಕೆಲ್ ‌ ; ಅದು ಅಶ್ಶೂರದ ಪೂರ್ವದ ಕಡೆಗೆ ಹರಿಯುವದು . ನಾಲ್ಕನೆಯ ನದಿಯು ಯೂಫ್ರೇಟೀಸ್ ‌ .

(src)="b.GEN.2.15.1"> Ja Herra Jumala otti ihmisen ja pani hänet Eedenin paratiisiin viljelemään ja varjelemaan sitä .
(trg)="b.GEN.2.15.1"> ಆಗ ಕರ್ತನಾದ ದೇವರು ಮನುಷ್ಯನನ್ನು ಕರಕೊಂಡು ಹೋಗಿ ಏದೆನ್ ‌ ತೋಟ ವನ್ನು ವ್ಯವಸಾಯ ಮಾಡುವದಕ್ಕೂ ಕಾಯುವದಕ್ಕೂ ಅದರಲ್ಲಿ ಇಟ್ಟನು .

(src)="b.GEN.2.16.1"> Ja Herra Jumala käski ihmistä sanoen : " Syö vapaasti kaikista muista paratiisin puista ,
(trg)="b.GEN.2.16.1"> ದೇವರಾದ ಕರ್ತನು ಮನುಷ್ಯ ನಿಗೆ ಆಜ್ಞಾಪಿಸಿದ್ದೇನಂದರೆ--ನೀನು ತೋಟದ ಎಲ್ಲಾ ಮರಗಳ ಫಲವನ್ನು ಯಥೇಚ್ಛವಾಗಿ ತಿನ್ನಬಹುದು ;

(src)="b.GEN.2.17.1"> mutta hyvän- ja pahantiedon puusta älä syö , sillä sinä päivänä , jona sinä siitä syöt , pitää sinun kuolemalla kuoleman " .
(trg)="b.GEN.2.17.1"> ಆದರೆ ಒಳ್ಳೇದು ಕೆಟ್ಟದರ ತಿಳುವಳಿಕೆಯನ್ನುಂಟು ಮಾಡುವ ಮರದ ಫಲವನ್ನು ನೀನು ತಿನ್ನಬಾರದು ; ಅದನ್ನು ತಿಂದ ದಿನದಲ್ಲಿ ಖಂಡಿತವಾಗಿ ಸಾಯುವಿ ಅಂದನು .

(src)="b.GEN.2.18.1"> Ja Herra Jumala sanoi : " Ei ole ihmisen hyvä olla yksinänsä , minä teen hänelle avun , joka on hänelle sopiva " .
(trg)="b.GEN.2.18.1"> ಕರ್ತನಾದ ದೇವರು--ಮನುಷ್ಯನು ಒಂಟಿಯಾ ಗಿರುವದು ಒಳ್ಳೆಯದಲ್ಲ ; ಅವನಿಗೆ ತಕ್ಕ ಸಹಕಾರಿಯನ್ನು ಮಾಡುವೆನು ಅಂದನು .

(src)="b.GEN.2.19.1"> Ja Herra Jumala teki maasta kaikki metsän eläimet ja kaikki taivaan linnut ja toi ne ihmisen eteen nähdäkseen , kuinka hän ne nimittäisi ; ja niinkuin ihminen nimitti kunkin elävän olennon , niin oli sen nimi oleva .
(trg)="b.GEN.2.19.1"> ಇದಲ್ಲದೆ ಕರ್ತನಾದ ದೇವರು ಅಡವಿಯ ಎಲ್ಲಾ ಮೃಗಗಳನ್ನೂ ಆಕಾಶದ ಎಲ್ಲಾ ಪಕ್ಷಿಗಳನ್ನೂ ಮಣ್ಣಿನಿಂದ ರೂಪಿಸಿ ಅವುಗಳಿಗೆ ಆದಾಮನು ಏನು ಹೆಸರಿಡುವನೋ ಎಂದು ನೋಡು ವದಕ್ಕೆ ಅವನ ಬಳಿಗೆ ಬರಮಾಡಿದನು . ಆದಾಮನು ಕರೆದದ್ದೇ ಆ ಜೀವಿಗಳಿಗೆಲ್ಲಾ ಹೆಸರಾಯಿತು .

(src)="b.GEN.2.20.1"> Ja ihminen antoi nimet kaikille karjaeläimille ja taivaan linnuille ja kaikille metsän eläimille .
(src)="b.GEN.2.20.2"> Mutta Aadamille ei löytynyt apua , joka olisi hänelle sopinut .
(trg)="b.GEN.2.20.1"> ಆದಾ ಮನು ಎಲ್ಲಾ ಪಶುಗಳಿಗೂ ಆಕಾಶದ ಪಕ್ಷಿಗಳಿಗೂ ಅಡವಿಯ ಎಲ್ಲಾ ಮೃಗಗಳಿಗೂ ಹೆಸರಿಟ್ಟನು , ಆದರೆ ಆದಾಮನಿಗೆ ತಕ್ಕ ಸಹಕಾರಿ ಸಿಗಲಿಲ್ಲ .

(src)="b.GEN.2.21.1"> Niin Herra Jumala vaivutti ihmisen raskaaseen uneen , ja kun hän nukkui , otti hän yhden hänen kylkiluistaan ja täytti sen paikan lihalla .
(trg)="b.GEN.2.21.1"> ಕರ್ತನಾದ ದೇವರು ಆದಾಮನಿಗೆ ಗಾಢನಿದ್ರೆ ಬರಮಾಡಿದ್ದರಿಂದ ಅವನು ನಿದ್ರೆಮಾಡಿದನು ; ಆಗ ಆತನು ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತಕ್ಕೊಂಡು ಅದಕ್ಕೆ ಬದಲಾಗಿ ಮಾಂಸವನ್ನು ಮುಚ್ಚಿದನು .

(src)="b.GEN.2.22.1"> Ja Herra Jumala rakensi vaimon siitä kylkiluusta , jonka hän oli ottanut miehestä , ja toi hänet miehen luo .
(trg)="b.GEN.2.22.1"> ಕರ್ತನಾದ ದೇವರು ಮನುಷ್ಯನಿಂದ ತಕ್ಕೊಂಡ ಪಕ್ಕೆಯ ಎಲು ಬನ್ನು ಸ್ತ್ರೀಯಾಗಮಾಡಿ ಅವಳನ್ನು ಅವನ ಬಳಿಗೆ ತಂದನು .

(src)="b.GEN.2.23.1"> Ja mies sanoi : " Tämä on nyt luu minun luistani ja liha minun lihastani ; hän kutsuttakoon miehettäreksi , sillä hän on miehestä otettu " .
(trg)="b.GEN.2.23.1"> ಆಗ ಆದಾಮನು--ಇವಳು ಈಗ ನನ್ನ ಎಲುಬುಗಳ ಎಲುಬೂ ನನ್ನ ಮಾಂಸದ ಮಾಂಸವೂ ಆಗಿದ್ದಾಳೆ ; ಇವಳು ನರನಿಂದ ತೆಗೆಯ ಲ್ಪಟ್ಟದ್ದರಿಂದ ನಾರಿಯೆಂದು ಕರೆಯಲ್ಪಡುವಳು ಅಂದನು .

(src)="b.GEN.2.24.1"> Sentähden mies luopukoon isästänsä ja äidistänsä ja liittyköön vaimoonsa , ja he tulevat yhdeksi lihaksi .
(trg)="b.GEN.2.24.1"> ಆದದರಿಂದ ಮನುಷ್ಯನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ; ಅವರು ಒಂದೇ ಶರೀರ ವಾಗಿರುವರು.ಇದಲ್ಲದೆ ಆ ಮನುಷ್ಯನು ಅವನ ಹೆಂಡತಿಯು ಇಬ್ಬರು ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ .

(src)="b.GEN.2.25.1"> Ja he olivat molemmat , mies ja hänen vaimonsa , alasti eivätkä hävenneet toisiansa .
(trg)="b.GEN.2.25.1"> ಇದಲ್ಲದೆ ಆ ಮನುಷ್ಯನು ಅವನ ಹೆಂಡತಿಯು ಇಬ್ಬರು ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ .

(src)="b.GEN.3.1.1"> Mutta käärme oli kavalin kaikista kedon eläimistä , jotka Herra Jumala oli tehnyt ; ja se sanoi vaimolle : " Onko Jumala todellakin sanonut : `Älkää syökö kaikista paratiisin puista`?"
(trg)="b.GEN.3.1.1"> ಕರ್ತನಾದ ದೇವರು ಮಾಡಿದ ಅಡವಿಯ ಎಲ್ಲಾ ಮೃಗಗಳಿಗಿಂತ ಸರ್ಪವು ಯುಕ್ತಿ ಯುಳ್ಳದ್ದಾಗಿತ್ತು . ಅದು ಸ್ತ್ರೀಗೆ--ನೀವು ತೋಟ ದಲ್ಲಿರುವ ಯಾವ ಮರದ ಫಲವನ್ನು ತಿನ್ನಬಾರದೆಂದು ದೇವರು ಹೇಳಿದ್ದು ನಿಜವೋ ಎಂದು ಕೇಳಿತು .

(src)="b.GEN.3.2.1"> Niin vaimo vastasi käärmeelle : " Me saamme syödä muiden puiden hedelmiä paratiisissa ,
(trg)="b.GEN.3.2.1"> ಆಗ ಸ್ತ್ರೀಯು ಸರ್ಪಕ್ಕೆ--ತೋಟದ ಮರಗಳ ಫಲಗಳನ್ನು ನಾವು ತಿನ್ನಬಹುದು .

(src)="b.GEN.3.3.1"> mutta sen puun hedelmästä , joka on keskellä paratiisia , on Jumala sanonut : `Älkää syökö siitä älkääkä koskeko siihen, ettette kuolisi`."
(trg)="b.GEN.3.3.1"> ಆದರೆ ತೋಟದ ಮಧ್ಯದಲ್ಲಿ ರುವ ಮರದ ಫಲದ ವಿಷಯದಲ್ಲಿ ದೇವರು--ನೀವು ಸಾಯದ ಹಾಗೆ ಅದನ್ನು ತಿನ್ನಲೂ ಬಾರದು , ಮುಟ್ಟಲೂ ಬಾರದು ಎಂದು ಹೇಳಿದ್ದಾನೆ ಅಂದಳು .

(src)="b.GEN.3.4.1"> Niin käärme sanoi vaimolle : " Ette suinkaan kuole ;
(trg)="b.GEN.3.4.1"> ಸರ್ಪವು ಸ್ತ್ರೀಗೆ--ನೀವು ಖಂಡಿತವಾಗಿ ಸಾಯುವದಿಲ್ಲ ;

(src)="b.GEN.3.5.1"> vaan Jumala tietää , että sinä päivänä , jona te siitä syötte , aukenevat teidän silmänne , ja te tulette niinkuin Jumala tietämään hyvän ja pahan " .
(trg)="b.GEN.3.5.1"> ನೀವು ಅದನ್ನು ತಿಂದ ದಿನದಲ್ಲಿ ನಿಮ್ಮ ಕಣ್ಣುಗಳು ತೆರೆಯ ಲ್ಪಡುವವೆಂದೂ ನೀವು ಒಳ್ಳೇದರ ಕೆಟ್ಟದರ ಭೇದವನ್ನು ಅರಿತವರಾಗಿ ದೇವರುಗಳ ಹಾಗೆ ಇರುವಿರೆಂದೂ ದೇವರಿಗೆ ತಿಳಿದಿದೆ ಎಂದು ಹೇಳಿತು .

(src)="b.GEN.3.6.1"> Ja vaimo näki , että siitä puusta oli hyvä syödä ja että se oli ihana katsella ja suloinen puu antamaan ymmärrystä ; ja hän otti sen hedelmästä ja söi ja antoi myös miehellensä , joka oli hänen kanssansa , ja hänkin söi .
(trg)="b.GEN.3.6.1"> ಸ್ತ್ರೀಯು--ಆ ಮರದ ಫಲವು ಆಹಾರಕ್ಕೆ ಒಳ್ಳೇದಾಗಿಯೂ ಕಣ್ಣಿಗೆ ರಮ್ಯವಾಗಿಯೂ ಒಬ್ಬನನ್ನು ಜ್ಞಾನಿಯನ್ನಾಗಿ ಮಾಡುವದಕ್ಕೆ ಅಪೇಕ್ಷಿಸತಕ್ಕದ್ದಾಗಿಯೂ ಅದೆ ಎಂದು ನೋಡಿ ಅದರ ಫಲವನ್ನು ತೆಗೆದುಕೊಂಡು ತಿಂದಳು ; ತನ್ನ ಸಂಗಡ ಇದ್ದ ತನ್ನ ಗಂಡನಿಗೂ ಕೊಟ್ಟಳು ; ಅವನೂ ತಿಂದನು .

(src)="b.GEN.3.7.1"> Silloin aukenivat heidän molempain silmät , ja he huomasivat olevansa alasti ; ja he sitoivat yhteen viikunapuun lehtiä ja tekivät itselleen vyöverhot .
(trg)="b.GEN.3.7.1"> ಆಗ ಅವರಿಬ್ಬರ ಕಣ್ಣುಗಳು ತೆರೆಯಲ್ಪಟ್ಟು ತಾವು ಬೆತ್ತಲೆಯಾಗಿದ್ದೇವೆಂದು ತಿಳಿದು ಕೊಂಡರು ; ಅವರು ಅಂಜೂರದ ಎಲೆಗಳನ್ನು ಹೊಲಿದುಕೊಂಡು ತಮಗೆ ತಾವೇ ಉಡುಗೆಗಳನ್ನು ಮಾಡಿಕೊಂಡರು .

(src)="b.GEN.3.8.1"> Ja he kuulivat , kuinka Herra Jumala käyskenteli paratiisissa illan viileydessä .
(src)="b.GEN.3.8.2"> Ja mies vaimoineen lymysi Herran Jumalan kasvojen edestä paratiisin puiden sekaan .
(trg)="b.GEN.3.8.1"> ಆಗ ಕರ್ತನಾದ ದೇವರು ದಿನದ ತಂಗಾಳಿಯಲ್ಲಿ ತೋಟದೊಳಗೆ ತಿರುಗಾಡುವ ಶಬ್ದವನ್ನು ಆದಾಮನೂ ಅವನ ಹೆಂಡತಿಯೂ ಕೇಳಿ ದೇವರಾದ ಕರ್ತನ ಸನ್ನಿಧಿಯಿಂದ ತೋಟದ ಮರಗಳಲ್ಲಿ ಅಡಗಿಕೊಂಡರು .

(src)="b.GEN.3.9.1"> Mutta Herra Jumala huusi miestä ja sanoi hänelle : " Missä olet ? "
(trg)="b.GEN.3.9.1"> ಆಗ ಕರ್ತನಾದ ದೇವರು ಆದಾಮನನ್ನು ಕರೆದು ಅವನಿಗೆ--ನೀನು ಎಲ್ಲಿದ್ದೀ ಅಂದನು .

(src)="b.GEN.3.10.1"> Hän vastasi : " Minä kuulin sinun askeleesi paratiisissa ja pelkäsin , sillä minä olen alasti , ja sentähden minä lymysin " .
(trg)="b.GEN.3.10.1"> ಅದಕ್ಕ ವನು--ನಿನ್ನ ಶಬ್ದವನ್ನು ತೋಟದಲ್ಲಿ ನಾನು ಕೇಳಿ ಬೆತ್ತಲೆಯಾಗಿರುವದರಿಂದ ಭಯಪಟ್ಟು ಅಡಗಿ ಕೊಂಡೆನು ಅಂದನು .

(src)="b.GEN.3.11.1"> Ja hän sanoi : " Kuka sinulle ilmoitti , että olet alasti ?
(src)="b.GEN.3.11.2"> Etkö syönyt siitä puusta , josta minä kielsin sinua syömästä ? "
(trg)="b.GEN.3.11.1"> ಅದಕ್ಕೆ ಆತನು--ನೀನು ಬೆತ್ತಲೆಯಾಗಿದ್ದೀ ಎಂದು ನಿನಗೆ ತಿಳಿಸಿದವರು ಯಾರು ? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಫಲವನ್ನು ತಿಂದಿದ್ದೀಯೋ ? ಅನ್ನಲು

(src)="b.GEN.3.12.1"> Mies vastasi : " Vaimo , jonka annoit olemaan minun kanssani , antoi minulle siitä puusta , ja minä söin " .
(trg)="b.GEN.3.12.1"> ಅವನು--ನೀನು ನನ್ನ ಸಂಗಡ ಇರುವದಕ್ಕೆ ಕೊಟ್ಟ ಸ್ತ್ರೀಯು ಆ ಮರದ ಫಲವನ್ನು ನನಗೆ ಕೊಟ್ಟಳು ; ನಾನು ತಿಂದೆನು ಎಂದು ಹೇಳಿದನು .

(src)="b.GEN.3.13.1"> Niin Herra Jumala sanoi vaimolle : " Mitäs olet tehnyt ? "
(src)="b.GEN.3.13.2"> Vaimo vastasi : " Käärme petti minut , ja minä söin " .
(trg)="b.GEN.3.13.1"> ಕರ್ತನಾದ ದೇವರು ಸ್ತ್ರೀಗೆ--ಇದೇನು ನೀನು ಮಾಡಿದ್ದು ಎಂದು ಕೇಳಿದಾಗ ಸ್ತ್ರೀಯು--ಸರ್ಪವು ನನ್ನನ್ನು ವಂಚಿಸಿದ್ದರಿಂದ ನಾನು ತಿಂದೆನು ಅಂದಳು .

(src)="b.GEN.3.14.1"> Ja Herra Jumala sanoi käärmeelle : " Koska tämän teit , kirottu ole sinä kaikkien karjaeläinten ja kaikkien metsän eläinten joukossa .
(src)="b.GEN.3.14.2"> Vatsallasi sinun pitää käymän ja tomua syömän koko elinaikasi .
(trg)="b.GEN.3.14.1"> ಆಗ ಕರ್ತನಾದ ದೇವರು ಸರ್ಪಕ್ಕೆ--ನೀನು ಇದನ್ನು ಮಾಡಿದ ಕಾರಣ ಎಲ್ಲಾ ಪಶುಗಳಲ್ಲಿಯೂ ಎಲ್ಲಾ ಅಡವಿಯ ಮೃಗಗಳ ಲ್ಲಿಯೂ ಶಪಿಸಲ್ಪಟ್ಟು ಜೀವದಿಂದಿರುವ ದಿವಸಗಳಲ್ಲೆಲ್ಲಾ ಹೊಟ್ಟೆಯಿಂದ ಹರಿದಾಡಿ ಮಣ್ಣನ್ನು ತಿನ್ನುವಿ .

(src)="b.GEN.3.15.1"> Ja minä panen vainon sinun ja vaimon välille ja sinun siemenesi ja hänen siemenensä välille ; se on polkeva rikki sinun pääsi , ja sinä olet pistävä sitä kantapäähän . "
(trg)="b.GEN.3.15.1"> ನಿನಗೂ ಸ್ತ್ರೀಗೂ ನಿನ್ನ ಸಂತತಿಗೂ ಸ್ತ್ರೀ ಸಂತತಿಗೂ ಹಗೆತನ ಇಡುವೆನು ; ಆತನು ನಿನ್ನ ತಲೆಯನ್ನು ಜಜ್ಜುವನು ಮತ್ತು ನೀನು ಆತನ ಹಿಮ್ಮಡಿಯನ್ನು , ಕಚ್ಚುವಿ ಅಂದನು .

(src)="b.GEN.3.16.1"> Ja vaimolle hän sanoi : " Minä teen suuriksi sinun raskautesi vaivat , kivulla sinun pitää synnyttämän lapsia ; mutta mieheesi on sinun halusi oleva , ja hän on sinua vallitseva " .
(trg)="b.GEN.3.16.1"> ಸ್ತ್ರೀಗೆ ಆತನು--ನಾನು ನಿನ್ನ ದುಃಖವನ್ನೂ ಗರ್ಭವೇದನೆಯನ್ನೂ ಅಧಿಕವಾಗಿ ಹೆಚ್ಚಿಸುವೆನು , ನೀನು ಕಷ್ಟದಿಂದ ಮಕ್ಕಳನ್ನು ಹೆರುವಿ , ನಿನ್ನ ಗಂಡನ ಮೇಲೆ ನಿನಗೆ ಆಶೆ ಇರುವದು ; ಅವನು ನಿನ್ನನ್ನು ಆಳುವನು ಅಂದನು .

(src)="b.GEN.3.17.1"> Ja Aadamille hän sanoi : " Koska kuulit vaimoasi ja söit puusta , josta minä kielsin sinua sanoen : `Älä syö siitä`, niin kirottu olkoon maa sinun tähtesi.
(src)="b.GEN.3.17.2"> Vaivaa nähden sinun pitää elättämän itseäsi siitä koko elinaikasi ;
(trg)="b.GEN.3.17.1"> ಆದಾಮನಿಗೆ ಆತನು--ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ತಿನ್ನಬಾರದೆಂದು ನಾನು ನಿನ ಆಜ್ಞಾಪಿಸಿದ ಮರದ ಫಲವನ್ನು ತಿಂದಕಾರಣ ನಿನ್ನ ನಿಮಿತ್ತ ಭೂಮಿಯು ಶಪಿಸಲ್ಪಟ್ಟಿದೆ ; ನಿನ್ನ ಜೀವನದ ದಿನಗಳಲ್ಲೆಲ್ಲಾ ದುಃಖದಲ್ಲೇ ನೀನು ಅದರ ಫಲವನ್ನು ತಿನ್ನುವಿ .

(src)="b.GEN.3.18.1"> orjantappuroita ja ohdakkeita se on kasvava sinulle , ja kedon ruohoja sinun on syötävä .
(trg)="b.GEN.3.18.1"> ಇದಲ್ಲದೆ ಭೂಮಿಯು ಮುಳ್ಳುಗಳನ್ನೂ ದತ್ತೂರಿಗಳನ್ನೂ ನಿನಗಾಗಿ ಬೆಳೆಯುವದು . ನೀನು ಹೊಲದ ಪಲ್ಯವನ್ನು ತಿನ್ನುವಿ .

(src)="b.GEN.3.19.1"> Otsasi hiessä sinun pitää syömän leipäsi , kunnes tulet maaksi jälleen , sillä siitä sinä olet otettu .
(src)="b.GEN.3.19.2"> Sillä maasta sinä olet , ja maaksi pitää sinun jälleen tuleman . "
(trg)="b.GEN.3.19.1"> ನೀನು ಮಣ್ಣಿಗೆ ತಿರುಗುವ ವರೆಗೆ ನಿನ್ನ ಹಣೆಯ ಬೆವರನ್ನು ಸುರಿಸಿ ರೊಟ್ಟಿಯನ್ನು ತಿನ್ನುವಿ . ಯಾಕಂದರೆ ನೀನು ಅದ ರೊಳಗಿಂದ ಅಂದರೆ ( ಮಣ್ಣಿನೊಳಗಿಂದ ) ತೆಗೆಯ ಲ್ಪಟ್ಟೆ ; ನೀನು ಮಣ್ಣಾಗಿದ್ದಿ , ಮಣ್ಣಿಗೆ ತಿರುಗಿಕೊಳ್ಳುವಿ ಅಂದನು .

(src)="b.GEN.3.20.1"> Ja mies antoi vaimolleen nimen Eeva , sillä hänestä tuli kaiken elävän äiti .
(trg)="b.GEN.3.20.1"> ಆದಾಮನು ತನ್ನ ಹೆಂಡತಿಯ ಹೆಸರನ್ನು ಹವ್ವ ಎಂದು ಕರೆದನು . ಯಾಕಂದರೆ ಆಕೆಯು ಜೀವವುಳ್ಳ ವರಿಗೆಲ್ಲಾ ತಾಯಿಯಾಗಿದ್ದಾಳೆ .

(src)="b.GEN.3.21.1"> Ja Herra Jumala teki Aadamille ja hänen vaimollensa puvut nahasta ja puki ne heidän yllensä .
(trg)="b.GEN.3.21.1"> ಕರ್ತನಾದ ದೇವರು ಆದಾಮನಿಗೂ ಅವನ ಹೆಂಡತಿಗೂ ಚರ್ಮದ ಅಂಗಿಗಳನ್ನು ಮಾಡಿ ಅವರಿಗೆ ತೊಡಿಸಿದನು .

(src)="b.GEN.3.22.1"> Ja Herra Jumala sanoi : " Katso , ihminen on tullut sellaiseksi kuin joku meistä , niin että hän tietää hyvän ja pahan .
(src)="b.GEN.3.22.2"> Kun ei hän nyt vain ojentaisi kättänsä ja ottaisi myös elämän puusta ja söisi ja eläisi iankaikkisesti ! "
(trg)="b.GEN.3.22.1"> ಇದ ಲ್ಲದೆ ಕರ್ತನಾದ ದೇವರು--ಇಗೋ , ಮನುಷ್ಯನು ಒಳ್ಳೇದರ ಕೆಟ್ಟದರ ಭೇದವನ್ನು ತಿಳಿದು ನಮ್ಮಲ್ಲಿ ಒಬ್ಬನಂತಾದನು ; ಈಗ ಅವನು ಕೈಚಾಚಿ ಜೀವವೃಕ್ಷದ ಫಲವನ್ನು ತೆಗೆದು ತಿಂದು ಎಂದೆಂದಿಗೂ ಬದುಕ ಬಾರದು ಅಂದನು .

(src)="b.GEN.3.23.1"> Niin Herra Jumala ajoi hänet pois Eedenin paratiisista viljelemään maata , josta hän oli otettu .
(trg)="b.GEN.3.23.1"> ಆದದರಿಂದ ಕರ್ತನಾದ ದೇವರು ಅವನನ್ನು ಯಾವದರಿಂದ ತೆಗೆದನೋ ಆ ಭೂಮಿಯನ್ನು ವ್ಯವಸಾಯಮಾಡುವದಕ್ಕೆ ಏದೆನ್ ‌ ತೋಟದಿಂದ ಹೊರಡಿಸಿಬಿಟ್ಟನು.ಹೀಗೆ ಆತನು ಮನುಷ್ಯನನ್ನು ಹೊರಗೆ ಹಾಕಿ ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಏದೆನ್ ‌ ತೋಟದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಕತ್ತಿಯನ್ನೂ ಇರಿಸಿದನು .

(src)="b.GEN.3.24.1"> Ja hän karkoitti ihmisen ja asetti Eedenin paratiisin itäpuolelle kerubit ynnä välkkyvän , leimuavan miekan vartioitsemaan elämän puun tietä .
(trg)="b.GEN.3.24.1"> ಹೀಗೆ ಆತನು ಮನುಷ್ಯನನ್ನು ಹೊರಗೆ ಹಾಕಿ ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ ಏದೆನ್ ‌ ತೋಟದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಎಲ್ಲಾ ಕಡೆಯಲ್ಲಿ ಸುತ್ತುವ ಜ್ವಾಲೆಯ ಕತ್ತಿಯನ್ನೂ ಇರಿಸಿದನು .

(src)="b.GEN.4.1.1"> Ja mies yhtyi vaimoonsa Eevaan ; ja tämä tuli raskaaksi ja synnytti Kainin ja sanoi : " Minä olen saanut pojan Herran avulla " .
(trg)="b.GEN.4.1.1"> ಆದಾಮನು ತನ್ನ ಹೆಂಡತಿಯಾದ ಹವ್ವಳನ್ನು ಕೂಡಿದನು . ಆಗ ಆಕೆಯು ಗರ್ಭಿಣಿಯಾಗಿ ಕಾಯಿನನನ್ನು ಹೆತ್ತು--ನಾನು ಕರ್ತ ನಿಂದ ಒಬ್ಬ ಮನುಷ್ಯನನ್ನು ಪಡೆದಿದ್ದೇನೆ ಅಂದಳು .

(src)="b.GEN.4.2.1"> Ja taas hän synnytti pojan , veljen Kainille , Aabelin .
(src)="b.GEN.4.2.2"> Ja Aabelista tuli lampuri , mutta Kainista peltomies .
(trg)="b.GEN.4.2.1"> ತರುವಾಯ ಆಕೆಯು ಅವನ ಸಹೋದರನಾದ ಹೇಬೆಲನನ್ನು ಹೆತ್ತಳು . ಹೇಬೆಲನು ಕುರಿ ಕಾಯುವವನಾ ದನು , ಕಾಯಿನನು ವ್ಯವಸಾಯಮಾಡುವವನಾದನು .

(src)="b.GEN.4.3.1"> Ja jonkun ajan kuluttua tapahtui , että Kain toi maan hedelmistä uhrilahjan Herralle ;
(trg)="b.GEN.4.3.1"> ಕಾಲಾಂತರದಲ್ಲಿ ಸಂಭವಿಸಿದ್ದೇನಂದರೆ , ಕಾಯಿ ನನು ಹೊಲದ ಫಲವನ್ನು ಕರ್ತನಿಗೆ ಕಾಣಿಕೆಯಾಗಿ ತಂದನು .

(src)="b.GEN.4.4.1"> ja myöskin Aabel toi uhrilahjan laumansa esikoisista , niiden rasvoista .
(src)="b.GEN.4.4.2"> Ja Herra katsoi Aabelin ja hänen uhrilahjansa puoleen ;
(trg)="b.GEN.4.4.1"> ಹೇಬೆಲನು ಸಹ ತನ್ನ ಮಂದೆಯಿಂದ ಕೊಬ್ಬಿದ ಚೊಚ್ಚಲಾದವುಗಳನ್ನು ತಂದನು . ಆಗ ಕರ್ತನು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಗೌರವಿಸಿದನು .

(src)="b.GEN.4.5.1"> mutta Kainin ja hänen uhrilahjansa puoleen hän ei katsonut .
(src)="b.GEN.4.5.2"> Silloin Kain vihastui kovin , ja hänen hahmonsa synkistyi .
(trg)="b.GEN.4.5.1"> ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಆತನು ಗೌರವಿಸಲಿಲ್ಲ . ಆಗ ಕಾಯಿ ನನು ಬಹು ಕೋಪಗೊಂಡನು , ಅವನ ಮುಖವು ಕಳೆಗುಂದಿತು .

(src)="b.GEN.4.6.1"> Ja Herra sanoi Kainille : " Miksi olet vihastunut , ja miksi hahmosi synkistyy ?
(trg)="b.GEN.4.6.1"> ಆಗ ಕರ್ತನು ಕಾಯಿನನಿಗೆ--ಯಾಕೆ ಕೋಪಗೊಂಡಿದ್ದೀ ? ಯಾಕೆ ನಿನ್ನ ಮುಖವು ಕಳೆಗುಂದಿತು ?

(src)="b.GEN.4.7.1"> Eikö niin : jos teet hyvin , voit kohottaa katseesi ; mutta jos et hyvin tee , niin väijyy synti ovella , ja sen halu on sinuun , mutta hallitse sinä sitä ! "
(trg)="b.GEN.4.7.1"> ನೀನು ಒಳ್ಳೆಯದನ್ನು ಮಾಡಿದರೆ ಅಂಗೀಕರಿಸಲ್ಪಡುವದಿಲ್ಲವೇ ? ನೀನು ಒಳ್ಳೆಯದನ್ನು ಮಾಡದೆ ಹೋದರೆ ಪಾಪವು ಬಾಗಲಲ್ಲಿ ಹೊಂಚಿ ಕೊಂಡಿರುವದು ; ನಿನ್ನ ಮೇಲೆ ಅದಕ್ಕೆ ಆಶೆ ಇರುವದು , ನೀನು ಅದನ್ನು ಆಳಬೇಕು ಎಂದು ಹೇಳಿದನು .

(src)="b.GEN.4.8.1"> Ja Kain sanoi veljellensä Aabelille : " Menkäämme kedolle " .
(src)="b.GEN.4.8.2"> Ja heidän kedolla ollessansa Kain karkasi veljensä Aabelin kimppuun ja tappoi hänet .
(trg)="b.GEN.4.8.1"> ಆಗ ಕಾಯಿನನು ತನ್ನ ಸಹೋದರನಾದ ಹೇಬೆಲನ ಸಂಗಡ ಮಾತನಾಡಿದನು ; ತರುವಾಯ ಆದದ್ದೇ ನಂದರೆ , ಅವರು ಹೊಲದಲ್ಲಿದ್ದಾಗ ಕಾಯಿನನು ತನ್ನ ಸಹೋದರನಾದ ಹೇಬೆಲನಿಗೆ ವಿರುದ್ಧವಾಗಿ ಎದ್ದು ಅವನನ್ನು ಕೊಂದುಹಾಕಿದನು .

(src)="b.GEN.4.9.1"> Niin Herra sanoi Kainille : " Missä on veljesi Aabel ? "
(src)="b.GEN.4.9.2"> Hän vastasi : " En tiedä ; olenko minä veljeni vartija ? "
(trg)="b.GEN.4.9.1"> ಆಗ ಕರ್ತನು ಕಾಯಿನನಿಗೆ--ನಿನ್ನ ಸಹೋದರ ನಾದ ಹೇಬೆಲನು ಎಲ್ಲಿ ಅಂದನು . ಅದಕ್ಕವನು-- ನಾನು ಅರಿಯೆನು ; ನನ್ನ ಸಹೋದರನನ್ನು ನಾನು ಕಾಯುವವನೋ ಅಂದನು .

(src)="b.GEN.4.10.1"> Ja hän sanoi : " Mitä olet tehnyt ?
(src)="b.GEN.4.10.2"> Kuule , veljesi veri huutaa minulle maasta .
(trg)="b.GEN.4.10.1"> ಆತನು--ನೀನು ಮಾಡಿದ್ದೇನು ? ನಿನ್ನ ಸಹೋದರನ ರಕ್ತದ ಸ್ವರವು ಭೂಮಿಯಿಂದ ನನ್ನನ್ನು ಕೂಗುತ್ತದೆ .

(src)="b.GEN.4.11.1"> Ja nyt ole kirottu ja karkoitettu pois tältä vainiolta , joka avasi suunsa ottamaan veljesi veren sinun kädestäsi .
(trg)="b.GEN.4.11.1"> ಆದದರಿಂದ ಈಗ ನಿನ್ನ ಕೈಯಿಂದ ನಿನ್ನ ಸಹೋದರನ ರಕ್ತವನ್ನು ಕುಡಿಯುವದಕ್ಕೆ ತನ್ನ ಬಾಯನ್ನು ತೆರೆದ ಭೂಮಿಯ ದೆಸೆಯಿಂದ ನೀನು ಶಪಿಸಲ್ಪಟ್ಟವನಾದಿ .

(src)="b.GEN.4.12.1"> Kun maata viljelet , ei se ole enää sinulle satoansa antava ; kulkija ja pakolainen pitää sinun oleman maan päällä . "
(trg)="b.GEN.4.12.1"> ನೀನು ಭೂಮಿಯನ್ನು ವ್ಯವಸಾಯಮಾಡುವಾಗ ಇನ್ನು ಮೇಲೆ ಅದು ತನ್ನ ಸಾರವನ್ನು ಕೊಡುವದಿಲ್ಲ . ನೀನು ಭೂಮಿಯಲ್ಲಿ ಅಲೆದಾಡುವವನಾಗಿಯೂ ತಿರುಗಾಡು ವವನಾಗಿಯೂ ಇರುವಿ ಅಂದನು .

(src)="b.GEN.4.13.1"> Ja Kain sanoi Herralle : " Syyllisyyteni on suurempi , kuin että sen kantaa voisin .
(trg)="b.GEN.4.13.1"> ಆಗ ಕಾಯಿನನು ಕರ್ತನಿಗೆ--ನನ್ನ ಶಿಕ್ಷೆಯು ನಾನು ತಾಳಲಾರದಷ್ಟು ದೊಡ್ಡದಾಗಿದೆ .

(src)="b.GEN.4.14.1"> Katso , sinä karkoitat minut nyt pois vainiolta , ja minun täytyy lymytä sinun kasvojesi edestä ja olla kulkija ja pakolainen maan päällä ; ja kuka ikinä minut kohtaa , se tappaa minut . "
(trg)="b.GEN.4.14.1"> ಇಗೋ , ನೀನು ಈ ದಿನ ನನ್ನನ್ನು ಈ ಸ್ಥಳದಿಂದ ಹೊರಡಿಸಿದ್ದೀ , ನಿನ್ನ ಮುಖಕ್ಕೆ ನಾನು ಮರೆಯಾಗಿರಬೇಕು ; ಭೂಮಿಯಲ್ಲಿ ಅಲೆಯು ವವನೂ ತಿರುಗಾಡುವವನೂ ಆಗಿರಬೇಕು ; ಇದಲ್ಲದೆ ನನ್ನನ್ನು ಕಂಡವರೆಲ್ಲಾ ಕೊಲ್ಲುವರು ಅಂದನು .

(src)="b.GEN.4.15.1"> Mutta Herra sanoi hänelle : " Sentähden , kuka ikinä tappaa Kainin , hänelle se pitää seitsenkertaisesti kostettaman " .
(src)="b.GEN.4.15.2"> Ja Herra pani Kainiin merkin , ettei kukaan , joka hänet kohtaisi , tappaisi häntä .
(trg)="b.GEN.4.15.1"> ಆದದರಿಂದ ಕರ್ತನು ಅವನಿಗೆ--ಕಾಯಿನನನ್ನು ಕೊಲ್ಲುವವನು ಯಾವನೋ ಅವನು ಏಳರಷ್ಟು ಪ್ರತಿದಂಡನೆ ಹೊಂದುವನು ಎಂದು ಹೇಳಿದನು . ಕಾಯಿನನನ್ನು ಕಂಡವರು ಕೊಲ್ಲದ ಹಾಗೆ ಕರ್ತನು ಅವನ ಮೇಲೆ ಒಂದು ಗುರುತು ಇಟ್ಟನು .

(src)="b.GEN.4.16.1"> Niin Kain poistui Herran kasvojen edestä ja asettui asumaan Noodin maahan , itään päin Eedenistä .
(trg)="b.GEN.4.16.1"> ಕಾಯಿನನು ಕರ್ತನ ಸನ್ನಿಧಿಯಿಂದ ಹೊರಟು ಏದೆನಿನ ಪೂರ್ವದಿಕ್ಕಿನಲ್ಲಿದ್ದ ನೋದು ಎಂಬ ದೇಶ ದಲ್ಲಿ ವಾಸಿಸಿದನು .

(src)="b.GEN.4.17.1"> Ja Kain yhtyi vaimoonsa , ja tämä tuli raskaaksi ja synnytti Hanokin .
(src)="b.GEN.4.17.2"> Ja hän rakensi kaupungin ja antoi sille kaupungille poikansa nimen Hanok .
(trg)="b.GEN.4.17.1"> ಕಾಯಿನನು ತನ್ನ ಹೆಂಡತಿಯನ್ನು ಕೂಡಿದನು ; ಆಕೆಯು ಗರ್ಭಿಣಿಯಾಗಿ ಹನೋಕನನ್ನು ಹೆತ್ತಳು . ಆಗ ಕಾಯಿನನು ಒಂದು ಪಟ್ಟಣವನ್ನು ಕಟ್ಟಿ ತನ್ನ ಮಗನಾದ ಹನೋಕನ ಹೆಸರನ್ನು ಆ ಪಟ್ಟಣಕ್ಕೆ ಇಟ್ಟನು .

(src)="b.GEN.4.18.1"> Ja Hanokille syntyi Iirad , Iiradille syntyi Mehujael , Mehujaelille syntyi Metusael , Metusaelille syntyi Lemek .
(trg)="b.GEN.4.18.1"> ಹನೋಕನಿಂದ ಈರಾದನು ಹುಟ್ಟಿದನು ; ಈರಾದನಿಂದ ಮೆಹೂಯಾಯೇಲನು ಹುಟ್ಟಿದನು ; ಮೆಹೂಯಾಯೇಲನಿಂದ ಮೆತೂಷಾ ಯೇಲನು ಹುಟ್ಟಿದನು ; ಮೆತೂಷಾಯೇಲನಿಂದ ಲೆಮೆಕನು ಹುಟ್ಟಿದನು .

(src)="b.GEN.4.19.1"> Lemek otti itselleen kaksi vaimoa , toisen nimi oli Aada ja toisen nimi Silla .
(trg)="b.GEN.4.19.1"> ಲೆಮೆಕನು ಇಬ್ಬರು ಹೆಂಡತಿಯರನ್ನು ಮಾಡಿಕೊಂಡನು . ಒಬ್ಬಳ ಹೆಸರು ಆದಾ , ಮತ್ತೊಬ್ಬಳ ಹೆಸರು ಚಿಲ್ಲಾ .

(src)="b.GEN.4.20.1"> Ja Aada synnytti Jaabalin ; hänestä tuli niiden kantaisä , jotka teltoissa asuvat ja karjanhoitoa harjoittavat .
(trg)="b.GEN.4.20.1"> ಆದಾ ಯಾಬಾಲನನ್ನು ಹೆತ್ತಳು ; ಇವನು ಗುಡಾರಗಳಲ್ಲಿ ವಾಸಿಸುವವನಾಗಿ ದನಕರು ಗಳಿದ್ದವರಿಗೆ ತಂದೆಯಾದನು .