<?xml version="1.0" encoding="utf-8"?> <document>
ಕೂದಲುದುರುವುದು ಈಗ ದೊಡ್ಡ ಸಮಸ್ಯೆ. ಕಲುಷಿತವಾಗ್ತಿರುವ ವಾತಾವರಣ ಬೊಕ್ಕು ತಲೆಗೆ ಕಾರಣವಾಗ್ತಾ ಇದೆ. ಕೂದಲುದುರುವ ಸಮಸ್ಯೆಗೆ ಮುಕ್ತಿ ಹಾಡಲು ಜನರು ಏನೆಲ್ಲ ಪ್ರಯತ್ನಪಡ್ತಾರೆ. ಆದ್ರೆ ಸಮಸ್ಯೆ ಮಾತ್ರ ಕಡಿಮೆಯಾಗೋದಿಲ್ಲ. ಎಲ್ಲ ಸಮಸ್ಯೆಗೂ ಪರಿಹಾರ ಇದ್ದೇ ಇದೆ. ನಿಮ್ಮ ತಲೆ ಕೂಡ ಬೊಕ್ಕಾಗ್ತಿದ್ದರೆ ಚಿಂತೆ ಬೇಡ.

ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ ವೃದ್ಧಿಸುವ ಅಡುಗೆ ಮನೆಯಲ್ಲಿರುವ ವಸ್ತುಗಳಲ್ಲಿ ಶುಂಠಿ ಕೂಡ ಒಂದು. ಕೇವಲ ಆರೋಗ್ಯ, ಆಹಾರಕ್ಕೆ ಮಾತ್ರವಲ್ಲ, ಕೂದಲುದುರುವ ಸಮಸ್ಯೆಗೂ ಶುಂಠಿ ಒಳ್ಳೆ ಮದ್ದು. ಶುಂಠಿ ಕೂದಲುದುರುವುದನ್ನು ಕಡಿಮೆ ಮಾಡುವ ಜೊತೆಗೆ ಹೊಳಪುಳ್ಳ ಹೇರಳ ಕೂದಲು ಬೆಳೆಯಲು ನೆರವಾಗುತ್ತದೆ.

ಒಂದು ಚಮಚ ಶುಂಠಿ ರಸಕ್ಕೆ ಆಲಿವ್ ಆಯಿಲ್ ಹಾಕಿ. ಈ ಮಿಶ್ರಣವನ್ನು ಕೂದಲಿನ ಬುಡಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ತಲೆ ಸ್ನಾನ ಮಾಡಿ. ಮೊದಲ ಬಾರಿಯೇ ಇದರ ಪರಿಣಾಮ ನಿಮಗೆ ಗೊತ್ತಾಗಲು ಶುರುವಾಗುತ್ತದೆ.

ಕೂದಲಿನ ಎಲ್ಲ ಸಮಸ್ಯೆಗಳಿಗೂ ಶುಂಠಿ ಔಷಧಿ ರೂಪದಲ್ಲಿ ಕೆಲಸ ಮಾಡುತ್ತದೆ. ಎರಡು ಚಮಚ ಶುಂಠಿ ರಸಕ್ಕೆ ಮೂರು ಚಮಚ ಆಲಿವ್ ಆಯಿಲ್ ಹಾಗೂ ಒಂದೆರಡು ಹನಿ ನಿಂಬೆ ಹಣ್ಣಿನ ಹನಿಯನ್ನು ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಕೂದಲಿಗೆ ಹಚ್ಚಿಕೊಳ್ಳಿ. 20-25 ನಿಮಿಷ ಬಿಟ್ಟು ತೊಳೆಯಿರಿ.

ಕಲುಷಿತ ಗಾಳಿ, ಧೂಳು, ಕೆಲಸದ ಒತ್ತಡಗಳಿಂದಾಗಿ ಕೂದಲು ನಿರ್ಜೀವವಾಗುತ್ತದೆ. ಒಣಗಿದ ಕೂದಲು ಸೌಂದರ್ಯವನ್ನು ಹಾಳು ಮಾಡುತ್ತದೆ. ಒಣಗಿದ ಕೂದಲಿನ ಸಮಸ್ಯೆ ಎದುರಿಸುತ್ತಿರುವವರು ಎರಡು ಚಮಚ ಶುಂಠಿ ರಸಕ್ಕೆ ಒಂದೆರಡು ಹನಿ ನಿಂಬೆ ರಸವನ್ನು ಹಾಕಿ ಕೂದಲಿಗೆ ಮಸಾಜ್ ಮಾಡಿ. 15 ನಿಮಿಷ ಬಿಟ್ಟು ಕೂದಲನ್ನು ವಾಶ್ ಮಾಡಿ.

ತಾಜಾ ಶುಂಠಿಯನ್ನು ಬಳಕೆ ಮಾಡುವುದು ಒಳ್ಳೆಯದು. ಶುಂಠಿ ಪುಡಿ ಬಳಸಿದ್ರೆ ಹಾನಿಯಿಲ್ಲ. ಆದ್ರೆ ತಾಜಾ ಶುಂಠಿಯಲ್ಲಿ ನ್ಯೂಟ್ರಿಶಿಯನ್ ಅಂಶ ಜಾಸ್ತಿ ಇರುವುದರಿಂದ ತಕ್ಷಣ ಪರಿಣಾಮ ಕಾಣಬಹುದಾಗಿದೆ.
</document><?xml version="1.0" encoding="utf-8"?> <document>
ಆಮದು

ಆಮದು ಎಂದರೆ ಒಂದು ಬಾಹ್ಯ ಮೂಲದಿಂದ, ವಿಶೇಷವಾಗಿ ರಾಷ್ಟ್ರೀಯ ಗಡಿಯಾಚೆಯಿಂದ ಒಂದು ಅಧಿಕಾರ ವ್ಯಾಪ್ತಿಯಲ್ಲಿ ತಂದ ಸರಕು. ಸರಕನ್ನು ತರುವ ವ್ಯಕ್ತಿ/ಸಂಸ್ಥೆಯನ್ನು ಆಮದುದಾರ ಎಂದು ಕರೆಯಲಾಗುತ್ತದೆ. ಪಡೆದುಕೊಂಡ ದೇಶದಲ್ಲಿನ ಆಮದು ಕಳುಹಿಸುವ ದೇಶದ ರಫ್ತು ಆಗಿರುತ್ತದೆ. ಆಮದು ಮತ್ತು ರಫ್ತು ಅಂತಾರಾಷ್ಟ್ರೀಯ ವ್ಯಾಪಾರದ ನಿರ್ಣಾಯಕ ಹಣಕಾಸು ವ್ಯವಹಾರಗಳಾಗಿವೆ.

ಅಂತರರಾಷ್ಟ್ರೀಯ ವ್ಯಾಪಾರದಲ್ಲಿ, ಸರಕುಗಳ ಆಮದು ಮತ್ತು ರಫ್ತು ಸೀಮಾಸುಂಕ ಅಧಿಕಾರಿಗಳ ಆಮದು ಪ್ರಮಾಣ ಮತ್ತು ಆಜ್ಞೆಗಳಿಂದ ಸೀಮಿತವಾಗಿರುತ್ತವೆ. ಆಮದು ಮತ್ತು ರಫ್ತಿನ ಆಡಳಿತ ವ್ಯಾಪ್ತಿಗಳು ಸರಕುಗಳ ಮೇಲೆ ಸುಂಕ (ತೆರಿಗೆ) ವಿಧಿಸಬಹುದು. ಜೊತೆಗೆ, ಸರಕುಗಳ ಆಮದು ಮತ್ತು ರಫ್ತು ಆಮದು ಮತ್ತು ರಫ್ತಿನ ಆಡಳಿತ ವ್ಯಾಪ್ತಿಗಳ ನಡುವಿನ ವ್ಯಾಪಾರ ಒಪ್ಪಂದಗಳಿಗೆ ಒಳಪಟ್ಟಿರುತ್ತವೆ.

ಆಮದಿನ ವಿಧಗಳು[ಬದಲಾಯಿಸಿ]

ಆಮದಿನ ಎರಡು ಮೂಲಭೂತ ವಿಧಗಳಿವೆ:

- ಕೈಗಾರಿಕಾ ಮತ್ತು ಗ್ರಾಹಕ ಸರಕುಗಳು

- ಮಧ್ಯಂತರ ಸರಕು ಮತ್ತು ಸೇವೆಗಳು

ಸ್ಥಳೀಯ ಮಾರುಕಟ್ಟೆಗೆ ಪೂರೈಕೆಮಾಡಲು ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಉತ್ಪಾದನೆಯಾದ ಪೈಪೋಟಿಯ ಸರಕುಗಳಿಗಿಂತ ಅಗ್ಗದ ಬೆಲೆ ಮತ್ತು ಉತ್ತಮ ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಆಮದು ಮಾಡಿಕೊಳ್ಳುತ್ತವೆ. ಕಂಪನಿಗಳು ಸ್ಥಳೀಯ ಮಾರುಕಟ್ಟೆಯಲ್ಲಿ ಲಭ್ಯವಿರದ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತವೆ.

ಆಮದುದಾರರ ಮೂರು ವಿಶಾಲ ವಿಧಗಳಿವೆ:

- ವಿಶ್ವದ ಯಾವುದೇ ಉತ್ಪನ್ನವನ್ನು ಆಮದು ಮಾಡಿ ಮಾರಾಟ ಮಾಡಲು ಹುಡುಕುತ್ತಿರುವವರು.

- ತಮ್ಮ ಉತ್ಪನ್ನಗಳನ್ನು ಅತ್ಯಂತ ಅಗ್ಗದ ಬೆಲೆಗೆ ತರಿಸಿಕೊಳ್ಳಲು ವಿದೇಶಿ ಮೂಲಗಳನ್ನು ಹುಡುಕುತ್ತಿರುವವರು.

- ತಮ್ಮ ಜಾಗತಿಕ ಸರಬರಾಜು ಸರಪಳಿಯ ಭಾಗವಾಗಿ ವಿದೇಶಿ ಮೂಲಗಳನ್ನು ಬಳಸುತ್ತಿರುವವರು.

ನೇರ ಆಮದು ಪದವು ಪ್ರಮುಖ ಚಿಲ್ಲರೆ ವ್ಯಾಪಾರಸಂಸ್ಥೆ (ಉದಾ. ವಾಲ್ಮಾರ್ಟ್) ಮತ್ತು ಸಾಗರೋತ್ತರ ಉತ್ಪಾದಕವನ್ನು ಒಳಗೊಂಡ ವ್ಯಾಪಾರ ಆಮದಿನ ಒಂದು ಪ್ರಕಾರವನ್ನು ಸೂಚಿಸುತ್ತದೆ. ಚಿಲ್ಲರೆ ವ್ಯಾಪಾರಸಂಸ್ಥೆಯು ಸಾಮಾನ್ಯವಾಗಿ ಸಾಗರೋತ್ತರದಲ್ಲಿ ತಯಾರಿಸಬಹುದಾದ, ಸ್ಥಳೀಯ ಕಂಪನಿಗಳು ವಿನ್ಯಾಸಮಾಡಿದ ಉತ್ಪನ್ನಗಳನ್ನು ಖರೀದಿಸುತ್ತದೆ. ನೇರ ಆಮದು ಯೋಜನೆಯಲ್ಲಿ, ಚಿಲ್ಲರೆ ವ್ಯಾಪಾರಸಂಸ್ಥೆಯು ಸ್ಥಳೀಯ ಪೂರೈಕೆದಾರನನ್ನು ತಪ್ಪಿಸಿ/ಕಡೆಗಣಿಸಿ ಅಂತಿಮ ಉತ್ಪನ್ನವನ್ನು ನೇರವಾಗಿ ಉತ್ಪಾದಕರಿಂದ ಖರೀದಿಸುತ್ತದೆ. ಇದರಿಂದ ಸಂಭಾವ್ಯವಾಗಿ ವರ್ಧಿತ ವೆಚ್ಚ ಉಳಿತಾಯವಾಗುತ್ತದೆ. ಹಲವುವೇಳೆ ಉತ್ಪನ್ನಗಳ ವಿವರದ ಪಟ್ಟಿಗಳಲ್ಲಿ ವಿಭಜಿಸಲಾದ, ಆಮದುಗಳ ಮೌಲ್ಯದ ಮೇಲಿನ ಮಾಹಿತಿ ಮತ್ತು ಅವುಗಳ ಪ್ರಮಾಣಗಳು, ಅಂತರಸರ್ಕಾರಿ ಸಂಸ್ಥೆಗಳ ಅಂಕಿಅಂಶಗಳ ಸೇವೆಗಳು, ರಾಷ್ಟ್ರಗಳನ್ನು ಮೀರಿದ ಅಂಕಿಅಂಶ ಸಂಸ್ಥೆಗಳು (ಉದಾ. ಯೂರೋಸ್ಟಾಟ್) ಮತ್ತು ರಾಷ್ಟ್ರೀಯ ಅಂಕಿಅಂಶ ಸಂಸ್ಥೆಗಳು ಪ್ರಕಟಿಸಿದ ಅಂತಾರಾಷ್ಟ್ರೀಯ ವ್ಯಾಪಾರದ ಮೇಲಿನ ಅಂಕಿಅಂಶ ಸಂಗ್ರಹಣದಲ್ಲಿ ಲಭ್ಯವಿರುತ್ತವೆ.
</document><?xml version="1.0" encoding="utf-8"?> <document>
ಅವರೊಬ್ಬರೇ ತಲಾ:ಹೀಗೆ ಕೆ.ಎಲ್.ರಾಹುಲ್ ಹೇಳಿದ್ದೇಕೆ ಗೊತ್ತಾ…!

ಮಹಾಂತೇಶ ಇರಳಿ

ಬೆಂಗಳೂರು: ನಾನಲ್ಲ ಮಹೇಂದ್ರ ಸಿಂಗ್ ಧೋನಿ ಒಬ್ಬರೇ ತಲಾ ಎಂದು ಖ್ಯಾತ ಕ್ರಿಕೆಟರ್ ಕೆ.ಎಲ್. ರಾಹುಲ್ ಹೇಳಿದ್ದಾರೆ. ಐಪಿಎಲ್ ಪಂದ್ಯದಲ್ಲಿ ಉತ್ತಮ ಆಟವನ್ನು ಪ್ರದರ್ಶನ ಮಾಡುತ್ತಿದ್ದಾರೆ ಕಿಂಗ್ಸ್ ಇಲೆವೆನ್ ಪಂಜಾಬ್ ಕ್ಯಾಪ್ಟನ್ ಆಗಿರುವ ಕೆ ಎಲ್ ರಾಹುಲ್. ಅದ್ಭುತ ಬ್ಯಾಟಿಂಗ್ ಮತ್ತು ಅದ್ಭುತ ವಿಕೆಟ್ ಕೀಪಿಂಗ್ ಪ್ರದರ್ಶನ ಮಾಡುತ್ತಾರೆ. ಐಪಿಎಲ್ ನಲ್ಲಿ ಕೆ.ಎಲ್. ರಾಹುಲ್ ಅದ್ಭುತ ಆಟಕ್ಕೆ ಮನಸೋತ ತಮಿಳುನಾಡಿನ ಅಭಿಮಾನಿಯೊಬ್ಬ ತಲಾ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿರುದು ನೀಡಿದ್ದಾನೆ.

ಅಭಿಮಾನಿ ನೀಡಿದ ಬಿರುದನ್ನು ಕೆ ಎಲ್ ರಾಹುಲ್ ಅಷ್ಟೇ ವಿನಯವಾಗಿ ತಿರಸ್ಕರಿಸಿ ಕ್ರಿಕೆಟ್ನಲ್ಲಿ ಅವರೊಬ್ಬರೇ ತಲಾ ಇರೋದು. ಅವರೇ ಮಹೇಂದ್ರ ಸಿಂಗ್ ಧೋನಿ. ಅವರಿಗೆ ನೀಡಿರುವ ತಲಾ ಬಿರುದು ನನಗೆ ನೀಡಬೇಡಿ ಎಂದು ವಿನಯವಾಗಿ ವಿನಂತಿಸಿಕೊಂಡಿದ್ದಾರೆ ಕೆ ಎಲ್ ರಾಹುಲ್ . ಕೆ ಎಲ್ ರಾಹುಲ್ ಕಿಂಗ್ಸ್ ಇಲೆವೆನ್ ಪಂಜಾಬ್ ನ ಕ್ಯಾಪ್ಟನ್ ಆದ ಬಳಿಕ ಈ ಸೀಸನ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಬರ್ಜರಿ ಆಟವಾಡುತ್ತಿದೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಕೆಎಲ್ ರಾಹುಲ್ ಹೋಗುತ್ತಿದ್ದಾರೆ ಈ ಬಾರಿ ಐಪಿಎಲ್ ಕಪ್ ಗೆಲ್ಲುವ ಭರವಸೆಯನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಮೂಡಿಸಿದೆ ಹೀಗಾಗಿ ಕೆಲ ರಾಹುಲ್ ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ
</document><?xml version="1.0" encoding="utf-8"?> <document>
ಕನ್ನಡ » ಆಂಗ್ಲ ಭಾಷೆ UK ಗುಣವಾಚಕಗಳು ೨

MP3 ಗಳನ್ನು ಡೌನ್ಲೋಡ್ ಮಾಡಿ (.zip ಫೈಲ್ಗಳು)

ಒಂದು ಭಾಷೆ, ಹಲವಾರು ವೈವಿಧ್ಯತೆ.ನಾವು ಕೇವಲ ಒಂದೇ ಭಾಷೆಯನ್ನು ಮಾತನಾಡಿದರೂ, ಅನೇಕ ಭಾಷೆಗಳನ್ನು ಮಾತನಾಡುತ್ತೇವೆ. ಏಕೆಂದರೆ ಯಾವ ಭಾಷೆಯು ಸ್ವಸಂಪೂರ್ಣವಾಗಿರುವುದಿಲ್ಲ. ಪ್ರತಿಯೊಂದು ಭಾಷೆಯೂ ಅನೇಕ ವಿಧದ ಆಯಾಮಗಳನ್ನು ತೋರುತ್ತವೆ. ಭಾಷೆ ಒಂದು ಜೀವಂತವಾಗಿರುವ ಪದ್ಧತಿ. ಮಾತನಾಡುವವರು ಸದಾಕಾಲ ತಮ್ಮ ಸಂಭಾಷಣೆಯ ಸಹಭಾಗಿಗಳಿಗೆ ಹೊಂದಿಕೊಳ್ಳುತ್ತಾರೆ. ಆದ್ದರಿಂದ ಜನರು ತಮ್ಮ ಭಾಷೆಯನ್ನು ಬದಲಾಯಿಸುತ್ತ ಇರುತ್ತಾರೆ ಈ ಮಾರ್ಪಾಡುಗಳು ಬೇರೆಬೇರೆ ರೂಪಗಳಲ್ಲಿ ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ಪ್ರತಿಯೊಂದು ಭಾಷೆಯು ತನ್ನದೆ ಆದ ಚರಿತ್ರೆಯನ್ನು ಹೊಂದಿರುತ್ತದೆ. ಅದು ತನ್ನನ್ನು ಬದಲಾಯಿಸಿಕೊಂಡಿದೆ ಮತ್ತು ಮುಂದೆಯು ಬದಲಾಗುತ್ತಾ ಹೋಗುತ್ತದೆ. ಈ ಸಂಗತಿಯನ್ನು ವಯಸ್ಕರು ಮತ್ತು ಯುವಜನರು ಮಾತನಾಡುವ ರೀತಿಯಿಂದ ಅರಿಯಬಹುದು. ಹಾಗೂ ಹೆಚ್ಚುವಾಸಿ ಭಾಷೆಗಳು ವಿವಿಧ ಆಡುಭಾಷೆಗಳನ್ನು ಹೊಂದಿರುತ್ತವೆ. ಅನೇಕ ಆಡುಭಾಷೆ ಮಾತನಾಡುವವರು ತಮ್ಮ ಪರಿಸರಕ್ಕೆ ಹೊಂದಿಕೊಳ್ಳುತ್ತಾರೆ. ನಿಶ್ಚಿತ ಸಂದರ್ಭಗಳಲ್ಲಿ ಅವರು ಪ್ರಬುದ್ಧ ಭಾಷೆಯನ್ನು ಬಳಸುತ್ತಾರೆ.

ಸಮಾಜದ ವಿವಿಧ ಗುಂಪುಗಳು ತಮ್ಮದೆ ಭಾಷೆಗಳನ್ನು ಹೊಂದಿರುತ್ತವೆ. ಯುವಜನರ ಅಥವಾ ಬೇಟೆಗಾರರ ಭಾಷೆಗಳನ್ನು ಇಲ್ಲಿ ಉದಾಹರಿಸಬಹುದು. ಕೆಲಸ ಮಾಡುವಾಗ ಬಳಸುವ ಭಾಷೆ ಮನೆಯಲ್ಲಿ ಮಾತನಾಡುವ ಭಾಷೆಗಿಂತ ವಿಭಿನ್ನವಾಗಿರುತ್ತದೆ. ಅನೇಕರು ತಮ್ಮ ವೃತ್ತಿಯಲ್ಲಿ ಪರಿಭಾಷೆನ್ನು ಉಪಯೋಗಿಸುತ್ತಾರೆ. ಮಾತನಾಡುವ ಮತ್ತು ಬರೆಯುವ ಭಾಷೆಗಳಲ್ಲಿ ಕೂಡ ವ್ಯತ್ಯಾಸಗಳು ಕಂಡುಬರುತ್ತವೆ. ಮಾತನಾಡುವ ಭಾಷೆ ಬರೆಯುವ ಭಾಷೆಗಿಂತ ಹೆಚ್ಚು ಸರಳವಾಗಿರುತ್ತದೆ. ಈ ವ್ಯತ್ಯಾಸ ಅತ್ಯಂತ ದೊಡ್ಡದಾಗಿರಬಹುದು. ಬರೆಯುವ ಭಾಷೆ ಬಹುಕಾಲ ತನ್ನನ್ನು ಬದಲಾಯಿಸಿಕೊಳ್ಳದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತದೆ. ಮಾತನಾಡುವವರು ಆವಾಗ ಭಾಷೆಯನ್ನು ಬರೆಯಲು ಕಲಿಯಬೇಕಾಗುತ್ತದೆ. ಅನೇಕ ಸಲ ಹೆಂಗಸರ ಮತ್ತು ಗಂಡಸರ ಭಾಷೆಯಲ್ಲಿ ಕೂಡ ವ್ಯತ್ಯಾಸಗಳಿರುತ್ತವೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಈ ವ್ಯತ್ಯಾಸ ಅಷ್ಟು ಹೆಚ್ಚಾಗಿರುವುದಿಲ್ಲ. ಅದರೆ ಹಲವು ದೇಶಗಳಲ್ಲಿ ಹೆಂಗಸರು ಗಂಡಸರಿಗಿಂತ ವಿಭಿನ್ನವಾಗಿ ಮಾತನಾಡುತ್ತಾರೆ. ಇನ್ನು ಕೆಲವು ಸಂಸ್ಕೃತಿಗಳಲ್ಲಿ ಸಭ್ಯತೆಯ ಭಾಷೆ ತನ್ನದೆ ಆದ ರಚನೆಯನ್ನು ಹೊಂದಿರುತ್ತದೆ. ಹೇಳುವುದಾದರೆ ಮಾತನಾಡುವುದು ಅಷ್ಟು ಸುಲಭವಲ್ಲ! ಮಾತನಾಡುವಾಗ ನಾವು ಅನೇಕ ವಿಷಯಗಳ ಮೇಲೆ ಗಮನ ಹರಿಸಬೇಕಾಗುತ್ತದೆ.
</document><?xml version="1.0" encoding="utf-8"?> <document>
ಉದ್ದ, ದಪ್ಪ, ಕಪ್ಪು ಕೂದಲು ಮಹಿಳೆಯರಿಗೆ ಶೋಭೆ. ದಪ್ಪ ಕೂದಲು ಪಡೆಯಲು ಮಹಿಳೆಯರು ಹರಸಾಹಸ ಪಡ್ತಾರೆ. ಮಾಲಿನ್ಯ ಹಾಗೂ ಆಹಾರದಲ್ಲಿನ ಏರುಪೇರಿನಿಂದಾಗಿ ಕೂದಲಿಗೆ ಪೋಷಕಾಂಶ ಸರಿಯಾಗಿ ಸಿಗುವುದಿಲ್ಲ. ಇದರಿಂದಾಗಿ ಕೂದಲು ಉದುರಲು ಶುರುವಾಗುತ್ತದೆ.

ಸರಿಯಾದ ಪೋಷಕಾಂಶ ಸಿಗಲಿ ಎನ್ನುವ ಕಾರಣಕ್ಕೆ ಕೂದಲಿಗೆ ಮಸಾಜ್ ಮಾಡಲಾಗುತ್ತದೆ. ಆದ್ರೆ ಕೆಲವೊಂದು ಮಸಾಜ್ ಹಾಗೂ ಮಸಾಜ್ ಮಾಡುವ ರೀತಿಯಿಂದ ಕೂದಲು ಹುಟ್ಟುವ ಬದಲು ಉದುರಲು ಶುರುವಾಗುತ್ತದೆ. ಹಾಗಾಗಿ ಹೇಗೆಂದರೆ ಹಾಗೆ ಮಸಾಜ್ ಮಾಡುವುದು ಒಳ್ಳೆಯದಲ್ಲ.

ಕೂದಲಿಗೆ ಎಣ್ಣೆ ಹಚ್ಚುವುದರಿಂದ ಪೋಷಕಾಂಶ ಸಿಗುತ್ತದೆ. ಆದ್ರೆ ಅವಶ್ಯಕತೆಗಿಂತ ಹೆಚ್ಚು ಎಣ್ಣೆ ಹಚ್ಚುವುದು ಒಳ್ಳೆಯದಲ್ಲ. ಜೊತೆಗೆ ಗಟ್ಟಿಯಾಗಿ ಕೂದಲಿನ ಬುಡಕ್ಕೆ ಮಸಾಜ್ ಮಾಡಬಾರದು. ಇದರಿಂದ ಕೂದಲು ಬಲಗೊಳ್ಳುವ ಬದಲು ದುರ್ಬಲವಾಗುತ್ತದೆ.