# dik/Dinka-NT.xml.gz
# kn/Kannada.xml.gz


(src)="b.MAT.1.1.1"> Awarek de kuen e dhienh ci Yecu Kritho dhieeth , ee Wen e Dabid , wen e Abraɣam .
(trg)="b.MAT.1.1.1"> ಯೇಸು ಕ್ರಿಸ್ತನ ವಂಶಾವಳಿಯ ಪುಸ್ತಕವು ; ಆತನು ದಾವೀದನ ಮಗನು , ಆತನು ಅಬ್ರ ಹಾಮನ ಮಗನು .

(src)="b.MAT.1.2.1"> Abraɣam aci Yithak dhieeth ; ku dhieth Yithak Jakop ; ku dhieth Jakop Juda ku wɛɛtwuun ;
(trg)="b.MAT.1.2.1"> ಅಬ್ರಹಾಮನಿಂದ ಇಸಾಕನು ಹುಟ್ಟಿದನು ; ಇಸಾಕ ನಿಂದ ಯಾಕೋಬನು ಹುಟ್ಟಿದನು ; ಯಾಕೋಬ ನಿಂದ ಯೂದನೂ ಅವನ ಸಹೋದರರೂ ಹುಟ್ಟಿ ದರು ;

(src)="b.MAT.1.3.1"> ku dhieth Juda Peredh ku Dhera e Tamar ; ku dhieth Peredh Kedhron ; ku dhieth Kedhron Aram ;
(trg)="b.MAT.1.3.1"> ಯೂದನಿಂದ ತಾಮಾರಳಲ್ಲಿ ಪೆರೆಚನೂ ಜೆರಹನೂ ಹುಟ್ಟಿದರು ; ಪೆರೆಚನಿಂದ ಹೆಚ್ರೋಮನು ಹುಟ್ಟಿದನು ; ಹೆಚ್ರೋಮನಿಂದ ಅರಾಮನು ಹುಟ್ಟಿ ದನು ;

(src)="b.MAT.1.4.1"> ku dhieth Aram Aminadab ; ku dhieth Aminadab Nacon ; ku dhieth Nacɔn Thalmon ;
(trg)="b.MAT.1.4.1"> ಅರಾಮನಿಂದ ಅವ್ಮೆಾನಾದಾಬನು ಹುಟ್ಟಿ ದನು ; ಅವ್ಮೆಾನಾದಾಬನಿಂದ ನಹಶೋನನು ಹುಟ್ಟಿ ದನು ; ನಹಶೋನನಿಂದ ಸಲ್ಮೋನನು ಹುಟ್ಟಿದನು ;

(src)="b.MAT.1.5.1"> ku dhieth Thalmon Boadh e Rakab ; ku dhieth Boadh Obed e Ruth ; ku dhieth Obed Jethe ;
(trg)="b.MAT.1.5.1"> ಸಲ್ಮೋನನಿಂದ ರಾಹಾಬಳಲ್ಲಿ ಬೋವಜನು ಹುಟ್ಟಿ ದನು ; ಬೋವಜನಿಂದ ರೂತಳಲ್ಲಿ ಓಬೇದನು ಹುಟ್ಟಿದನು ; ಓಬೇದನಿಂದ ಇಷಯನು ಹುಟ್ಟಿದನು ;

(src)="b.MAT.1.6.1"> ku dhieth Jethe Dabid malik .
(src)="b.MAT.1.6.2"> Ku dhieth Dabid malik Tholomon ne tiiŋ waan ci kɔn aa tiiŋ de Uria ;
(trg)="b.MAT.1.6.1"> ಇಷಯನಿಂದ ಅರಸನಾದ ದಾವೀದನು ಹುಟ್ಟಿದನು . ಅರಸನಾದ ದಾವೀದನಿಂದ ಊರೀಯನ ಹೆಂಡತಿ ಯಾಗಿದ್ದವಳಲ್ಲಿ ಸೊಲೊಮೋನನು ಹುಟ್ಟಿದನು ;

(src)="b.MAT.1.7.1"> ku dhieth Tholomon Rekoboam ; ku dhieth Rekoboam Abija ; ku dhieth Abija Atha ;
(trg)="b.MAT.1.7.1"> ಸೊಲೊಮೋನನಿಂದ ರೆಹಬ್ಬಾಮನು ಹುಟ್ಟಿದನು ; ರೆಹಬ್ಬಾಮನಿಂದ ಅಬೀಯನು ಹುಟ್ಟಿದನು ; ಅಬೀಯನಿಂದ ಆಸನು ಹುಟ್ಟಿದನು ;

(src)="b.MAT.1.8.1"> ku dhieth Atha Jekocapat ; ku dhieth Jekocapat Joram ; ku dhieth Joram Udhia ;
(trg)="b.MAT.1.8.1"> ಆಸನಿಂದ ಯೆಹೋಷಾಫಾಟನು ಹುಟ್ಟಿದನು ; ಯೆಹೋಷಾ ಫಾಟನಿಂದ ಯೆಹೋರಾಮನು ಹುಟ್ಟಿದನು ; ಯೆಹೋ ರಾಮನಿಂದ ಉಜ್ಜೀಯನು ಹುಟ್ಟಿದನು ;

(src)="b.MAT.1.9.1"> ku dhieth Udhia Jotham ; ku dhieth Jotham Akadh ; ku dhieth Akadh Kedhekia ;
(trg)="b.MAT.1.9.1"> ಉಜ್ಜೀಯ ನಿಂದ ಯೋತಾಮನು ಹುಟ್ಟಿದನು ; ಯೋತಾಮನಿಂದ ಆಹಾಜನು ಹುಟ್ಟಿದನು ; ಆಹಾಜನಿಂದ ಹಿಜ್ಕೀಯನು ಹುಟ್ಟಿದನು ;

(src)="b.MAT.1.10.1"> ku dhieth Kedhekia Manathe ; ku dhieth Manathe Amon ; ku dhieth Amon Jothia ;
(trg)="b.MAT.1.10.1"> ಹಿಜ್ಕೀಯನಿಂದ ಮನಸ್ಸೆಯು ಹುಟ್ಟಿದನು ; ಮನಸ್ಸೆಯಿಂದ ಆಮೋನನು ಹುಟ್ಟಿದನು ; ಆಮೋನನಿಂದ ಯೋಷೀಯನು ಹುಟ್ಟಿದನು ;

(src)="b.MAT.1.11.1"> ku dhieth Jothia Jekonia ku wɛɛtwuun , cit man e run waan jɔte kɔc leereke Babulon .
(trg)="b.MAT.1.11.1"> ಅವರು ಬಾಬೆಲಿಗೆ ಸೆರೆಯಾಗಿ ಒಯ್ಯಲ್ಪಟ್ಟ ಸಮಯದಲ್ಲಿ ಯೋಷೀಯನಿಂದ ಯೆಕೊನ್ಯನೂ ಅವನ ಸಹೋದರರೂ ಹುಟ್ಟಿದರು .

(src)="b.MAT.1.12.1"> Na ɣɔn , aci kɔc thok e jot leereke Babulon , ke Jekonia dhieth Calathiel ; ku dhieth Calathiel Dhorobabel ;
(trg)="b.MAT.1.12.1"> ಅವರು ಬಾಬೆಲಿಗೆ ಬಂದ ಮೇಲೆ ಯೆಕೂನ್ಯ ನಿಂದ ಶೆಯಲ್ತಿಯೇಲನು ಹುಟ್ಟಿದನು ; ಶೆಯೆಲ್ತಿ ಯೇಲಿನಿಂದ ಜೆರುಬ್ಬಾಬೆಲನು ಹುಟ್ಟಿದನು ;

(src)="b.MAT.1.13.1"> ku dhieth Dhorobabel Abiud ; ku dhieth Abiud Eliakim ; ku dhieth Eliakim Adhor ;
(trg)="b.MAT.1.13.1"> ಜೆರುಬ್ಬಾಬೆಲನಿಂದ ಅಬಿಹೂದನು ಹುಟ್ಟಿದನು ; ಅಬಿಹೂದನಿಂದ ಎಲ್ಯಕೀಮನು ಹುಟ್ಟಿದನು ; ಎಲ್ಯ ಕೀಮನಿಂದ ಅಜೋರನು ಹುಟ್ಟಿದನು ;

(src)="b.MAT.1.14.1"> ku dhieth Adhor Thadok ; ku dhieth Thadok Acim ; ku dhieth Acim Eliud ;
(trg)="b.MAT.1.14.1"> ಅಜೋರ ನಿಂದ ಸದೋಕನು ಹುಟ್ಟಿದನು ; ಸದೋಕನಿಂದ ಅಖೀಮನು ಹುಟ್ಟಿದನು ; ಅಖೀಮನಿಂದ ಎಲಿ ಹೂದನು ಹುಟ್ಟಿದನು ;

(src)="b.MAT.1.15.1"> ku dhieth Eliud Eleadhar ; ku dhieth Eleadhar Mathan ; ku dhieth Mathan Jakop ;
(trg)="b.MAT.1.15.1"> ಎಲಿಹೂದನಿಂದ ಎಲಿ ಯಾಜರನು ಹುಟ್ಟಿದನು ; ಎಲಿಯಾಜರನಿಂದ ಮತ್ತಾನ ನು ಹುಟ್ಟಿದನು ; ಮತ್ತಾನನಿಂದ ಯಾಕೋಬನು ಹುಟ್ಟಿದನು ;

(src)="b.MAT.1.16.1"> ku dhieth Jakop Jothep mony e Mari , nyan waan dhieth Yecu , cɔl Kritho .
(trg)="b.MAT.1.16.1"> ಕ್ರಿಸ್ತನೆಂದು ಕರೆಯಲ್ಪಟ್ಟ ಯೇಸು ಮರಿ ಯಳಲ್ಲಿ ಹುಟ್ಟಿದನು ; ಆಕೆಯ ಗಂಡನಾದ ಯೋಸೇ ಫನು ಯಾಕೋಬನಿಂದ ಹುಟ್ಟಿದನು .

(src)="b.MAT.1.17.1"> Yen kuen guop ka , kuen e dhieth ebɛn , cak e Abraɣam aɣet Dabid acik yiic thieer ku ŋuan ; ku kuen e dhieth cak e Dabid aɣet jon ci kɔc jɔt leereke Babulon acik yiic thieer ku ŋuan ; ku kuen e dhieth cak e jon ci kɔc jɔt leereke Babulon aɣet Kritho acik yiic thieer ku ŋuan .
(trg)="b.MAT.1.17.1"> ಹೀಗೆ ಅಬ್ರಹಾಮನಿಂದ ದಾವೀದನ ವರೆಗೆ ಒಟ್ಟು ಹದಿನಾಲ್ಕು ತಲೆಗಳು ; ದಾವೀದನು ಮೊದಲು ಗೊಂಡು ಬಾಬೆಲಿಗೆ ಸೆರೆಹೋಗುವ ವರೆಗೆ ಹದಿ ನಾಲ್ಕು ತಲೆಗಳು ; ಬಾಬೆಲಿಗೆ ಸೆರೆಹೋದಂದಿನಿಂದ ಕ್ರಿಸ್ತನ ವರೆಗೆ ಹದಿನಾಲ್ಕು ತಲೆಗಳು .

(src)="b.MAT.1.18.1"> Dhienh e dhieethe Yecu Kritho ki : Thieŋ de Mari man aci kɔn lueel keke Jothep ; na wen , aŋootki ke ke ken guɔ reer etok , ke yok ade yic meth ne kede Weidit Ɣer .
(trg)="b.MAT.1.18.1"> ಯೇಸು ಕ್ರಿಸ್ತನ ಜನನವು ಹೀಗಾಯಿತು : ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿದಾಗ ಅವರು ಕೂಡುವದಕ್ಕಿಂತ ಮುಂಚೆ ಆಕೆಯು ಪವಿತ್ರಾತ್ಮನಿಂದ ಗರ್ಭಿಣಿಯಾದದ್ದು ಕಂಡು ಬಂತು .

(src)="b.MAT.1.19.1"> Ku Jothep monyde ee raan piɛth , go piɔu cien luɔi lueel en en e kɔc niim , ku ade piɔu luɔi bi en e pɔl ke kuc kɔc .
(trg)="b.MAT.1.19.1"> ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದು ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ ರಹಸ್ಯವಾಗಿ ಆಕೆಯನ್ನು ಬಿಟ್ಟುಬಿಡಬೇಕೆಂದು ಆಲೋಚಿಸುತ್ತಿದ್ದನು .

(src)="b.MAT.1.20.1"> Ku te ŋoot en ke ciet ekake e yepiɔu , di , ke tunynhial e Bɛnydit tul tede yen ke e nyuoth , lueel , yan , Jothep , wen e Dabid , du riɔc e luɔi bi yin Mari noom bi aa tiiŋdu ; ke ci yok e yeyac ee Weidit Ɣer kek aa dhieth en .
(trg)="b.MAT.1.20.1"> ಅವನು ಇವುಗಳನ್ನು ಆಲೋಚನೆ ಮಾಡುತ್ತಿದ್ದಾಗ ಇಗೋ , ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿ ಕೊಂಡು-- ಯೋಸೇಫನೇ , ದಾವೀದನ ಕುಮಾರನೇ , ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳು ವದಕ್ಕೆ ಭಯಪಡಬೇಡ ; ಯಾಕಂದರೆ ಆಕೆಯ ಗರ್ಭವು ಪವಿತ್ರಾತ್ಮನಿಂದಲೇ ಆಗಿದೆ .

(src)="b.MAT.1.21.1"> Ku abi mɛwa dhieeth , ku aba cak rin , an , YECU ; luɔi bi en kɔcken kony ne karɛcken .
(trg)="b.MAT.1.21.1"> ಆಕೆಯು ಒಬ್ಬ ಮಗನನ್ನು ಹೆರುವಳು ; ನೀನು ಆತನಿಗೆ ಯೇಸು ಎಂದು ಕರೆಯಬೇಕು ; ಯಾಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು ಅಂದನು .

(src)="b.MAT.1.22.1"> Ku kake acike looi kedhie , e luɔi bi jam aa yic jam ɣɔn cii Bɛnydit lueel ne thoŋ e nebi , yan ,
(trg)="b.MAT.1.22.1"> ಪ್ರವಾದಿಯ ಮುಖಾಂತರ ಕರ್ತನು ಹೇಳಿದ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು .

(src)="b.MAT.1.23.1"> Tieŋki , dhueny ken kɔn yok keke moc abi meth yok , ago mɛwa dhieeth , Ku abik meth cak rin , an , Emanuel ; ( te puke yen e thoŋda , yen aye , Nhialic ee tɔu keke wook ) .
(trg)="b.MAT.1.23.1"> ಆ ಮಾತೇನಂದರೆ -- ಇಗೋ , ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಳು ; ಅವರು ಆತನ ಹೆಸರನ್ನು ಇಮ್ಮಾನುವೇಲ್ ‌ ಎಂದು ಕರೆಯುವರು ಎಂಬದೇ . ದೇವರು ನಮ್ಮ ಕೂಡ ಇದ್ದಾನೆ ಎಂಬದು ಇದರ ಅರ್ಥ .

(src)="b.MAT.1.24.1"> Na wen , aci paac e ninic , en Jothep , ke jɔ looi cit man ci tunynhial e Bɛnydit e lɛk en , go tiiŋde noom ;
(trg)="b.MAT.1.24.1"> ಆಗ ಯೋಸೇ ಫನು ನಿದ್ರೆಯಿಂದ ಎಚ್ಚತ್ತು ಕರ್ತನ ದೂತನು ತನಗೆ ಅಪ್ಪಣೆ ಕೊಟ್ಟಂತೆ ತನ್ನ ಹೆಂಡತಿಯನ್ನು ಸೇರಿಸಿಕೊಂಡನು ; ಆಕೆಯು ತನ್ನ ಚೊಚ್ಚಲ ಮಗನನ್ನು ಹೆರುವ ತನಕ ಅವನು ಆಕೆಯನ್ನು ಅರಿಯಲಿಲ್ಲ ; ಅವನು ಆತನ ಹೆಸರನ್ನು ಯೇಸು ಎಂದು ಕರೆದನು .

(src)="b.MAT.1.25.1"> ku ken nin ke yen , te ŋoot en ke ken wendɛn e kɛɛi yen dhieeth ; ku jɔ cak rin , an , YECU .
(trg)="b.MAT.1.25.1"> ಆಕೆಯು ತನ್ನ ಚೊಚ್ಚಲ ಮಗನನ್ನು ಹೆರುವ ತನಕ ಅವನು ಆಕೆಯನ್ನು ಅರಿಯಲಿಲ್ಲ ; ಅವನು ಆತನ ಹೆಸರನ್ನು ಯೇಸು ಎಂದು ಕರೆದನು .

(src)="b.MAT.2.1.1"> Na wen , aci Yecu guɔ dhieeth e Bethlekem de Judaya e akool ke Kerod malik , ke roor pelniim ke ke jɔ bɛn ten ee akɔl thok bɛn , abiki Jeruthalem ,
(trg)="b.MAT.2.1.1"> ಅರಸನಾದ ಹೆರೋದನ ದಿನಗಳಲ್ಲಿ ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಹುಟ್ಟಿದಾಗ ಇಗೋ , ಮೂಡಲದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು --

(src)="b.MAT.2.2.1"> bik ku thiecki , yan , Nu nou en e mɛnh wen ci dhieeth , an , ee malik de Judai ?
(src)="b.MAT.2.2.2"> Wok e cieerde tiŋ ten ee akɔl thok bɛn , ku wok e bɔ buk bɛn lam .
(trg)="b.MAT.2.2.1"> ಯೆಹೂದ್ಯರ ಅರಸ ನಾಗಿ ಹುಟ್ಟಿದಾತನು ಎಲ್ಲಿದ್ದಾನೆ ? ಯಾಕೆಂದರೆ ನಾವು ಮೂಡಲದಲ್ಲಿ ಆತನ ನಕ್ಷತ್ರವನ್ನು ನೋಡಿ ಆತನನ್ನು ಆರಾಧಿಸುವದಕ್ಕೆ ಬಂದಿದ್ದೇವೆ ಅಂದರು .

(src)="b.MAT.2.3.1"> Na wen , aci malik Kerod ekene piŋ , go piɔu diɛɛr , ku diɛɛr Jeruthalem ebɛn ne yen etok .
(trg)="b.MAT.2.3.1"> ಅರಸನಾದ ಹೆರೋದನು ಇವುಗಳನ್ನು ಕೇಳಿ ಅವನು ಯೆರೂಸ ಲೇಮಿನವರೆಲ್ಲರೊಂದಿಗೆ ಕಳವಳಪಟ್ಟನು .

(src)="b.MAT.2.4.1"> Na wen , aci banydit ke ka ke Nhialic tɔ kut keniim kedhie keke kɔc e loŋ gɔɔr ne kɔc yiic , ke ke thieec e te bi Kritho dhieeth thin .
(trg)="b.MAT.2.4.1"> ಇದಲ್ಲದೆ ಅವನು ಜನರ ಎಲ್ಲಾ ಪ್ರಧಾನ ಯಾಜಕರನ್ನೂ ಶಾಸ್ತ್ರಿಗಳನ್ನೂ ಒಟ್ಟುಗೂಡಿಸಿ ಕ್ರಿಸ್ತನು ಹುಟ್ಟತಕ್ಕದ್ದು ಎಲ್ಲಿ ಎಂದು ಅವರನ್ನು ವಿಚಾರಿಸಿದನು .

(src)="b.MAT.2.5.1"> Agoki yɔɔk , yan , E Bethlekem de Judaya ; yen aci nebi gɔɔr ɣɔn ale , yan ,
(trg)="b.MAT.2.5.1"> ಅದಕ್ಕೆ ಅವರು ಅವನಿಗೆ--ಯೂದಾಯದ ಬೇತ್ಲೆಹೇಮಿ ನಲ್ಲಿಯೇ ; ಯಾಕಂದರೆ ಪ್ರವಾದಿಯಿಂದ ಹೀಗೆ ಬರೆಯಲ್ಪಟ್ಟಿದೆ--

(src)="b.MAT.2.6.1"> Ku yin , Bethlekem , yin wun nu piny de Juda , Yin cie mɛnh koor e bany ke Juda yiic ; Bɛnydit abi bɛn bei ne yiyic , Bɛny bi kɔckien e Yithrael aa tiit .
(trg)="b.MAT.2.6.1"> ಯೂದಾಯದ ಸೀಮೆಯಲ್ಲಿನ ಬೇತ್ಲೆಹೇಮೇ , ಯೂದಾಯದ ಮುಖ್ಯ ಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರವೂ ಸಣ್ಣದಲ್ಲ ; ಯಾಕಂದರೆ ನನ್ನ ಜನರಾದ ಇಸ್ರಾಯೇಲ್ಯರನ್ನು ಆಳುವ ಒಬ್ಬ ಅಧಿಪತಿಯು ನಿನ್ನೊಳಗಿಂದ ಬರುವನು ಎಂದು ಹೇಳಿದರು .

(src)="b.MAT.2.7.1"> Go Kerod roor pelniim cɔɔl ke kuc kɔc , ku jɔ ke cok e thieec en keek e akool e tule cieer .
(trg)="b.MAT.2.7.1"> ಆಗ ಹೆರೋದನು ರಹಸ್ಯವಾಗಿ ಆ ಜ್ಞಾನಿಗಳನ್ನು ಕರೆಯಿಸಿ ಆ ನಕ್ಷತ್ರವು ಯಾವ ಕಾಲದಲ್ಲಿ ಕಾಣಿಸಿಕೊಂಡಿತೆಂದು ಅವರನ್ನು ಪರಿಷ್ಕಾರವಾಗಿ ವಿಚಾರಿಸಿಕೊಂಡು

(src)="b.MAT.2.8.1"> Go ke tuɔɔc Bethlekem , lueel , yan , Lak cok e luɔp wek mɛnhthiine ; ku te ca wek e yok , ke we tɔ ya yine thok , ke yɛn dueer bɛn ba bɛn lam ayadaŋ .
(trg)="b.MAT.2.8.1"> ಅವರನ್ನು ಬೇತ್ಲೆಹೇಮಿಗೆ ಕಳುಹಿ ಸುವಾಗ--ನೀವು ಹೋಗಿ ಆ ಶಿಶುವಿನ ವಿಷಯದಲ್ಲಿ ಪರಿಷ್ಕಾರವಾಗಿ ಹುಡುಕಿ ಆತನನ್ನು ಕಂಡುಕೊಂಡ ಮೇಲೆ ತಿರಿಗಿ ಬಂದು ನನಗೆ ತಿಳಿಸಿರಿ ; ಆಗ ನಾನು ಸಹ ಬಂದು ಆತನನ್ನು ಆರಾಧಿಸುವೆನು ಅಂದನು .

(src)="b.MAT.2.9.1"> Na wen , acik kede malik piŋ , ke ke jel , ku jɔke wat e cieer waan cik tiŋ ten ee akɔl thok bɛn , be ke wat tueŋ , a le yen kɔɔc e ɣot nɔm nhial te nu meth thin .
(trg)="b.MAT.2.9.1"> ಅವರು ಅರಸನ ಮಾತನ್ನು ಕೇಳಿ ಹೊರಟಾಗ ಇಗೋ , ಮೂಡಲದಲ್ಲಿ ಅವರು ಕಂಡ ನಕ್ಷತ್ರವು ಶಿಶುವು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದೆ ಹೋಯಿತು .

(src)="b.MAT.2.10.1"> Te ci kek cieer tiŋ , ke ke jɔ piɔth miɛt aret diite .
(trg)="b.MAT.2.10.1"> ಅವರು ಆ ನಕ್ಷತ್ರವನ್ನು ಕಂಡು ಅತ್ಯಧಿಕವಾದ ಆನಂದದಿಂದ ಸಂತೋಷಪಟ್ಟರು .

(src)="b.MAT.2.11.1"> Na wen , acik bɛn ɣot , ke ke tiŋ mɛnhthiine keke Mari man ; goki rot cuat piny , ku lamki ; ku te ci kek weuken liep niim , ke miɔcki e kaŋ , adhaap ayi wɛɛl ee nyop ago tol ŋireŋir , ayi wɛɛl daŋ cɔl mer .
(trg)="b.MAT.2.11.1"> ಅವರು ಮನೆಯೊಳಕ್ಕೆ ಬಂದಾಗ ಆ ಶಿಶುವನ್ನು ಆತನ ತಾಯಿಯಾದ ಮರಿಯಳೊಂದಿಗೆ ಕಂಡುಕೊಂಡು ಸಾಷ್ಟಾಂಗವೆರಗಿ ಆತನನ್ನು ಆರಾಧಿಸಿದರು ; ತರುವಾಯ ತಮ್ಮ ಬೊಕ್ಕಸಗಳನ್ನು ತೆರೆದು ಚಿನ್ನ ಧೂಪ ರಕ್ತಬೋಳಗಳನ್ನು ಆತನಿಗೆ ಕಾಣಿಕೆಯಾಗಿ ಅರ್ಪಿಸಿದರು .

(src)="b.MAT.2.12.1"> Na wen , acike wɛɛt e Nhialic , an , ciki keniim be dhuony te nu Kerod , ke ke jɔ jal lek paanden tekki e kueer daŋ .
(trg)="b.MAT.2.12.1"> ಆಮೇಲೆ ಅವರು ಹೆರೋದನ ಬಳಿಗೆ ಹಿಂತಿರುಗಬಾರದೆಂದು ಕನಸಿನಲ್ಲಿ ದೇವರಿಂದ ಎಚ್ಚರಿಸಲ್ಪಟ್ಟು ಬೇರೊಂದು ದಾರಿಯಿಂದ ತಮ್ಮ ಸ್ವದೇಶಕ್ಕೆ ಹೊರಟುಹೋದರು .

(src)="b.MAT.2.13.1"> Na wen , acik jal , di , ke tunynhial e Bɛnydit tul tede Jothep ke e nyuoth , lueel , yan , Jɔt rot , nom mɛnhthiine keke man , kɔt lɔ paan e Rip , ku tɔuwe etɛɛn aɣet te ban yi yien thok ; Kerod abi mɛnhthiine kɔɔr luɔi bi en e nɔk .
(trg)="b.MAT.2.13.1"> ಅವರು ಹೋದಮೇಲೆ ಇಗೋ , ಕರ್ತನ ದೂತನು ಕನಸಿನಲ್ಲಿ ಯೋಸೇಫನಿಗೆ ಕಾಣಿಸಿ ಕೊಂಡು -- ಎದ್ದು ಈ ಶಿಶುವನ್ನೂ ಇದರ ತಾಯಿ ಯನ್ನೂ ಕರಕೊಂಡು ಐಗುಪ್ತಕ್ಕೆ ಓಡಿಹೋಗಿ ನಾನು ನಿನಗೆ ತಿಳಿಸುವ ತನಕ ಅಲ್ಲೇ ಇರು ; ಯಾಕಂದರೆ ಹೆರೋದನು ಈ ಶಿಶುವನ್ನು ಕೊಲ್ಲಬೇಕೆಂದು

(src)="b.MAT.2.14.1"> Go ro jɔt , ku jɔt mɛnhthiine keke man ɣɔnakɔu , jel le Rip ;
(trg)="b.MAT.2.14.1"> ಆಗ ಅವನು ಎದ್ದು ಆ ಶಿಶುವನ್ನೂ ಅದರ ತಾಯಿಯನ್ನೂ ಕರ ಕೊಂಡು ರಾತ್ರಿಯಲ್ಲಿ ಐಗುಪ್ತಕ್ಕೆ ಹೊರಟುಹೋಗಿ ಹೆರೋದನು ಸಾಯುವ ವರೆಗೆ ಅಲ್ಲೇ ಇದ್ದನು .

(src)="b.MAT.2.15.1"> ku jɔ tɔu etɛɛn a thouwe Kerod ; luɔi bi jam aa yic jam ɣɔn cii Bɛnydit lueel ne thoŋ de nebi , yan , Rip yen acan wendi cɔɔl thin .
(trg)="b.MAT.2.15.1"> ಅದು--ನಾನು ನನ್ನ ಮಗನನ್ನು ಐಗುಪ್ತದಿಂದ ಕರೆದೆನು ಎಂದು ಪ್ರವಾದಿಯ ಮುಖಾಂತರ ಕರ್ತನಿಂದ ಹೇಳಲ್ಪಟ್ಟ ಮಾತು ನೆರವೇರುವಂತೆ ಹೀಗಾಯಿತು .

(src)="b.MAT.2.16.1"> Na wen , aci Kerod e tiŋ nɔn ci e geet e roor pelniim , go gɔth e agonh rac , go kɔc tooc , ku tɔ mithwat nu Bethlekem nak kedhie , ayi mith nu bɛi ruup kedhie , cak ne mith ci runken aa rou ayi mith lɔ e kecok , cit man ci en e cok e lop en en tede roor pelniim .
(trg)="b.MAT.2.16.1"> ಆಗ ಜ್ಞಾನಿಗಳು ತನ್ನನ್ನು ಪರಿಹಾಸ್ಯ ಮಾಡಿ ದರೆಂದು ಹೆರೋದನು ತಿಳಿದು ಅತಿ ರೋಷಗೊಂಡ ವನಾಗಿ ತಾನು ಅವರ ಮೂಲಕ ಪರಿಷ್ಕಾರವಾಗಿ ಶೋಧಿಸಿದ ಕಾಲಕ್ಕನುಸಾರ ಬೆತ್ಲೆಹೇಮಿನಲ್ಲಿಯೂ ಅದರ ಎಲ್ಲಾ ಪ್ರಾಂತ್ಯಗಳ ಮೇರೆಗಳಲ್ಲಿಯೂ ಎರಡು ವರುಷ ಮತ್ತು ಅದರೊಳಗಿದ್ದ ಎಲ್ಲಾ ಮಕ್ಕ

(src)="b.MAT.2.17.1"> Ago kene guɔ aa yic ke ci lueel e nebi Jeremia , yan ,
(trg)="b.MAT.2.17.1"> ಆಗ ಪ್ರವಾದಿಯಾದ ಯೆರೆವಿಾಯ ನಿಂದ ಹೇಳಲ್ಪಟ್ಟದ್ದು ನೆರವೇರಿತು ;

(src)="b.MAT.2.18.1"> Rol aye piŋ e Rama , Akieeu ku dhieeu ku dhuoor dit , Racel ee mithke dhieu , Ku reec luŋ luke ye , luɔi liiu kek .
(trg)="b.MAT.2.18.1"> ಅದೇನಂದರೆ--ರಾಮದಲ್ಲಿ ಪ್ರಲಾಪವೂ ಅಳುವಿಕೆಯೂ ಬಹು ಶೋಕದ ಧ್ವನಿಯೂ ಕೇಳಿಸಿತು ; ರಾಹೇಲಳು ತನ್ನ ಮಕ್ಕಳಿಗೋಸ್ಕರ ಅಳುತ್ತಾ ಅವರು ಇಲ್ಲದ್ದರಿಂದ ಆದರಣೆ ಹೊಂದಲೊಲ್ಲದೆ ಇದ್ದಳು ಎಂಬದೇ .

(src)="b.MAT.2.19.1"> Na wen , aci Kerod guɔ thou , ke tunynhial e Bɛnydit tul te Jothep ke e nyuoth e Rip ,
(trg)="b.MAT.2.19.1"> ಹೆರೋದನು ಸತ್ತ ಮೇಲೆ ಇಗೋ , ಐಗುಪ್ತದಲ್ಲಿ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿ ಕೊಂಡು--

(src)="b.MAT.2.20.1"> ku yook , yan , Jɔt rot , jɔt mɛnhthiine keke man , lɔ paan e Yithrael ; kɔc waan kɔɔr naŋ nɛk kek mɛnhthiine acik guɔ thou .
(trg)="b.MAT.2.20.1"> ಎದ್ದು ಶಿಶುವನ್ನೂ ಅದರ ತಾಯಿಯನ್ನೂ ಕರಕೊಂಡು ಇಸ್ರಾಯೇಲ್ ‌ ದೇಶಕ್ಕೆ ಹೋಗು ; ಯಾಕಂದರೆ ಶಿಶುವಿನ ಪ್ರಾಣವನ್ನು ತೆಗೆಯಬೇಕೆಂದು ಹುಡುಕುವವರು ಸತ್ತುಹೋದರು ಎಂದು ಹೇಳಿದನು .

(src)="b.MAT.2.21.1"> Go ro jɔt , ku jɔt mɛnhthiine keke man , ku bik paan e Yithrael .
(trg)="b.MAT.2.21.1"> ಆಗ ಅವನು ಎದ್ದು ಆ ಶಿಶುವನ್ನೂ ಅದರ ತಾಯಿ ಯನ್ನೂ ಕರಕೊಂಡು ಇಸ್ರಾಯೇಲ್ ‌ ದೇಶಕ್ಕೆ ಬಂದಾಗ

(src)="b.MAT.2.22.1"> Na wen , aci piŋ nɔn ceŋ Arkeleo piny e Judaya e nyin e wun Kerodic , ke riɔc e lɔ etɛɛn ; ku acii Nhialic wɛɛt tei ke e nyuoth , go enɔm bɛ pɔk piny biak de Galili ,
(trg)="b.MAT.2.22.1"> ಅರ್ಖೆಲಾಯನು ತನ್ನ ತಂದೆಯಾದ ಹೆರೋದನಿಗೆ ಬದಲಾಗಿ ಯೂದಾಯದಲ್ಲಿ ಆಳುತ್ತಿದ್ದಾನೆಂದು ಕೇಳಿ ಅಲ್ಲಿಗೆ ಹೋಗುವದಕ್ಕೆ ಭಯಪಟ್ಟನು ; ಆದಾಗ್ಯೂ ಕನಸಿನಲ್ಲಿ ದೇವರಿಂದ ಎಚ್ಚರಿಸಲ್ಪಟ್ಟವನಾಗಿ ಗಲಿಲಾಯ ಪ್ರಾಂತ್ಯದ ಕಡೆಗೆ ತಿರುಗಿಕೊಂಡನು.ಅವನು ನಜರೇತೆಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸಿಸಿದನು ; ಇದರಿಂದ--ಆತನು ನಜರಾಯನೆಂದು ಕರೆಯಲ್ಪ ಡುವನು ಎಂಬದಾಗಿ ಪ್ರವಾದಿಗಳಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಹೀಗಾಯಿತು .

(src)="b.MAT.2.23.1"> bi ku tɔu panydiit cɔl Nadhareth ; luɔi bi jam aa yic jam ci lueel e nebii , yan , Abi cɔl raan e Nadhareth .
(trg)="b.MAT.2.23.1"> ಅವನು ನಜರೇತೆಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸಿಸಿದನು ; ಇದರಿಂದ--ಆತನು ನಜರಾಯನೆಂದು ಕರೆಯಲ್ಪ ಡುವನು ಎಂಬದಾಗಿ ಪ್ರವಾದಿಗಳಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಹೀಗಾಯಿತು .

(src)="b.MAT.3.1.1"> Na ɣɔn e akoolke ke Jɔn Baptith bɔ , ke guiir wel e jɔɔr e Judayayic ,
(trg)="b.MAT.3.1.1"> ಆ ದಿನಗಳಲ್ಲಿ ಬಾಪ್ತಿಸ್ಮ ಮಾಡಿಸುವ ಯೋಹಾನನು ಬಂದು ಯೂದಾಯದ ಅಡವಿಯಲ್ಲಿ ಸಾರುತ್ತಾ--

(src)="b.MAT.3.2.1"> ke ye lueel , yan , Pɔkki wepiɔth ; ciɛɛŋ de paannhial e guɔ thiɔk .
(trg)="b.MAT.3.2.1"> ನೀವು ಮಾನಸಾಂತರ ಪಡಿರಿ ; ಯಾಕಂದರೆ ಪರಲೋಕರಾಜ್ಯವು ಸಮಾಪ ವಾಗಿದೆ ಎಂದು ಹೇಳಿದನು .

(src)="b.MAT.3.3.1"> Ku raane ee raan waan lueel nebi Yithaya , yan , Rol e raan cot e jɔɔric , Yan , Luɔiki caar e Bɛnydit , Taki kuɛɛrke lɔ cit .
(trg)="b.MAT.3.3.1"> ಯಾಕಂದರೆ--ಕರ್ತನ ಮಾರ್ಗವನ್ನು ಸಿದ್ಧಮಾಡಿರಿ ; ಆತನ ಹಾದಿಗಳನ್ನು ನೆಟ್ಟಗೆ ಮಾಡಿರಿ ಎಂದು ಅಡವಿಯಲ್ಲಿ ಕೂಗುವ ಒಬ್ಬನ ಶಬ್ದವದೆ ಎಂಬದಾಗಿ ಪ್ರವಾದಿಯಾದ ಯೆಶಾಯ ನಿಂದ ಹೇಳಲ್ಪಟ್ಟವನು ಇವನೇ .

(src)="b.MAT.3.4.1"> Ku Jɔn guop ee lupɔ ci cueec e nhiem e thɔrɔl cieŋ , ku ye yeyic duut e thiooth ; ku ken ee cam ee kɔyɔm keke kiec nu roor .
(trg)="b.MAT.3.4.1"> ಈ ಯೋಹಾನನಿಗೆ ಒಂಟೇ ಕೂದಲಿನ ಉಡುಪೂ ಸೊಂಟಕ್ಕೆ ಚರ್ಮದ ನಡುಕಟ್ಟೂ ಇದ್ದವು ; ಮತ್ತು ಮಿಡತೆಗಳೂ ಕಾಡು ಜೇನೂ ಇವನಿಗೆ ಆಹಾರವಾಗಿದ್ದವು .

(src)="b.MAT.3.5.1"> Go raan ebɛn lɔ biic te nu yen , Jeruthalem ayi Judaya ebɛn , ayi kɔc nu e Jordan yɔu ebɛn ;
(trg)="b.MAT.3.5.1"> ಆಗ ಯೆರೂಸಲೇಮಿನವರೂ ಎಲ್ಲಾ ಯೂದಾಯ ದವರೂ ಯೊರ್ದನ್ ‌ ಹೊಳೆಯ ಸುತ್ತಲಿರುವ ಎಲ್ಲಾ ಪ್ರದೇಶದವರೂ ಅವನ ಬಳಿಗೆ ಹೊರಟುಹೋದರು .

(src)="b.MAT.3.6.1"> agoke baptith ne yen e wɛɛr cɔl Jordan , agamki karɛc cik wooc .
(trg)="b.MAT.3.6.1"> ಅವರು ತಮ್ಮ ಪಾಪಗಳನ್ನು ಅರಿಕೆಮಾಡಿ ಯೊರ್ದನಿನಲ್ಲಿ ಅವನಿಂದ ಬಾಪ್ತಿಸ್ಮ ಮಾಡಿಕೊಂಡರು .

(src)="b.MAT.3.7.1"> Na wen , aci kɔc juec tiŋ , kɔc ke Parithai keke Thadokai , ke ke bɔ bike bɛn baptith ne yen , ke ke jɔ yɔɔk , yan , Wek mith ke karac , eeŋa e yook week , an , bak kat e agonh bi bɛn ?
(trg)="b.MAT.3.7.1"> ಆದರೆ ಫರಿಸಾಯರಲ್ಲಿಯೂ ಸದ್ದುಕಾಯರಲ್ಲಿಯೂ ಅನೇಕರು ತನ್ನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳು ವದಕ್ಕಾಗಿ ಬರುವದನ್ನು ಅವನು ಕಂಡು ಅವರಿಗೆ-- ಓ ಸರ್ಪ ಸಂತತಿಯವರೇ , ಬರುವದಕ್ಕಿರುವ ಕೋಪ ದಿಂದ ತಪ್ಪಿಸಿಕೊಳ್ಳುವದಕ್ಕೆ ನಿಮ್ಮನ್ನು ಎಚ್ಚರಿಸಿದವರು ಯಾರು ?

(src)="b.MAT.3.8.1"> Yen aa wek luɔk ne luɔi piɛth , luɔi bi roŋ ne puŋdepiɔu ;
(trg)="b.MAT.3.8.1"> ಹಾಗಾದರೆ ಮಾನಸಾಂತರಕ್ಕೆ ತಕ್ಕ ಫಲ ಗಳನ್ನು ಫಲಿಸಿರಿ ;

(src)="b.MAT.3.9.1"> ku duoki e lueel e wepiɔth , an , Wok de waarda Abraɣam ; wek yɔɔk , yan , Nhialic yen adueer mith ke Abraɣam cak ne kɔike .
(trg)="b.MAT.3.9.1"> ಮತ್ತು -- ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ ಎಂದು ನಿಮ್ಮ ನಿಮ್ಮೊಳಗೆ ಅಂದು ಕೊಳ್ಳಬೇಡಿರಿ ; ಯಾಕಂದರೆ ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸ ಶಕ್ತನೆಂದು ನಾನು ನಿಮಗೆ ಹೇಳುತ್ತೇನೆ .

(src)="b.MAT.3.10.1"> Ku enɔɔne yep e guɔ taau te nu mei ke tiim ; tim ebɛn tim reec luɔk ne mith piɛth aye yiɛp piny , ku cuɛte mɛɛc .
(trg)="b.MAT.3.10.1"> ಈಗಾಗಲೇ ಮರಗಳ ಬೇರಿಗೆ ಕೊಡಲಿ ಹಾಕಿಯದೆ ; ಆದದರಿಂದ ಒಳ್ಳೇ ಫಲವನ್ನು ಫಲಿಸದ ಪ್ರತಿಯೊಂದು ಮರವು ಕಡಿಯಲ್ಪಟ್ಟು ಬೆಂಕಿ ಯಲ್ಲಿ ಹಾಕಲ್ಪಡುವದು .

(src)="b.MAT.3.11.1"> Yɛn di , wek a baptith e piu tei ne kede puŋdepiɔu ; ku raan bɔ e yacok ee raan ril e yɛn , yɛn cii roŋ ne luɔi ban wɛɛr ke yencok muk ; yen abi we baptith ne Weidit Ɣer ku ne mac ;
(trg)="b.MAT.3.11.1"> ನಾನು ಮಾನ ಸಾಂತರದ ನಿಮಿತ್ತ ನಿಮಗೆ ನೀರಿನಲ್ಲಿ ಬಾಪ್ತಿಸ್ಮ ಮಾಡಿಸುವದು ನಿಜವೇ ; ಆದರೆ ನನ್ನ ಹಿಂದೆ ಬರುವಾತನು ನನಗಿಂತಲೂ ಶಕ್ತನಾಗಿದ್ದಾನೆ . ಆತನ ಕೆರಗಳನ್ನು ಹೊರುವದಕ್ಕೂ ನಾನು ಯೋಗ್ಯನಲ್ಲ ; ಆತನು ಪವಿತ್ರಾ ತ್ಮನಿಂದಲೂ ಬೆಂಕಿಯಿಂದಲೂ ನಿಮಗೆ ಬಾಪ್ತಿಸ್ಮ ಮಾಡಿ ಸುವನು .

(src)="b.MAT.3.12.1"> amuk ken ee yen rap kɔl e yeciin , ku abi yiɛɛude nap abi lipelip , ago rɛɛpke kuot e adhaanic , ku nyop ayiɛl e many cie leu ne nak .
(trg)="b.MAT.3.12.1"> ಒನೆಯುವ ಮೊರವನ್ನು ಆತನು ತನ್ನ ಕೈಯಲ್ಲಿ ಹಿಡಿದಿದ್ದಾನೆ ; ಆತನು ತನ್ನ ಕಣವನ್ನು ಸಂಪೂರ್ಣವಾಗಿ ಹಸನುಮಾಡಿ ತನ್ನ ಗೋಧಿಯನ್ನು ಕಣಜದಲ್ಲಿ ಕೂಡಿಸುವನು ; ಆದರೆ ಹೊಟ್ಟನ್ನು ಆರದ ಬೆಂಕಿಯಿಂದ ಸುಟ್ಟುಬಿಡುವನು ಎಂದು ಹೇಳಿದನು .

(src)="b.MAT.3.13.1"> Na ɣɔn , ke Yecu bɔ bei e Galili , bi Jordan te nu Jɔn , bi bɛn baptith ne yen .
(trg)="b.MAT.3.13.1"> ಆಗ ಯೇಸು ಯೋಹಾನನಿಂದ ಬಾಪ್ತಿಸ್ಮ ಮಾಡಿಸಿಕೊಳ್ಳಬೇಕೆಂದು ಗಲಿಲಾಯದಿಂದ ಯೊರ್ದ ನಿಗೆ ಬಂದನು .

(src)="b.MAT.3.14.1"> Go Jɔn , an , jiɛi , yan , Ba te nuo yɛn , ku yɛn adi ci baptith e yin ?
(trg)="b.MAT.3.14.1"> ಆದರೆ ಯೋಹಾನನು ಆತನನ್ನು ತಡೆದು--ನಾನು ನಿನ್ನಿಂದ ಬಾಪ್ತಿಸ್ಮ ಮಾಡಿಸಿ ಕೊಳ್ಳುವದು ಅಗತ್ಯವಿರಲಾಗಿ ನೀನು ನನ್ನ ಬಳಿಗೆ ಬರುವದೇನು ಎಂದು ಹೇಳಿದನು .

(src)="b.MAT.3.15.1"> Go Yecu puk nɔm , yan , Pal enɔɔne ; apiɛth ale , luɔi bi wok luɔi piɛth thol ebɛn .
(src)="b.MAT.3.15.2"> Go gam .
(trg)="b.MAT.3.15.1"> ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವನಿಗೆ--ಸದ್ಯಕ್ಕೆ ಒಪ್ಪಿಕೋ ; ಯಾಕಂದರೆ ಎಲ್ಲಾ ನೀತಿಯನ್ನು ಹೀಗೆ ನೆರವೇರಿ ಸುವದು ನಮಗೆ ಯೋಗ್ಯವಾಗಿದೆ ಎಂದು ಹೇಳಿದನು . ಆಗ ಅವನು ಒಪ್ಪಿಕೊಂಡನು .

(src)="b.MAT.3.16.1"> Na wen , aci guɔ baptith , ke Yecu bɔ bei e piu yiie enɔɔnthiine ; na wen , di , ke tenhial liep eyie en , ago Wei ke Nhialie tiŋ ke ke loony piny ke cit guop guuk , bi ku nyuuc e yenɔm ;
(trg)="b.MAT.3.16.1"> ಯೇಸು ಬಾಪ್ತಿಸ್ಮ ಮಾಡಿಸಿಕೊಂಡು ನೀರಿನಿಂದ ಮೇಲಕ್ಕೆ ಬಂದ ಕೂಡಲೆ ಇಗೋ , ಆತನಿಗೆ ಆಕಾಶಗಳು ತೆರೆಯಲ್ಪಟ್ಟು ದೇವರ ಆತ್ಮನು ಪಾರಿವಾಳದ ಹಾಗೆ ಆತನ ಮೇಲೆ ಇಳಿದುಬರುವದನ್ನು ಆತನು ಕಂಡನು.ಆಗ--ಇಗೋ , ಈತನು ಪ್ರಿಯ ನಾಗಿರುವ ನನ್ನ ಮಗನು ; ಈತನನ್ನು ನಾನು ಬಹಳ ವಾಗಿ ಮೆಚ್ಚಿದ್ದೇನೆ ಎಂದು ಪರಲೋಕದಿಂದ ಹೇಳುವ ಧ್ವನಿಯಾಯಿತು .

(src)="b.MAT.3.17.1"> ku bɔ rol paannhial , rol lueel en , an , Wendien nhiaar ki , ekene , Wen miɛt ɛn piɔu wo yen .
(trg)="b.MAT.3.17.1"> ಆಗ--ಇಗೋ , ಈತನು ಪ್ರಿಯ ನಾಗಿರುವ ನನ್ನ ಮಗನು ; ಈತನನ್ನು ನಾನು ಬಹಳ ವಾಗಿ ಮೆಚ್ಚಿದ್ದೇನೆ ಎಂದು ಪರಲೋಕದಿಂದ ಹೇಳುವ ಧ್ವನಿಯಾಯಿತು .

(src)="b.MAT.4.1.1"> Na wen , ke Yecu thel Weidit leere jɔɔric , lɔ them e jɔŋdiit rac .
(trg)="b.MAT.4.1.1"> ಆಗ ಯೇಸು ಸೈತಾನನಿಂದ ಶೋಧಿಸಲ್ಪಡು ವದಕ್ಕಾಗಿ ಆತ್ಮನಿಂದ ಅಡವಿಗೆ ನಡಿಸಲ್ಪಟ್ಟನು .

(src)="b.MAT.4.2.1"> Na wen , aci cam rɛɛc e cool yiic kathierŋuan ku wɛɛr yiic kathierŋuan , ke jɔ cɔk nɔk .
(trg)="b.MAT.4.2.1"> ಆತನು ನಾಲ್ವತ್ತು ದಿವಸ ಹಗಲಿರುಳು ಉಪವಾಸವಿದ್ದ ತರುವಾಯ ಹಸಿದನು .

(src)="b.MAT.4.3.1"> Go jɔŋ e kɔc them bɛn , bi ku yook , yan , Te ee yin Wen e Nhialic , ke yi yook kuurke bik rot tɔ ye kuiin ci pam .
(trg)="b.MAT.4.3.1"> ಆಗ ಆ ಶೋಧಕನು ಆತನ ಬಳಿಗೆ ಬಂದು--ನೀನು ದೇವಕುಮಾರನಾಗಿದ್ದರೆ ಈ ಕಲ್ಲುಗಳು ರೊಟ್ಟಿಯಾಗುವಂತೆ ಅಪ್ಪಣೆಕೊಡು ಅಂದನು .

(src)="b.MAT.4.4.1"> Go bɛɛr , yan , Aci gɔɔr , yan , Raan acii bi piir ne kuin etok , abi piir ne jam ebɛn jam bɔ bei a Nhialic thok .
(trg)="b.MAT.4.4.1"> ಆದರೆ ಆತನು ಪ್ರತ್ಯುತ್ತರವಾಗಿ--ಮನುಷ್ಯನು ರೊಟ್ಟಿ ಮಾತ್ರದಿಂದಲೇ ಜೀವಿಸುವದಿಲ್ಲ , ಆದರೆ ದೇವರ ಬಾಯೊಳಗಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಜೀವಿಸುವನು ಎಂದು ಬರೆದದೆ ಅಂದನು .

(src)="b.MAT.4.5.1"> Na wen , ke leere jɔŋdiit rac panydiit ɣeric , ku tɛɛu nhial e luaŋdiit e Nhialic nɔm ,
(trg)="b.MAT.4.5.1"> ತರುವಾಯ ಸೈತಾನನು ಆತನನ್ನು ಪರಿಶುದ್ಧ ಪಟ್ಟಣಕ್ಕೆ ಕರೆದುಕೊಂಡುಹೋಗಿ ದೇವಾಲಯದ ಶಿಖರದ ಮೇಲೆ ನಿಲ್ಲಿಸಿ ಆತನಿಗೆ--

(src)="b.MAT.4.6.1"> go yɔɔk , yan , Te ee yin Wen e Nhialic , ke yi cuate rot piny ; aci gɔɔr , yan , Abi tuuckɛnnhial gam thon ne kedu ; Agoki yi mɔk nhial e kecin , Ke yi cii yicok bi yuop e kuur kɔu .
(trg)="b.MAT.4.6.1"> ನೀನು ದೇವ ಕುಮಾರನಾಗಿದ್ದರೆ ನೀನಾಗಿಯೇ ಕೆಳಗೆ ದುಮುಕು ; ಯಾಕಂದರೆ--ಯಾವ ಸಮಯದಲ್ಲಿಯಾದರೂ ನಿನ್ನ ಕಾಲು ಕಲ್ಲಿಗೆ ಅಪ್ಪಳಿಸದಂತೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಅಪ್ಪಣೆ ಕೊಡುವನು ; ಮತ್ತು ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು ಎಂದು ಬರೆದದೆ ಅಂದ

(src)="b.MAT.4.7.1"> Go Yecu yɔɔk , yan , Aci bɛ gɔɔr , yan , Du Bɛnydit Nhialicdu du them .
(trg)="b.MAT.4.7.1"> ಯೇಸು ಅವನಿಗೆ -- ನೀನು ನಿನ್ನ ದೇವರಾದ ಕರ್ತನನ್ನು ಶೋಧಿಸಬಾರದೆಂದು ಬರೆದದೆ ಎಂದು ಹೇಳಿದನು .

(src)="b.MAT.4.8.1"> Go jɔŋdiit rac bɛ lɛɛr e kuurdit nɔm , kuurdiit ci nɔm ɣet ya , ku nyuth ciɛɛŋ ke piny nɔm ebɛn keke dhueeŋden ;
(trg)="b.MAT.4.8.1"> ಮತ್ತೊಮ್ಮೆ ಸೈತಾನನು ಆತನನ್ನು ಅತ್ಯುನ್ನತವಾದ ಬೆಟ್ಟಕ್ಕೆ ಕರೆದುಕೊಂಡು ಹೋಗಿ ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ ಆತನಿಗೆ ತೋರಿಸಿ--

(src)="b.MAT.4.9.1"> go yɔɔk , yan , Kake kedhie aba ke gam yin , te ci yin ro cuat piny ku lam ɛn .
(trg)="b.MAT.4.9.1"> ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಾನು ನಿನಗೆ ಕೊಡುವೆನು ಅಂದನು .

(src)="b.MAT.4.10.1"> Go Yecu yɔɔk , yan , Nyni , Catan ; aci gɔɔr , yan , Ye Bɛnydit Nhialicdu lam , ku yen ee luooi etok .
(trg)="b.MAT.4.10.1"> ಆಗ ಯೇಸು ಅವನಿಗೆ--ಸೈತಾನನೇ , ಇಲ್ಲಿಂದ ತೊಲಗಿಹೋಗು ; ಯಾಕಂದರೆ--ನೀನು ನಿನ್ನ ದೇವ ರಾದ ಕರ್ತನನ್ನು ಮಾತ್ರ ಆರಾಧಿಸಿ ಆತನೊಬ್ಬನನ್ನೇ ಸೇವಿಸಬೇಕು ಎಂಬದಾಗಿ ಬರೆದದೆ ಅಂದನು .

(src)="b.MAT.4.11.1"> Go jɔŋdiit rac pɔl , ku jɔ tuucnhial bɛn bik bɛn kony .
(trg)="b.MAT.4.11.1"> ಆಗ ಸೈತಾನನು ಆತನನ್ನು ಬಿಟ್ಟನು ; ಮತ್ತು ಇಗೋ , ದೇವದೂತರು ಬಂದು ಆತನನ್ನು ಉಪಚರಿಸಿದರು .

(src)="b.MAT.4.12.1"> Na wen , aci Yecu e piŋ nɔn ci Jɔn mac , ke jel le Galili ;
(trg)="b.MAT.4.12.1"> ಯೋಹಾನನು ಸೆರೆಯಲ್ಲಿ ಹಾಕಲ್ಪಟ್ಟಿದ್ದಾನೆಂದು ಯೇಸು ಕೇಳಿ ಗಲಿಲಾಯಕ್ಕೆ ಹೊರಟುಹೋದನು .

(src)="b.MAT.4.13.1"> go Nadhareth pɔl , bi ku reer e Kapernaum , paan nu e wɛɛryɔu , anu aken e Dhebulun keke Naptali ;
(trg)="b.MAT.4.13.1"> ಮತ್ತು ಆತನು ನಜರೇತನ್ನು ಬಿಟ್ಟು ಜೆಬುಲೋನ್ ‌ , ನೆಫ್ತಲೀಮ್ ‌ ಮೇರೆಗಳ ಸಮುದ್ರತೀರದಲ್ಲಿರುವ ಕಪೆರ್ನೌಮಿಗೆ ಬಂದು ಅಲ್ಲಿ ವಾಸಿಸಿದನು .

(src)="b.MAT.4.14.1"> luɔi bi jam aa yic jam ɣɔn lueel nebi Yithaya , yan ,
(trg)="b.MAT.4.14.1"> ಹೀಗೆ ಪ್ರವಾದಿಯಾದ ಯೆಶಾಯನಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಇದಾಯಿತು ; ಅದೇನಂದರೆ--

(src)="b.MAT.4.15.1"> Piny e Dhebulun keke piny e Naptali , Te lɔ abapdit , e Jordan nɔm lɔŋtui , Galili de Juoor , Kɔc waan e reer tecol Acik ɣɛɛr diit e piny tiŋ ,
(trg)="b.MAT.4.15.1"> ಯೊರ್ದನಿನ ಆಚೆ ಸಮುದ್ರದ ಮಾರ್ಗದಲ್ಲಿರುವ ಜೆಬುಲೋನ್ ‌ ಪ್ರಾಂತ್ಯದಲ್ಲಿಯೂ ನೆಫ್ತಲೀಮ್ ‌ ಪ್ರಾಂತ್ಯ ಮತ್ತು ಅನ್ಯಜನರ ಗಲಿಲಾಯದಲ್ಲಿಯೂ

(src)="b.MAT.4.16.1"> Ku kɔc waan e reer paan e thuɔɔu ku yek reer e atiep de thuɔɔuwic , Ɣɛɛrepiny aci tuol tede keek .
(trg)="b.MAT.4.16.1"> ಕತ್ತಲೆಯಲ್ಲಿ ಕೂತಿದ್ದ ಜನರು ದೊಡ್ಡ ಬೆಳಕನ್ನು ಕಂಡರು ; ಮತ್ತು ಮರಣದ ನೆರಳಿನಲ್ಲಿ ಕೂತಿದ್ದ ಆ ಪ್ರಾಂತ್ಯದವರಿಗೆ ಬೆಳಕು ಉದಯವಾಯಿತು ಎಂಬದೇ .

(src)="b.MAT.4.17.1"> Kek e akoolke kek aa ciɛke Yecu guieer e wel , aa ye lueel , an , Pɔkki wepiɔth ; ciɛɛŋ de paannhial e guɔ thiɔk .
(trg)="b.MAT.4.17.1"> ಅಂದಿನಿಂದ ಯೇಸು--ಮಾನಸಾಂತರ ಪಡಿರಿ ; ಯಾಕಂದರೆ ಪರಲೋಕರಾಜ್ಯವು ಸಮಾಪಿಸಿತು ಎಂದು ಸಾರಿ ಹೇಳುವದಕ್ಕೆ ಪ್ರಾರಂಭಿಸಿದನು .

(src)="b.MAT.4.18.1"> Na wen , te ciɛthe Yecu e wɛɛryɔu wɛɛr e Galili , ke tiŋ kɔc kaarou , raan keke manhe , Thimon raan cɔl Petero , keke Andereya manhe , ke ke deeny bɔi dit wiir ; luɔi ee kek kɔc e dep .
(trg)="b.MAT.4.18.1"> ಮತ್ತು ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದುಹೋಗುತ್ತಿದ್ದಾಗ ಪೇತ್ರನೆಂದು ಕರೆಯಲ್ಪಟ್ಟ ಸೀಮೋನ , ಅವನ ಸಹೋದರನಾದ ಅಂದ್ರೆಯ ಎಂಬ ಇಬ್ಬರು ಸಹೋದರರು ಸಮುದ್ರ ದಲ್ಲಿ ಬಲೆ ಬೀಸುವದನ್ನು ಕಂಡನು ; ಯಾಕಂದರೆ ಅವರು ಬೆಸ್ತರಾಗಿದ್ದರು .

(src)="b.MAT.4.19.1"> Go keek yɔɔk , yan , Baki e yacok , ku we ba tɔ ye kɔc e kɔc deep .
(trg)="b.MAT.4.19.1"> ಆಗ ಆತನು ಅವರಿಗೆ-- ನನ್ನನ್ನು ಹಿಂಬಾಲಿಸಿರಿ , ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ನಾನು ನಿಮ್ಮನ್ನು ಮಾಡುವೆನು ಅಂದನು .

(src)="b.MAT.4.20.1"> Goki bɔɔiken pɔl enɔnthiine , ku kuanyki cok .
(trg)="b.MAT.4.20.1"> ಅವರು ತಕ್ಷಣವೇ ತಮ್ಮ ಬಲೆಗಳನ್ನು ಬಿಟ್ಟು ಆತನನ್ನು ಹಿಂಬಾಲಿಸಿದರು .

(src)="b.MAT.4.21.1"> Na wen , aci jal etɛɛn le tueŋ , ke tiŋ kɔc kɔk kaarou , raan keke manhe , Jakop wen e Dhebedayo keke Jɔn manhe , anuki abelic keke wuonden Dhebedayo , arukki bɔɔiken ; go keek cɔɔl ,
(trg)="b.MAT.4.21.1"> ಆತನು ಅಲ್ಲಿಂದ ಮುಂದೆ ಹೋಗಿ ಜೆಬೆದಾಯನ ಮಗನಾದ ಯಾಕೋಬ ಅವನ ಸಹೋದರನಾದ ಯೋಹಾನ ಎಂಬ ಬೇರೆ ಇಬ್ಬರು ಸಹೋದರರು ತಮ್ಮ ತಂದೆಯಾದ ಜೆಬೆದಾಯನ ಕೂಡ ದೋಣಿ ಯಲ್ಲಿ ತಮ್ಮ ಬಲೆಗಳನ್ನು ಸರಿಮಾಡುತ್ತಿದ್ದದ್ದನ್ನು ಕಂಡು ಅವರನ್ನು ಕರೆದನು .

(src)="b.MAT.4.22.1"> goki abel dap pɔl enɔnthiine ku pɛlki wuonden , ku kuanyki cok .
(trg)="b.MAT.4.22.1"> ಅವರು ತಕ್ಷಣವೇ ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಆತನನ್ನು ಹಿಂಬಾಲಿಸಿದರು .

(src)="b.MAT.4.23.1"> Go Yecu piny e Galili caath ebɛn , aye kɔc wɛɛt e luekkɛn e Nhialic yiic , ke ye ke guieer welpiɛth ke ciɛɛŋ , ku tɔ juai waar e kɔc gup juai ebɛn , ayi tetok ebɛn tetok nu kɔc gup .
(trg)="b.MAT.4.23.1"> ಬಳಿಕ ಯೇಸು ಗಲಿಲಾಯವನ್ನೆಲ್ಲಾ ಸಂಚರಿಸಿ ಅವರ ಸಭಾಮಂದಿರಗಳಲ್ಲಿ ಬೋಧಿಸುವಾತನಾಗಿ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಜನರಲ್ಲಿದ್ದ ಎಲ್ಲಾ ತರದ ರೋಗಗಳನ್ನು ಸಕಲ ವಿಧವಾದ ಜಾಡ್ಯಗಳನ್ನೂ ಗುಣಮಾಡುತ್ತಾ ಇದ್ದನು .

(src)="b.MAT.4.24.1"> Ago rinke ɣet piny e Thuria ebɛn ; goki kɔc tok bɛɛi te nu yen kedhie , kɔc cii juai dɔm , juan kithic , ayi kɔc ci cuii gup ne ke cath ke keek , ayi kɔc cii jɔɔk rac dɔm , ayi kɔc cii nok dɔm , ayi kɔc ci duany ; go ke tɔ waar .
(trg)="b.MAT.4.24.1"> ಆತನ ಕೀರ್ತಿಯು ಸಿರಿಯದಲ್ಲೆಲ್ಲಾ ಹರಡಿತು ; ಆಗ ನಾನಾ ವಿಧವಾದ ರೋಗಗಳಿಂದ ಮತ್ತು ಯಾತನೆಗಳಿಂದ ಅಸ್ವಸ್ಥರಾದವರೆಲ್ಲರನ್ನೂ ದೆವ್ವಗಳು ಹಿಡಿದವರನ್ನೂ ಮೂರ್ಛಾ ರೋಗಿಗಳನ್ನೂ ಪಾರ್ಶ್ವವಾಯುರೋಗಿ ಗಳನ್ನೂ ಆತನ ಬಳಿಗೆ ತಂದರು . ಆತನು ಅವರನ್ನು ಸ್ವಸ್ಥಪಡಿಸಿದನು.ಆಗ ಗಲಿಲಾಯದಿಂದಲೂ ದೆಕಪೊಲಿಯದಿಂದಲೂ ಯೆರೂಸಲೇಮಿನಿಂದಲೂ ಯೂದಾಯದಿಂದಲೂ ಯೊರ್ದನಿನ ಆಚೆಯಿಂದ ಲೂ ಜನರು ದೊಡ್ಡ ಸಮೂಹಗಳಾಗಿ ಆತನನ್ನು ಹಿಂಬಾಲಿಸಿದರು .

(src)="b.MAT.4.25.1"> Go kuany cok e kut ditt e kɔc bɔ Galili , ku Dekapoli , ku Jeruthalem , ku Judaya , ku Jordan nɔm lɔŋtni .
(trg)="b.MAT.4.25.1"> ಆಗ ಗಲಿಲಾಯದಿಂದಲೂ ದೆಕಪೊಲಿಯದಿಂದಲೂ ಯೆರೂಸಲೇಮಿನಿಂದಲೂ ಯೂದಾಯದಿಂದಲೂ ಯೊರ್ದನಿನ ಆಚೆಯಿಂದ ಲೂ ಜನರು ದೊಡ್ಡ ಸಮೂಹಗಳಾಗಿ ಆತನನ್ನು ಹಿಂಬಾಲಿಸಿದರು .

(src)="b.MAT.5.1.1"> Na wen , aci kut e kɔc tiŋ , ke lɔ dhial e kuurdit nɔm ; na wen aci nyuc piny , ke kɔckɛn e piooce ke ke bɔ te nu yen ;
(trg)="b.MAT.5.1.1"> ಮತ್ತು ಆತನು ಜನಸಮೂಹಗಳನ್ನು ನೋಡಿದವನಾಗಿ ಪರ್ವತವನ್ನೇರಿದನು ; ಅಲ್ಲಿ ಆತನು ಕೂತುಕೊಂಡಾಗ ಆತನ ಶಿಷ್ಯರು ಆತನ ಬಳಿಗೆ ಬಂದರು .

(src)="b.MAT.5.2.1"> go yethok tueer , weet keek , yan ,
(trg)="b.MAT.5.2.1"> ಆತನು ಬಾಯಿ ತೆರೆದು ಅವರಿಗೆ ಬೋಧಿಸಿ ಹೇಳಿದ್ದೇನಂದರೆ --

(src)="b.MAT.5.3.1"> Thieithieei e kɔc kuany nyiin ne weiken ; ciɛɛŋ de paannhial ee keden .
(trg)="b.MAT.5.3.1"> ಆತ್ಮದಲ್ಲಿ ಬಡವರಾಗಿರುವವರು ಧನ್ಯರು ; ಯಾಕಂದರೆ ಪರಲೋಕರಾಜ್ಯವು ಅವರದು .

(src)="b.MAT.5.4.1"> Thieithieei e kɔc e dhiau ; abike luk piɔth .
(trg)="b.MAT.5.4.1"> ದುಃಖಪಡುವವರು ಧನ್ಯರು ; ಯಾಕಂದರೆ ಅವರು ಆದರಣೆ ಹೊಂದುವರು .

(src)="b.MAT.5.5.1"> Thieithieei e kɔc e rot tɔ kor ; abik piny lɔɔk lak .
(trg)="b.MAT.5.5.1"> ಸಾತ್ವಿಕರು ಧನ್ಯರು ; ಯಾಕಂದರೆ ಅವರು ಭೂಮಿಯನ್ನು ಬಾಧ್ಯವಾಗಿ ಹೊಂದುವರು .

(src)="b.MAT.5.6.1"> Thieithieei e kɔc ee cɔk nɔk ku ye reu ke nɔk ne baŋ de piathepiɔu ; abike tɔ kueth .
(trg)="b.MAT.5.6.1"> ನೀತಿಗೋಸ್ಕರ ಹಸಿದು ಬಾಯಾರಿದವರು ಧನ್ಯರು ; ಯಾಕಂದರೆ ಅವರು ತೃಪ್ತಿ ಹೊಂದುವರು .

(src)="b.MAT.5.7.1"> Thieithieei e kɔc e piɔth dap kok ; abik kokde piɔu yok .
(trg)="b.MAT.5.7.1"> ಕರುಣೆಯುಳ್ಳವರು ಧನ್ಯರು ; ಯಾಕಂದರೆ ಅವರು ಕರುಣೆ ಹೊಂದುವರು .

(src)="b.MAT.5.8.1"> Thieithieei e kɔc lɔ piɔth wai ; abik Nhialic tiŋ .
(trg)="b.MAT.5.8.1"> ಶುದ್ಧ ಹೃದಯವುಳ್ಳವರು ಧನ್ಯರು ; ಯಾಕಂದರೆ ಅವರು ದೇವರನ್ನು ನೋಡುವರು .

(src)="b.MAT.5.9.1"> Thieithieei e kɔc e kɔc maat ; abike tɔ ye wɛɛt ke Nhialic .
(trg)="b.MAT.5.9.1"> ಸಮಾಧಾನ ಮಾಡುವವರು ಧನ್ಯರು ; ಯಾಕಂದರೆ ಅವರು ದೇವರ ಮಕ್ಕಳೆಂದು ಕರೆಯಲ್ಪಡುವರು .

(src)="b.MAT.5.10.1"> Thieithieei e kɔc ee yɔŋ ne baŋ de piathepiou ; ciɛɛŋ de paannhial ee keden .
(trg)="b.MAT.5.10.1"> ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು ; ಯಾಕಂದರೆ ಪರಲೋಕರಾಜ್ಯವು ಅವರದು .